ಬೆಂಗಳೂರು:ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಎಲ್ಲಾ ಪಕ್ಷಗಳೂ ತಯಾರಿ ಅದ್ಧೂರಿಯಾಗಿ ಮಾಡಿಕೊಳ್ಳುತ್ತಿವೆ ಈ ನಾಡಿನ ಮತ್ತು ಮತದಾರನ ದುರಂತವೆಂದರೆ ಜನರ ಹಿತದೃಷ್ಟಿಗಿಂತ ಚುನಾವಣೆಗೆ ನಿಲ್ಲಲು ಅಭ್ಯರ್ಥಿಗಳ ಪೈಪೋಟಿ ಮೂರು ಪಕ್ಷಗಳಲ್ಲಿ ಹೆಚ್ಚಾಗಿದೆ ಹೀಗಾಗಿ ಮೇಲ್ನೋಟಕ್ಕೆ ಅತಂತ್ರ ಸರಕಾರ ರಚನೆಯಾಗಬಹುದೆಂಬ ಲೆಕ್ಕಾಚಾರ ನಿನ್ನೆ ಮೊನ್ನೆಯವರೆಗೆ ಇದ್ದ ಬಲಾಬಲ ಸಧ್ಯದ ಮಟ್ಟಿಗೆ ಇಲ್ಲ ಯಾವಾಗ ಕರ್ನಾಟಕ ರಾಜ್ಯ ಪ್ರಗತಿಪರ ಪಕ್ಷ ಅಸ್ತಿತ್ವಕ್ಕೆ ಬಂದಿತೋ ಆವಾಗಲೇ ಭಾರತೀಯ ಜನತಾ ಪಕ್ಷದ ಅಸಲಿ ಆಟ ಮೋದಿಯ ಮುತ್ಸದ್ದಿತನ ಮುಂದಾಲೋಚನೆಯ ಯೋಜನೆ ಅಚ್ಚರಿಯ ಆಯ್ಕೆಗಳು ಸಹಜವಾಗಿ ಎರಡೂ ಬಾರಿ ಕೈತಪ್ಪಿದ ಬಹುಮತದ ಸಂಖ್ಯಾಬಲ 2008 ಮತ್ತು 2018 ರಲ್ಲಿ ಮಾಡಿದ ತಪ್ಪುಗಳನ್ನು ಪುನರಾವರ್ತಿಸದೆ ಈ ಬಾರಿ ಶತಾಗತಾಯ ಮಿಷನ್ 31 ಇದರರ್ಥ ಎಲ್ಲಾ ಜಿಲ್ಲೆಗಳಲ್ಲೂ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವುದು ಈ ಮಾತಿಗೆ ಚೇತನ ಎಂಬಂತೆ ಚತುರಮತಿಗಳಾದ ಮೋದಿ ಮತ್ತು ತಂಡ ಯಾವುದೇ ಕಾರಣಕ್ಕೂ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿಲ್ಲ ಕಾರಣವಿಷ್ಟೇ ಮೊದಲೇ ಟಿಕೆಟ್ ಘೋಷಣೆ ಮಾಡಿದರೆ ಎದುರಾಳಿಗಳಿಗೆ ಸಾಕಷ್ಟು ಸಮಯಾವಕಾಶ ನೀಡುವ ಬದಲು ಜನರು ವಿಚಾರಮಾಡಿ ತೂರುವ ಕೇರುವ.ಓಕ್ಕುವ.ಬಿಕ್ಕುವ ಕೆಲಸಕ್ಕೆ ಕಡಿವಾಣ ಹಾಕಿ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕದನದಲ್ಲಿ ಕಲಿಗಳನ್ನು ಇಳಿಸುವುದು ಭಾರತೀಯ ಜನತಾ ಪಕ್ಷದ ಹೈಕಮಾಂಡ್ ನಿರ್ಧಾರವಾಗಿದೆ ಇನ್ನೂ ಸದ್ದಿಲ್ಲದೆ ಕಳೆದ ಸೆಪ್ಟೆಂಬರ್ ತಿಂಗಳಿನಿಂದ ಮೋದಿಯ ಭೇಟಿಗಳು
