ಸಸಿಹಿತ್ಲು, ಮಂಗಳೂರು ಫೆಬ್ರವರಿ 05 :ದಿನಾಂಕ 03 ರಂದು ಆರಂಭಗೊಂಡ ನಂದಿನಿ ನದಿ ಉತ್ಸವ ಇವತ್ತು ತೆರೆಕಾಣಲಿದೆ.ಸಸಿಹಿತ್ಲಿನ ರಮ್ಯ ಮನೋಹರ ಪ್ರಾಕೃತಿಕ ಸೌಂಧರ್ಯದ ಮದ್ಯೆ ನದಿಯ ನೀರಿನಲ್ಲಿ ದೋಣಿಗಳ ಕಲರವ. ನದಿಯ ಕಿನಾರೆಯಲ್ಲಿ ಜನಸ್ತೋಮ ಒಂದೆಡೆಯಾದರೆ, ತಮ್ಮ ಸಾಹಸ ಪ್ರದರ್ಶನಕ್ಕೆ ಹುಮ್ಮಸ್ಸಿನಿಂದ ನದಿ ನೀರಲ್ಲಿ ತೇಲುತ್ತಿರುವ ದೋಣಿಗಳ ಮೇಲೆ ಸ್ಪರ್ಧೆಗೆ ಪಣತೊಟ್ಟ ಸ್ಪರ್ಧಾಳುಗಳು ನದಿಯ ತಟದ ಮೇಲೆ ನಿಂತ ಜನರ ಪ್ರೋತ್ಸಾಹ ದಾಯಿ ಕೂಗು ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆಮೇಲೆ ಸ್ಪರ್ಧೆಯ ಆಯೋಜಕರ ಘೋಷಣೆಗಳು ನದಿಯ ಇನ್ನೊಂದು ತಟ ವಿಶಾಲ ವೇದಿಕೆಯಲ್ಲಿ ಮನರಂಜನಾ ಕಾರ್ಯಕ್ರಮಗಳು ನೆರೆದ ಜನರ ಅನುಕೂಲಕ್ಕೆ ವಿವಿಧ ಸ್ಟಾಲ್ ಗಳಲ್ಲಿ ಆಹಾರ,ಪಾನೀಯ ವ್ಯವಸ್ಥೆ ಅಚ್ಚುಕಟ್ಟಾಗಿತ್ತು ಕರಾವಳಿ ಭಾಗದ ವಿಶೇಷ ನದಿ ಉತ್ಸವ ಈ ರೀತಿ ಮೂಡಿಬಂದಿತು. ಮುಂದಿನ ವರ್ಷಗಳಲ್ಲಿ ಉತ್ತಮ ಪ್ರವಾಸೀ ಕೇಂದ್ರವಾಗಿ ಹೊರಹೊಮ್ಮಲಿದೆ.
ವರದಿ : ಚಂದ್ರಶೇಖರ ಹೆಬ್ಬಾರ್ ಕೊಲ್ಯ




















