ಹನೂರು: ಭವ್ಯ ಭಾರತದ ಪರಂಪರೆಯನ್ನು ವಿಶ್ವಕ್ಕೆ ಅರ್ಥಪೂರ್ಣವಾಗಿ ಪರಿಚಯಿಸಿದ ಕೀರ್ತಿ ಶ್ರೀ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ ಎಂದು ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚದ ಕಾರ್ಯಕಾರಿಣಿ ಸದಸ್ಯ ಜನಧ್ವನಿ ಬಿ.ವೆಂಕಟೇಶ್ ತಿಳಿಸಿದರು.
ಪಟ್ಟಣದ ಆರ್. ಎಸ್. ದೊಡ್ಡಿ ಅವರ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ಶ್ರೀ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ಮಾತನಾಡಿದರು.
ಲೌಕಿಕ ಜಗತ್ತಿನೊಳಗೆ ಹೇಳ ಹೆಸರಿಲ್ಲದಂತೆ ಮರೆಯಾಗುವ ಮಾನವರ ನಡುವೆ ಅತ್ಯಂತ ಕಡಿಮೆ ಅವಧಿಯಲ್ಲಿ ಜೀವಿಸಿದ್ದರು ಕೂಡ ದೇಶ, ದೇಶದ ಸಂಸ್ಕೃತಿ ಪರಂಪರೆ, ಮೌಲ್ಯಯುತ ಜೀವನದ ಜಗಕ್ಕೆ ಸಾರಿದ ಮಹಾನ್ ಚೇತನ ಶ್ರೀ ಸ್ವಾಮಿ ವಿವೇಕಾನಂದರು. ಅಮೆರಿಕದ ಚಿಕಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಭಾರತದ ಸನಾತನ ಧರ್ಮದ ಮಹತ್ವವನ್ನು ಜಗತ್ತಿಗೆ ಸಾರಿದರು. ಅದು ವಿಸ್ಮರಣೀಯವಾದ ವಿಚಾರ. ಶ್ರೀ ಸ್ವಾಮಿ ವಿವೇಕಾನಂದರ ತತ್ವ ಆದರ್ಶಗಳು ಇಂದಿನ ಯುವ ಪೀಳಿಗೆ ಮಾದರಿಯಾಗಿದೆ. ಈ ದಿಸೆಯಲ್ಲಿ ನಂದನ್ ಶಿವು ತಂಡದವರು ಶ್ರೀ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಿರುವುದು ಶ್ಲಾಘನೀಯವಾದ ವಿಚಾರ ಎಂದರು.
ಈ ಸಂದರ್ಭದಲ್ಲಿ ಮಹದೇಶ್ವರ ಮಂಡಲ ಮಹಿಳಾ ಅಧ್ಯಕ್ಷರಾದ ಮೀನಾ, ಕಾಮಗೆರೆ ಸುರೇಶ, ರಾಜಪ್ಪ, ಲೋಕೇಶ್ ಜತ್ತಿ, ರಾಮು, ಅರವಿಂದ್, ಅಪ್ಪು ,ರಕ್ಷಿತ್, ಮಂಟೇಸ್ವಾಮಿ, ಹಾಗೂ ಮುಖಂಡರು, ಯುವಕರು ಉಪಸ್ಥಿತರಿದ್ದರು.
ವರದಿ :ಉಸ್ಮಾನ್ ಖಾನ್.