ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಅಭೂತಪೂರ್ವ ಯಶಸ್ವಿಯೊಂದಿಗೆ ಅಂತರ್ ರಾಜ್ಯ ತೆರೆ ಬಂಡಿ ಸ್ಪರ್ಧೆಗೆ ತೆರೆ

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬೆಲ್ಲದ ನಾಡೆ ಎಂದು ಖ್ಯಾತಿ ಪಡೆದ ಮಹಾಲಿಂಗಪುರ್ ಪಟ್ಟಣದಲ್ಲಿ ಅಂತರ್ ರಾಜ್ಯ ಮಟ್ಟದ ತೆರೆ ಬಂಡಿ ಸ್ಪರ್ಧೆಕಳೆದ ಮೂರು ದಿನಗಳಿಂದ ವಿಜೃಂಭಣೆಯಿಂದ ನಡೆದಿತ್ತು .

ನಡೆದ ಅಂತರ್ ರಾಜ್ಯ ಮಟ್ಟದ ತೆರೆ ಬಂಡಿ ಸ್ಪರ್ಧೆಯ ಕೊನೆಯ ಮುಕ್ತಾಯ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಡಾಕ್ಟರ್ ಎಆರ್ ಬೆಳಗಲಿ ಕಳೆದ 25 ವರ್ಷಗಳಿಂದ ಜನರ ಸಮಾಜ ಸೇವೆಯಲ್ಲಿ ಇದ್ದೇನೆ ಆದ್ದರಿಂದ ಇಂಥಹ ಅಭೂತ ಪೂರ್ವ ಕಾರ್ಯಕ್ರಮಕ್ಕೆ ಜನಸಮೂಹ ಸಾಕ್ಷಿಯಾಗಿದ್ದು , ನಮ್ಮ ಪುಣ್ಯ ಎಂದು ಹೇಳಿದರು .

ನಗರದ ಬಸವೇಶ್ವರ ಜಾತ್ರೆಯ 50 ನೇ ವರ್ಷದ ಸುವರ್ಣಮಹೋತ್ಸವದ ಅಂಗವಾಗಿ ,ಬಸವೇಶ್ವರ ಜಾತ್ರಾ ಕಮೀಟಿ ಮಹಾಲಿಂಗಪುರ ವತಿಯಿಂದ ಅಂತರ್ ರಾಜ್ಯ ಮಟ್ಟದ ತೆರಬಂಡಿ ವೈಭವದ ಸ್ಪರ್ಧೆಗೆ ಅಭೂತಪೂರ್ವ ಯಶಸ್ವಿಯೊಂದಿಗೆ ತೆರೆ ಕಂಡಿತು.

ತೆರೆಬಂಡಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ವಿಠ್ಠಲ ಅಣ್ಣಾ ಮ್ಯಾಗಡಿ,

ದ್ವಿತೀಯ ಸ್ಥಾನ ಅಕ್ಕಿಮರಡಿ ಕುಮಾರ. ತೃತೀಯ ಸ್ಥಾನ ಪಡೆದುಕೊಂಡರು. ಬುಲ್ಸ್ ರೈತರ ಎತ್ತುಗಳು ಬಹುಮಾನ ಪಡೆದವು.ಅಂತರ ರಾಜ್ಯಮಟ್ಟದ ತೆರಬಂಡಿ ಸ್ಪರ್ಧೆಯನ್ನು 2,3,4 ಫೆಬ್ರುವರಿ-2023 ರಂದು ನಗರದ ಸಾಧುನ ಗುಡಿ ಹತ್ತಿರ ಆಯೋಜಿಸಲಾಗಿತ್ತು ,

ಸ್ಪರ್ಧೆಯಲ್ಲಿ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಿಂದ, ಕರ್ನಾಟಕ ಹೊರತುಪಡಿಸಿ ಮಹಾರಾಷ್ಟ್ರ, ಆಂಧ್ರ, ತಮಿಳುನಾಡು, ತೆಲಂಗಾಣ, ಸೇರಿದಂತೆ ವಿವಿಧ ರಾಜ್ಯಗಳಿಂದ ಸಾವಿರಾರು ಸ್ಪರ್ಧಾರ್ಥಿಗಳು ಆಗಮಿಸಿ ತೆರ ಬಂಡಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಖ್ಯಾತ ವೈದ್ಯರು ಹಾಗೂ ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಡಾ. ಎ ಆರ್ ಬೆಳಗಲಿ ಅವರು ಮಾತನಾಡಿ ದೇಶದ ಬೆನ್ನುಲುಬು ರೈತ , ರೈತರ ಸರ್ವಾಂಗೀಣ ಅಭಿವೃದ್ದಿಗೆ ಸರ್ಕಾರಗಳು ಶ್ರಮಿಸಬೇಕು. ಯಾಂತ್ರೀಕೃತ ಯುಗದಲ್ಲಿ ಎತ್ತುಗಳನ್ನು ಸಾಕುವವರ ಸಂಖ್ಯೆ ತುಂಬಾ ಕಡಮೆಯಾಗುತ್ತಿದೆ. ಇದು ನಮ್ಮ ಆದಿ ಅನಾದಿ ಕಾಲದಿಂದಲೂ ರೈತರ ಹೆಗಲಿಗೆ ಹೆಗಲು ಕೊಟ್ಟು ಮನುಕುಲಕ್ಕಾಗಿ ಎತ್ತುಗಳ ಕೊಡುಗೆ ಎಂದೂ ಕೂಡ ಮರೆಯಲಾಗದು. ರೈತರು ಎತ್ತುಗಳನ್ನು ಮಕ್ಕಳ ಹಾಗೆ ಲಾಲನೆ ಪೋಷಣೆ ಮಾಡುತ್ತಾರೆ. ದೇವರ ಜಾಗೆ ಪೂಜೆ ಮಾಡುತ್ತಾರೆ. ರೈತ ದೇಶದ ಬೆನ್ನೆಲುಬು. ಎತ್ತು ರೈತನ ಬೆನ್ನೆಲುಬು. ತೆರಬಂಡೆ ಸ್ಪರ್ದೆ ರೈತ ಹಾಗೂ ಎತ್ತುಗಳ ಕಸರತ್ತು. ಉತ್ತರ ಕರ್ನಾಟಕದ ಅತಿ ದೊಡ್ಡ ತೆರಬಂಡೆ ಸ್ಪರ್ದೆ ನಮ್ಮ ಮಹಾಲಿಂಗಪುರದಲ್ಲಿ ನಡೆದಿದ್ದು ನಮ್ಮ ಭಾಗ್ಯ. ಇದರ ನೇತೃತ್ವ ವಹಿಸಲು ನನಗೆ ಅವಕಾಶ ಮಾಡಿ ಕೊಟ್ಟ ಮಹಾಲಿಂಗಪುರ ಶ್ರೀ ಬಸವೇಶ್ವರ ಜಾತ್ರಾ ಕಮೀಟಿ ಅವರಿಗೆ ಧನ್ಯವಾದಗಳು ಎಂದು ಹೇಳಿದರು .

