ರಾಣೇಬೆನ್ನೂರು: ಗಾನ ಕೋಗಿಲೆಯೇ ಎಂದು ಖ್ಯಾತಿ ಪಡೆದ ವಾಣಿ ಜಯರಾಂ ಇತ್ತೀಚಿಗೆ ಅಸ್ತಂಗತರಾಗಿದ್ದು ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ. ೧೯೭೩ ರಿಂದ ಕನ್ನಡದಲ್ಲಿ ಒಂದು ಸಾವಿರ ಹಾಡು ಹಾಡಿದ ಈ ಹಿರಿಯ ಗಾಯಕಿ ಕನ್ನಡಿಗರ ಸಂಗೀತಾಸಕ್ತರ ಮನದಲ್ಲಿ ಉಳಿದು ಕೊಂಡಿದ್ದಾರೆ ಎಂದು ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರದ ಸಾಹಿತಿ, ಕವಿ,ಲೇಖಕರು ಹಾಗೂ ಶೃಂಗಾರ ಕಾವ್ಯ ಪ್ರಕಾಶನ ಸಂಸ್ಥೆಯ ಅದ್ಯಕ್ಷರಾದ ಬಿ. ಎಸ್. ಬಾಗೇವಾಡಿಮಠ ಹಾಗೂ ಶ್ರೀ ಮತಿ ಅರ್ಚನಾ ಪಾಟೀಲ್. ಕವಯಿತ್ರಿ, ಶ್ರೀಕಾಂತ್ ಕೊಟ್ಟೂರು, ಇವರುಗಳು ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ ನಮ್ಮ ದೇಶದ ೧೨ ಭಾಷೆಗಳಲ್ಲಿ ೧೦ ಸಾವಿರಕ್ಕೂ ಹೆಚ್ಚು ಹಾಡಿನೊಂದಿಗೆ ವಿವಿಧ ಭಾಷೆಗಳ ಚಲನಚಿತ್ರಗಳಲ್ಲಿ ತನ್ನ ಗಾಯನ ಸಿರಿಯ ಕೊಡುಗೆ ನೀಡಿದ್ದಾರೆ ಸಂಸ್ಥೆಯ ಸದಸ್ಯರು ಗಾಯಕಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
