ಉತ್ತರ ಕನ್ನಡ:ಮುಂಡಗೋಡ ಶ್ರೀಮಾರಿಕಾಂಬಾ ಜಾತ್ರೆ ಮಹೋತ್ಸವದಲ್ಲಿ ಜನರ ಜೇಬಿಗೆ ಕತ್ತರಿ ಹಾಕುವ ಕೆಲ ನಿರ್ಧಾರಗಳನ್ನು ಕೈಗೊಂಡ ಮಾರಿಕಾಂಬಾ ದೇವಸ್ಥಾನ ದ ಜಾತ್ರಾ ಕಮೀಟಿ ಯವರ ವಿವೇಚನೆ ರಹಿತ ನಿರ್ಧಾರಕ್ಕೆ ಯಾರೋ ನಾಲ್ಕು ಜನ ಹಣ ಮಾಡಿಕೊಳ್ಳಲು ಊರ ದೇವರ ಜಾತ್ರೆಯನ್ನು ಬಳಸಿ ಕೊಳ್ಳುತ್ತಿರುವುದಕ್ಕೆ ಕೆಲ ವಿಚಾರವಂತ ಯುವಕರು ಹಾಗೂ ಊರ ನಾಗರಿಕರು ಆಕ್ಷೇಪ ವ್ಯಕ್ತಪಡಿಸಿದ್ದು,ಜಾತ್ರಾ ಮಹೋತ್ಸವ ಗಳು ಜನರನ್ನು ಸಾಮಾಜಿಕವಾಗಿ ಆರ್ಥಿಕವಾಗಿ ಸದೃಢ ಮಾಡಲು ಹಾಗೂ ಜನರಲ್ಲಿ ಆಸ್ತಿಕತ್ವವನ್ನು ಪುನಶ್ಚೇತನ ಗೊಳಿಸಲು ಬಳಸಬೇಕು ಹೊರತು ಜನರನ್ನು ಆರ್ಥಿಕ ದಿವಾಳಿ ಯನ್ನಾಗಿಸಲು ಬಳಸಬಾರದು ಮತ್ತು ಇಂತಹ ಚಟುವಟಿಕೆಗಳನ್ನು ನಿಯಂತ್ರಿಸಬೇಕಾದ ವ್ಯವಸ್ಥೆಗಳು,ಆಡಳಿತ ಗಳು ತಮ್ಮ ಕರ್ತವ್ಯ ನಿಭಾಯಿಸಬೇಕು ಎಂದು ಕೆಲ ಯುವಕರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.ಯುವಕರನ್ನು ಸಮಾಜವನ್ನು ದಾರಿ ತಪ್ಪಿಸುವ ಇವುಗಳು ಸಮಾಜಕ್ಕೆ ಮಾರಕ,ಒಟ್ಟಿನಲ್ಲಿ ಇಂತಹ ಋಣಾತ್ಮಕ ವಿಚಾರಗಳ ನಡುವೆಯೂ ಮಾರಿಕಾಂಬಾ ದೇವಿಯ ಜಾತ್ರೆಯು ಸದ್ಭಕ್ತರ ಪಾಲ್ಗೊಳ್ಳುವಿಕೆಯಿಂದ ಮತ್ತು ಅಮ್ಮ ಮಾರಿಕಾಂಬೆ ಯ ದಿವ್ಯಶಕ್ತಿ ಇಂದ ಯಶಸ್ವಿ ಯಾಗಿ ಜನ ಜಂಗುಳಿ ಇಂದ ಸಾಗುತ್ತಿರುವುದು ಜಾತ್ರಾ ಮಹೋತ್ಸವದ ಯಶಸ್ಸಿಗೆ ಹಿಡಿದ ಕೈ ಗನ್ನಡಿ.ಇನ್ನಾದರೂ ಇಂತಹ ನಿರ್ಧಾರ ಕೈಗೊಳ್ಳುವ ಮುನ್ನ ಕಮೀಟಿಯವರು ವಿಚಾರ ಮಾಡಲಿ ಎನ್ನುವುದು ಜನರ ಬೇಡಿಕೆಯಾಗಿದೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.