ದಕ್ಷಿಣ ಕಾಶಿ ತಿಂಥಣಿ ಮೌನೇಶ್ವರ ಜಾತ್ರಾ ಮಹೋತ್ಸವದಲ್ಲಿ ಸಿಂಧನೂರಿನ ವಿಶ್ವಕರ್ಮ ಸಮಾಜದ ಬಂಧುಗಳು ಮಹಾಪ್ರಸಾದ ಸಂಧರ್ಭದಲ್ಲಿ ಸರ್ವಧರ್ಮ ಸಮನ್ವಯತೆಯಿಂದ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಮಹಾಪ್ರಸಾದ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿಸಿದರು.
ಶ್ರೀ ಜಗದ್ಗುರು ಮೌನೇಶ್ವರರ ದೇವಸ್ಥಾನದ ಅಂಗವಾಗಿ ಮೊದಲ ದಿನ ಬುಧವಾರ ಸುರಪುರದಿಂದ ತಿಂಥಣಿಯವರೆ ಪಲ್ಲಕ್ಕಿ ಆಗಮಿಸಿತು.ಎರಡನೇ ದಿನವಾದ ಗುರುವಾರ ಲಕ್ಷಾದೋಪದಿಯಲ್ಲಿ ಶ್ರೀ ತಿಂಥಣಿಯ ಮೌನೇಶ್ವರರ ಭಕ್ತರು ಬೆಳಗ್ಗೆಯಿಂದ ಜನಿವಾರ, ಕುಂಕುಮಾರ್ಚನೆಯನ್ನು ಮಾಡುತ್ತಾ ಪ್ರಸಾದ ವ್ಯವಸ್ಥೆಗೆ ಸಿದ್ದಾರಾಗಿ ಕುಳಿತಿರುವಾಗ ಶ್ರೀ ಜಗದ್ಗುರು ಮೌನೇಶ್ವರರು ದೇವಸ್ಥಾನದ ಗೋಪುರದ ಮೇಲೆ ಗಿಳಿಯ ರೂಪಾವತಾದಲ್ಲಿ ಬಂದು ಪ್ರತ್ಯಕ್ಷರಾಗಿ ಕಾಣಿಸಿಕೊಂಡರು. ನಂತರ ಭಕ್ತರು ಮೌನೇಶ್ವರರ ಜೈ ಘೋಷಗಳನ್ನು ಕೂಗುತ್ತಾ ಘಂಟೆ ಜಾಗಟೆಗಳು ಮೊಳಗಿದವು ನಂತರ ಮಹಾಪ್ರಸಾದ ನೆರವೇರಿತು.ಈ ಮಹಾ ಪ್ರಸಾದ ದಿನನಂದು ರಾತ್ರಿ ಪ್ರಥಮ ಸೇವೆ,ಮೂರನೇ ದಿನ ಶುಕ್ರವಾರ ಉಪನಯನ,ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು,ನಾಲ್ಕನೇ ದಿನ ಪುರವಂತರ ಸೇವೆ ನಡೆಯಲಿದ್ದು ಐದನೇ ದಿನ ಶನಿವಾರ ರಥೋತ್ಸವ ಹಾಗೂ ಮೌನೇಶ್ವರ ಗುಹಾ ಪ್ರವೇಶ ನೇರವೇರಲಿದೆ.ಈ ಮಹಾಪ್ರಸಾದ ಸಂದರ್ಭದಲ್ಲಿ ಸಿಂಧನೂರು ತಾಲೂಕಿನ ವಿಶ್ವಕರ್ಮ ಬಂಧುಗಳಾದ ಗಣೇಶ ಸುಕಲಪೇಟೆ, ವೀರೇಶ ಕಾರಟಗಿ, ಚನ್ನಪ್ಪ ಕೆ.ಹೊಸಹಳ್ಳಿ, ಗುರುರಾಜ,ಜೀವಣ್ಣ ನಾಗನಕಲ್ಲು,ಇನ್ನೂ ಹಲವಾರು ಭಕ್ತರು ಆಗಮಿಸಿದ್ದರು.