ರಾಣೇಬೆನ್ನೂರು:ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಫೆಬ್ರವರಿ 25-02-2023 ರಂದು ನಡೆಯಲಿರುವ ಕಾನಿಪ ಧ್ವನಿ ಸಂಘಟನೆಯ
ಪ್ರಥಮ ರಾಜ್ಯ ಸಮ್ಮೇಳನವನ್ನು
ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಅಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಹೇಳಿದರು.
ಈ ಮಾದ್ಯಮ ಸಮ್ಮೇಳನಕ್ಕೆ ರಾಣೇಬೆನ್ನೂರಿನ
ಕವಿ, ಸಾಹಿತಿ, ಲೇಖಕರು, ಖ್ಯಾತ ಪುಸ್ತಕ ಪ್ರೇಮಿ
ಮತ್ತು ಹಾವೇರಿ ಜಿಲ್ಲೆಯ ಕರ್ನಾಟಕ ವರ್ಕಿಂಗ್ ಜರ್ನಲಿಸ್ಟ್ ವಾಯ್ಸ್ ಸಂಘಟನೆಯ ಸದಸ್ಯರು
ಹಾಗೂ ಹಳೆಯ ಪುಸ್ತಕ ಸಂಗ್ರಹದ
ರೂವಾರಿಯಾದ ಬಸವರಾಜ ಎಸ್.
ಬಾಗೇವಾಡಿಮಠ ಅವರು 101 ಪುಸ್ತಕಗಳನ್ನು ಕೊಡುಗೆಯಾಗಿ ನೀಡುತ್ತಾರೆ, ಇವರಿಗೆ ಕೈ
ಜೋಡಿಸಿ ಸಹಾಯ ಸಹಕಾರ ನೀಡಿದ
ಶ್ರೀಮತಿ ಅರ್ಚನಾ ಪಾಟೀಲ್ ಶ್ರೀ ಕಾಂತ್
ಕೊಟ್ಟೂರು, ಗಣೇಶ್ ಸಾಲಿಗ್ರಾಮ,
ಪ್ರಕಾಶ ಭೋಜೆ, ಪ್ರಕಾಶ ಜಹಾಗೀರದಾರ,
ಶ್ರೀಮತಿ ರಾಧಾಮಣಿ ಕೋಲಾರ ಇವರ ಸಹಾಯ ಯೊಂದಿಗೆ ಬಾಗೇವಾಡಿಮಠ ಅವರು
ಪುಸ್ತಕಗಳನ್ನು ಕೊಡುಗೆಯಾಗಿ ನೀಡಿರುತ್ತಾರೆ
ಎಂದು ಕಾನಿಪ ಧ್ವನಿಯ ಅಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.