ಅಂತರ್ ರಾಜ್ಯ ಮಟ್ಟದ ತೆರೆಬಂಡಿ ಸ್ಪರ್ಧೆಯಲ್ಲಿ ಪ ಬಹುಮಾನ ಪಡೆದ ಎಲ್ಲರಿಗೂ ಅಭಿನಂದನೆಗಳು ತಿಳಿಸಿದರು .

ರಾಜ್ಯದ ವಿವಿಧ ಜಿಲ್ಲೆಗಳು ಬೇರೆ ಬೇರೆ ರಾಜ್ಯಗಳಿಂದ ಆಗಮಿಸಿದ ಎಲ್ಲರಿಗೂ ಧನ್ಯವಾದಗಳು ಕೂಡ ತಿಳಿಸಿದರು .

ವೀಕ್ಷಿಸಲು ಮೂರು ದಿನದ ಕಾರ್ಯಕ್ರಮದಲ್ಲಿ ಶ್ರೀ ಮನ್ ಮಹಾರಾಜ್ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು. ಸಿದ್ಧ ಸಂಸ್ಥಾನ ಮಠ ಮಹಾಲಿಂಗಪುರ , ಹಾಗೂ ಬಾಗಲಕೋಟೆ ಮಾಜಿ ಸಚಿವರು, ವಿಧಾನ ಪರಿಷತ್ ವಿರೋಧ ಪಕ್ಷದ ಮಾಜಿ ನಾಯಕರಾದ ಮಾನ್ಯ ಶ್ರೀ ಎಸ್ ಆರ್ ಪಾಟೀಲ್ ಅವರು, ಮಾಜಿ ಸಚಿವರಾದ , ಆರ್ ಬಿ ತಿಮ್ಮಾಪುರವರು, ಕೆಪಿಸಿಸಿ ಕಾರ್ಯದರ್ಶಿಗಳಾದ ಶ್ರೀ ಸಂಗಮೇಶ ಬಬಲೇಶ್ವರ ಅವರು, ಶ್ರೀ ಬಸವೇಶ್ವರ ಜಾತ್ರಾ ಕಮಿಟಿಯ ಅಧ್ಯಕ್ಷರಾದ ಶ್ರೀ ಯಲ್ಲನಗೌಡ ಪಾಟೀಲ ಅವರು ತೇರದಾಳ ಮತಕ್ಷೇತ್ರ ಶಾಸಕರಾದ ಶ್ರೀ ಸಿದ್ದು ಸವದಿ ಅವರು ಮಹಾಲಿಂಗಪುರ ಪುರಸಭೆ ಅಧ್ಯಕ್ಷರಾದ ಶ್ರೀ ಬಸವರಾಜ್ ಹಿಟ್ಟಿನ ಮಠ ಅವರು, ಬಾಗಲಕೋಟ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶ್ರೀ ಮಹಾಂತೇಶ ಹಿಟ್ಟಿನಮಠ ಅವರು, ಕಾಂಗ್ರೆಸ್ ಮುಖಂಡರಾದ ಶ್ರೀ ಪರಶುರಾಮ ಬಿ ಬೆಳಗಲಿ, ಬಾಗಲಕೋಟ ಬಿ.ಡಿ.ಸಿ.ಸಿ ಬ್ಯಾಂಕ ನಿರ್ದೇಶಕರಾದ ಶ್ರೀ ಬಸನಗೌಡ ಪಾಟೀಲ ಅವರು, ಮಹಾಲಿಂಗಪುರದ ಖ್ಯಾತ ವೈದ್ಯರಾದ ಡಾ|| ಸಂದೀಪ್ ಕನಕರಡ್ಡಿ, ಮಮದಾಪುರ್ ಪೆಟ್ರೋಲಿಯಂ ಮಾಲೀಕರಾದ ಶ್ರೀ ಪ್ರಕಾಶ ಮಮದಾಪೂರ ಅವರು ಸೇರಿದಂತೆ ಮೂರು ದಿನದ ಕಾರ್ಯಕ್ರಮದಲ್ಲಿ ಕಾರ್ಯಕ್ರಮಕ್ಕೆ ಹಲವಾರು ಗಣ್ಯರು ಭಾಗವಹಿಸಿದರು .

ವರದಿ ಮಹಬೂಬ ಬಾರಿಗಡ್ಡಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