ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕಾರುಣ್ಯ ಆಶ್ರಮದ ಜೊತೆ ಜೈನ್ ಸಮಾಜ ಸದಾಕಾಲ ಜೊತೆಗಿರುತ್ತದೆ-ವಿದ್ಯಾಶ್ರೀ ಜೈನ್

ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಕಾರುಣ್ಯ ನೆಲೆ ವೃದ್ದಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಬಳಗಾನೂರಿನ ವಿದ್ಯಾಶ್ರೀ ಜೈನ್ ರೂಪಚಂದ್ ಜೈನ್ ಕುಟುಂಬದಿಂದ 12ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಕಾರ್ಯಕ್ರಮದ ಅಂಗವಾಗಿ “ಮಮತೆಯ ಮಡಿಲು” ಕಾರ್ಯಕ್ರಮದಲ್ಲಿ ಆಶ್ರಮದಲ್ಲಿ ಮಹಾಪ್ರಸಾದ ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ನೆರವೇರಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಬಳಗಾನೂರಿನ ಜೈನ್ ಸಮಾಜದ ಮುಖಂಡರಾದ ವಿದ್ಯಾಶ್ರೀ ಜೈನ್ ಕಾರುಣ್ಯ ಆಶ್ರಮದ ಜೊತೆ ನಮ್ಮ ಜೈನ್ ಸಮಾಜ ಸದಾವಕಾಲ ಜೊತೆಗಿರುತ್ತದೆ.ನಮ್ಮ ಕುಟುಂಬದ ಯಾವುದೇ ಕಾರ್ಯಕ್ರಮಗಳಾಗಲಿ ನಾವು ಕಾರುಣ್ಯ ಆಶ್ರಮದಲ್ಲಿ ಆಚರಿಸಿಕೊಂಡಾಗ ಆತ್ಮ ತೃಪ್ತಿಯ ಜೊತೆ ಶುಭ ಸಂಕೇತಗಳು ದೊರೆಯುತ್ತಿವೆ. ಕಾರುಣ್ಯ ಆಶ್ರಮ ವೃದ್ಧರಿಗೆ ಆಶ್ರಯ ಕೊಟ್ಟು ಸೇವೆಗೈಯ್ಯುವುದಲ್ಲದೆ ಹಿರಿಯ ನಾಗರಿಕರ ಸೇವೆಯ ಬಗ್ಗೆ ಜಾಗೃತಿ ಅರಿವು ಮತ್ತು ಸಿಂಧನೂರು ಮಸ್ಕಿ ತಾಲೂಕಿನಾದ್ಯಂತ ವಿವಿಧ ಸಲ ಸಮಾರಂಭಗಳಲ್ಲಿ ಉಳಿದಿರುವ ಆಹಾರವನ್ನು ಶೇಖರಣೆ ಮಾಡಿ ಅವಶ್ಯಕತೆ ಇದ್ದ ಕುಟುಂಬಗಳಿಗೆ ಮಾಡುತ್ತಿರುವ ಸೇವೆ ನಾವೆಲ್ಲ ಕಣ್ಣಾರೆ ಕಾಣುತ್ತಿದ್ದೇವೆ ಇಂತಹ ಪುಣ್ಯಭೂಮಿಯಲ್ಲಿ ಕಾರುಣ್ಯ ಎಂಬ ಪುಣ್ಯಾಶ್ರಮ ಹುಟ್ಟಿಕೊಂಡಿರೋದು ನಮ್ಮೆಲ್ಲರ ಭಾಗ್ಯ ಇಲ್ಲಿರುವ ನೊಂದು ಬೆಂದ ಅನಾಥರಿಗೆ ತಮ್ಮ ನೋವು ಸಂಕಟಗಳನ್ನು ಮರೆತು ಸಂತೋಷವಾಗಿರುವುದು ನೋಡಿದರೆ ನಮಗೆ ಬಹಳ ಸಂತೋಷವೆನಿಸುತ್ತದೆ. ಒಂದು ಕುಟುಂಬವನ್ನು ನಿರ್ವಹಣೆ ಮಾಡಲಾರದ ಈ ಕಾಲದಲ್ಲಿ ಅದೆಷ್ಟೋ ಜನರಿಗೆ ದಾರಿ ದೀಪವಾಗಿರುವ ಈ ಕಾರುಣ್ಯ ಆಶ್ರಮ ವಿವಿಧ ಸಮಾಜ ಪರ ಕಾರ್ಯಗಳನ್ನು ಮಾಡುವುದರ ಮೂಲಕ ನಮ್ಮ ರಾಜ್ಯದಲ್ಲಿ ಮನೆಮನೆ ಮಾತಾಗಿರುವ ಈ ಆಶ್ರಮ ನಮ್ಮೆಲ್ಲರ ಹೆಮ್ಮೆಯ ಕುಟುಂಬವಾಗಿದೆ ಎಂದು ಮಾತನಾಡಿ ಕಾರುಣ್ಯ ಆಶ್ರಮದ ಪದಾಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ವಿದ್ಯಾಶ್ರೀ ಜೈನ್ ರೂಪಚಂದ್ ಜೈನ್ ದಂಪತಿಗಳಿಗೆ ಕಾರುಣ್ಯ ಆಕ್ರಮದ ವತಿಯಿಂದ ಸನ್ಮಾನಿಸಿ ಗೌರವಿಸಿ ಧರ್ಮಸ್ಥಳದ ಶ್ರೀ ಡಾ. ವೀರೇಂದ್ರ ಹೆಗಡೆಯವರ ಭಾವಚಿತ್ರವನ್ನು ನೆನಪಿನ ಕಾಣಿಕೆಯಾಗಿ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ರೂಪ್ ಚಂದ್ ಜೈನ್ ಅವರ ಮಗಳಾದ ಹಾರ್ವಿ ಜೈನ್ ಕಾರುಣ್ಯ ಆಶ್ರಮದ ಸಿಬ್ಬಂದಿಗಳಾದ ಆಡಳಿತಾಧಿಕಾರಿ ಡಾ. ಚನ್ನಬಸವ ಸ್ವಾಮಿ ಹಿರೇಮಠ. ಮೇಲ್ವಿಚಾರಕರಾದ ಸುಜಾತ ಹಿರೇಮಠ. ವ್ಯವಸ್ಥಾಪಕರಾದ ಅಮರೇಶ ಅದ್ರಿ. ಚಾಲಕರಾದ ಮರಿಯಪ್ಪ ನಾಯಕ. ಅಡುಗೆ ಸಿಬ್ಬಂದಿಗಳಾದ ಶರಣಮ್ಮ ಸಿಬ್ಬಂದಿಗಳಾದ ಕರಿಯಪ್ಪ ಹರ್ಷವರ್ಧನ ಅನೇಕರು ಉಪಸ್ಥಿತರಿದ್ದರು
ವರದಿ-ವೆಂಕಟೇಶ. ಹೆಚ್.ಬೂತಲದಿನ್ನಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