ಮಿಷನ್ 31 ಹಾಗೂ 131ರ ಮೇಲೆ ಮೋದಿ ಮಂತ್ರ ಜಪಿಸುತ್ತಾ ಬಂದಿದ್ದಾರೆ ಮಾರ್ಚ್ ಅಂತ್ಯಕ್ಕೆ ಯಾವ ಯೋಜನೆಯ ಆಕಾರ ಕರ್ನಾಟಕ ಭಾರತೀಯ ಜನತಾ ಪಕ್ಷಕ್ಕೆ ಬೇಕಾಗಿತ್ತೊ ಅದನ್ನು ಕೊಡುವಲ್ಲಿ ಯಾವುದೇ ಅನುಮಾನವಿಲ್ಲ ಎಂಬ ವಿಶ್ವಾಸದ ನುಡಿಗಳನ್ನು ರಾಜಕೀಯ ಚಿಂತಕರು ಮಾಡುತ್ತಿದ್ದಾರೆ ಕಾರಣ ಗುಜರಾತ್ ನ ಫಲಿತಾಂಶ ಇದಕ್ಕೆ ಸಾಕ್ಷಿಯಾಗಿದೆ ನಿದರ್ಶನವಾಗಿದೆ ಜೊತೆಗೆ ಕಳೆದೆಲ್ಲಾ ಚುನಾವಣೆಯಲ್ಲಿ ಈ ಹೊತ್ತಿನಲ್ಲಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲಾಗಿತ್ತು ಆದರೆ ಈ ಬಾರಿ ಹಾಗಾಗೀಲ್ಲ ಕಾರಣವಿರುವುದೇ ಇಲ್ಲಿ ಏಕೆಂದರೆ ಪಕ್ಷದ ಗೆಲುವು ಮುಖ್ಯವಾಗಿದೆ ಯೋಜನೆ ಸಫಲವಾಗಬೇಕಾಗಿದೆ ಅಭ್ಯರ್ಥಿಗಳು ಯಾರೇ ಆದರೂ ಮಿಷನ್ 31 ಜಿಲ್ಲೆಗಳಲ್ಲಿ ಪಾದರಸದಂತಾಗಬೇಕು ಆ ನಿಟ್ಟಿನಲ್ಲಿ ಈಗಾಗಲೇ ಸಕಲ ಸಿದ್ಧತೆಗಳು ನಿಖರತೆಯ ಕಡೆಗೆ ಬರುವುದರಲ್ಲಿ ಅನುಮಾನವಿಲ್ಲ ಸಧ್ಯದಮಟ್ಟಿಗೆ ಯಾವುದೇ ಸೂಚನೆಗಳು ಕಂಡುಬರುತ್ತಿಲ್ಲವಾದರೂ ಎಪ್ರಿಲ್ ತಿಂಗಳಲ್ಲಿ ಮಿಷನ್ ಊಹೆಗೂ ಮೀರಿ ರಾಜ್ಯ ರಾಜಕೀಯ ಬೆಳವಣಿಗೆಗಳನ್ನು ಗರಿಗೆದರಿಸುವುದು ಕೇಂದ್ರ ನಾಯಕರು ಮಾಡಿದ ಗಟ್ಟಿ ನಿರ್ಧಾರ ಎನ್ನಲಾಗಿದೆ ಕಿಂಚಿತ್ತೂ ಸುಳಿವು ನೀಡದೆ ಯಶಸ್ಸು ಸಾಧಿಸುವುದು ಸಹಜವಾಗಿಯೇ ಮೋದಿಯ ತತ್ವ ಮತ್ತು ತಂತ್ರವಾಗಿದೆ ಆ ತಂತ್ರ ಕರ್ನಾಟಕದಲ್ಲೂ ಫಲ ನೀಡುತ್ತದೆ ಎಂಬ ಪ್ರಶ್ನೆಗೆ ಉತ್ತರ ಹೌದಾಗುತ್ತದೆಯೋ ಇಲ್ಲವಾಗುತ್ತದೆಯೋ ನಾವೆಲ್ಲರೂ ಕಾಯಬೇಕಷ್ಟೇ.
ವರದಿ-ದಿನೇಶ್ ಕುಮಾರ್ ಅಜಮೇರಾ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.