ಹಾನಗಲ: ಕೊಪ್ಪರಸಿಕೊಪ್ಪ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾಷ್ಟ್ರೀಯ ಕುಷ್ಟರೋಗ ನಿರ್ಮೂಲನ ಕಾರ್ಯಕ್ರಮದ ಅಂಗವಾಗಿ ಸ್ಪರ್ಶ ಕುಷ್ಟರೋಗ ಅರಿವು ಆಂದೋಲನ ಕಾರ್ಯಕ್ರಮ ಜರುಗಿತು. ಮುಖ್ಯ ವೈದ್ಯಾಧಿಕಾರಿಗಳಾದ ಶ್ರೀ ಜಿ ಆರ್, ಸರ್ವೆ ಅವರು ಕುಷ್ಟರೋಗದ ಪ್ರಾರಂಭಿಕ ಲಕ್ಷಣಗಳು, ಕುಷ್ಟರೋಗ ಹರಡುವಿಕೆ, ಕುಷ್ಟರೋಗದಿಂದ ಆಗುವ ದುಷ್ಪರಿಣಾಮಗಳು, ಕುಷ್ಟರೋಗವನ್ನು ಹೇಗೆ ತಡೆಗಟ್ಟಬಹುದು, ಎಂಬುವುದನ್ನು ಕುರಿತು ಸರಳವಾಗಿ ಸಭೆಯಲ್ಲಿ ಸೇರಿದ ರೋಗಿಗಳು ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸಿದರು. ಈ ಒಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸರ್ಕಾರಿ ಯುನಾನಿ ಚಿಕಿತ್ಸಾಲಯದ ವೈದ್ಯಾಧಿಕಾರಿಗಳಾದ ಶ್ರೀ ಮೈನುದ್ದೀನ್ ಲೋಹಾರ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಮಂಜುಳಾ ರಾಮಚಂದ್ರ ಓಲೆಕಾರ. ಹೆಲ್ತ್ ಇನ್ಸ್ಪೆಕ್ಟರ ಶ್ರೀ ನವೀನ ಕುಮಾರ ಕಾರ್ಯಕ್ರಮವನ್ನು ಪ್ರಾರಂಭಿಸಿ ಕೊನೆ ಕ್ಷಣದಲ್ಲಿ ವಂದನಾರ್ಪಣೆಯ ಮೂಲಕ ಮುಗಿಸಿದರು. ಅಟೆಂಡರಾದ ಶ್ರೀ ಮಹೇಶ ಕಮ್ಮಾರ ಮತ್ತು ಕೊಪ್ಪರಸಿಕೊಪ್ಪ ಹೊಡೆ, ಗಾಜಿಪುರ, ಓಣಿಕೆರಿ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿಗಾರರು.ರವಿ ಓಲೇಕಾರ. ಕೊಪ್ಪರಸಿಕೊಪ್ಪ