ಹನೂರು:ನನ್ನ ಕ್ಷೇತ್ರದಲ್ಲಿ ಈಗಾಗಲೇ ಸರ್ವಜನಾಂಗಕ್ಕೂ ಉಪಯೋಗವಾಗುವಂತೆ ಸಭೆ ಸಮಾರಂಭಗಳಲ್ಲಿ ಬಳಸಿಕೊಳ್ಳಲು ಉಪಯೊಇಗವಾಗುವಂತೆ ಸಹಕಾರಿಯಾಗಲು ಸಮುದಾಯ ಭವನಗಳನ್ನು ನಿರ್ಮಿತಿ ಕೇಂದ್ರದ ಸಹಕಾರದೊಂದಿಗೆ ನಿರ್ಮಿಸಲಾಗಿದೆ ಹಿಂದಿನ ಕಾಲದಲ್ಲಿ ಚಾವಡಿಗಳನ್ನ ಉಪಯೋಗಿಸುತ್ತಿದ್ದರು ಈಗ ಅಂತಹ ಸಮಸ್ಯೆ ನಮಲ್ಲಿಲ್ಲ,ಇನ್ನೂ ಹಲವು ಭವನಗಳ ನಿರ್ಮಾಣಕ್ಕೆ ಮುಂದಿನ ದಿನಗಳಲ್ಲಿ ಪ್ರಯತ್ನಿಸಲಾಗುವುದು ಎಂದು ಶಾಸಕರಾದ ಆರ್. ನರೇಂದ್ರ ತಿಳಿಸಿದರು.
ಹನೂರು ಕ್ಷೇತ್ರದ ಎಲ್ಲೆಮಾಳ ಗ್ರಾಮ ಪಂಚಾಯತಿಯ ಬೂದುಗುಪ್ಪೆ ಗ್ರಾಮದಲ್ಲಿ ಹನ್ನೆರಡು ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಿದ್ದ ಸಮುದಾಯ ಭವನವನ್ನು ಉದ್ಘಾಟನೆ ಮಾಡಿ ನಂತರ ಮಾತನಾಡಿದ ಅವರು ಈಗಾಗಲೇ ಬಾಬು ಜಗಜೀವನ್ ರಾಮ್ ಸಮುದಾಯ ಭವನಗಳನ್ನು ನಿರ್ಮಿಸಿ ಉದ್ಘಾಟನೆ ಮಾಡಿದ್ದೇನೆ,ಹಾಗಾಗಿ
ನೀವೆಲ್ಲರೂ ಹಿಂದಿನಿಂದಲು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿಕೊಂಡು ಬಂದಿದ್ದೀರ ಮುಂದಿನ ದಿನಗಳಲ್ಲಿ ಬರುವ ವಿಧಾನಸಭಾ ಚುನಾವಣೆಯಲ್ಲಿ ತಾವೆಲ್ಲರು ನಮ್ಮ ಪಕ್ಷವನ್ನು ಬೆಂಬಲಿಸಬೇಕು, ನಾನು ನಿಮ್ಮಜೋತೆಯಲ್ಲಿದ್ದಿನಿ ಮುಂದೆಯೂ ಇರುತ್ತೇನೆ ಹಾಗೂ ಸಮುದಾಯ ಭವನಗಳನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಉಪಯೋಗಿಸುವ ಕಾರ್ಯವಾಗಬೇಕು ಮತ್ತು ದಿನ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಂಡರೆ ಬಹಳ ಪ್ರಯೋಜನಕಾರಿಯಾಗಲಿದೆ ಎಂದು ತಿಳಿಸಿದರು . ಇದೇ ಸಂದರ್ಭದಲ್ಲಿ ರಾಜ್ಯ ಯುವ ಕಾರ್ಯದರ್ಶಿ ಚೇತನ್ ದೊರೈರಾಜು ,ಎಲ್ಲೆಮಾಳ ಗ್ರಾಮ ಪಂಚಾಯತಿ ಅಧ್ಯಕ್ಷೆಯಾದ ಜಯಲಕ್ಷ್ಮಿ ,ಸದಸ್ಯರುಗಳಾದ ಗೋವಿಂದು,ಜಕವುಲ್ಲಖಾನ್ ,ಮಂಜುಳ, ಮುಖಂಡರಾದ ನಟರಾಜು,ನಾಗೇಶ್ ,ನಿರ್ಮಿತಿಕೇದ್ರ ಅಧಿಕಾರಿಗಳಾದ ರವಿಕುಮಾರ್ ,ಶೆಟ್ರು ,ಗ್ರಾಪ ಪಿ ಡಿ ಒ ಮಂಜುನಾಥ್ ಪ್ರಸಾದ್ , ಸೇರಿದಂತೆ ಇನ್ನಿತರರು ಹಾಜರಿದ್ದರು.
ವರದಿ :ಉಸ್ಮಾನ್ ಖಾನ್.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.