ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಾದ ಬಿ.ಕೆ. ವಿದ್ಯುತ್ ಶಾಖೆಯ ಶಾಖಾಧಿಕಾರಿಗಳಾದ ಸಂತೋಷ ಬನಗೊಂಡೆ ಹಾಗೂ ಸಿಬ್ಬಂದಿಗಳು ಸೇರಿ ಘನ ಸರ್ಕಾರದ ಆದೇಶದ ಮೇರೆಗೆ ಗ್ರಾಹಕರಿಗೆ ಅನುಕೂಲವಾಗಲೆಂದು ವಿದ್ಯುತ್ ಇಲಾಖೆಯಲ್ಲಿ ಜಾರಿಗೆ ತಂದಿರುವ “ಅಮೃತ್ ಜ್ಯೋತಿ ಯೋಜನೆ “ಅಡಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಗ್ರಾಹಕರಿಗೆ ಸಂಬಂಧಿಸಿದ ಈ ಯೋಜನೆಯಿಂದ 75 ಯೂನಿಟ್ ವಿದ್ಯುತ್ ಫ್ರೀ ಪಡೆದುಕೊಳ್ಳಲು ಅನೂಕೂಲವಾಗುತ್ತದೆ.ಆದ್ದರಿಂದ ಈ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಇಂದು ನಾದ ಬಿಕೆ ಗ್ರಾಮದ ದಲಿತ ಕಾಲೋನಿಗೆ ತೆರಳಿ ಗ್ರಾಮ ವಿದ್ಯುತ್ ಬಳಕೆದಾರರಿಗೆ ಈ ಯೋಜನೆಯ ಲಾಭ ಪಡೆದುಕೊಳ್ಳಲು ಇದೊಂದು ಸುವಣಾ೯ವಕಾಶವಿದ್ದು ,ಇದಕ್ಕೆ ಸಂಬಂಧಿಸಿದಂತೆ ಗ್ರಾಹಕರು ತಮ್ಮ 1). ರೇಷನ್ ಕಾರ್ಡ್ ಜೇರಾಕ್ಸ್ ಪ್ರತಿ.( BPL/APL) 2) ಪರಿಶಿಷ್ಟ ಜಾತಿ ಪ್ರಮಾಣಪತ್ರ, 3).ಆಧಾರ ಕಾಡ್೯.4)ಬ್ಯಾಂಕ್ ಪಾಸ್ ಬುಕ್.5 ) ಚಾಲ್ತಿಯಲ್ಲಿರುವ ಮೋಬೈಲ್ ನಂಬರ್. ಹಾಗೂ ಸಂಬಂಧಿಸಿದ ಇತರೆ ದಾಖಲೆಗಳನ್ನು ತಪ್ಪದೆ ನಿಮ್ಮ ಗ್ರಾಮದ ವಿದ್ಯುತ್ ಪ್ರತಿನಿಧಿ ಅಥವಾ ಲೈನ್ ಮೇನ್ ಗಳಿಗೆ ದಾಖಲೆಗಳನ್ನು ಕೊಟ್ಟು 75 ಯೂನಿಟ್ ವಿದ್ಯುತ್ ಫ್ರೀ ಪಡೆದುಕೊಳ್ಳಲು ಇದೊಂದು ಒಳ್ಳೆಯ ಸುವಣಾ೯ವಕಾಶ ಆದಷ್ಟು ಬೇಗನೆ ಇದರ ಸದೂಪಯೋಗ ಪಡೆದುಕೊಳ್ಳಬೇಕೇಂದು ನಾದ ವಿದ್ಯುತ್ ಶಾಖೆಯ ಶಾಖಾಧಿಕಾರಿಗಳಾದ ಮಾನ್ಯ ಶ್ರೀ ಸಂತೋಷ್ ಬನಗೊಂಡೆ ಇವರು ಹೇಳಿದರು .
ಈ ಸಂದರ್ಭದಲ್ಲಿ ಮೇಲ್ವಿಚಾರಕರಾದ ಪವನ ಮಾನೆ. ಪವರ್ ಮ್ಯಾನ್ ರಾದ -ರಾಮ ಡೋಣಿ. ಸಾಹೇಬಗೌಡ ತಾವರಖೇಡ.ಅವಿನಾಶ ಗೊಂದಳಿ.ಮಲ್ಲಿಕಾಜು೯ನ್ ಮನಗೂಳಿ.ಆರೀಫ್ ಇನಾಮದಾರ. ಗ್ರಾಮ ವಿದ್ಯುತ್ ಪ್ರತಿನಿಧಿಗಳಾದ -ಮಾಣಿಕರಾಯ ಬಿರಾದಾರ. ಗ್ರಾಮದ ಹಿರಿಯರಾದ ಚಂದಪ್ಪ ಹರಿಜನ ಇತರರು ಉಪಸ್ಥಿತರಿದ್ದರು.
ವರದಿ.ಅರವಿಂದ್. ಕಾಂಬಳೆ