ಫರಂಗಿಪೇಟೆ, ಅರ್ಕುಳ , ಮಂಗಳೂರು , ಫೆಬ್ರವರಿ 09 : ದಿನಾಂಕ 05 ರಿಂದ ಆರಂಭ ಗೊಂಡ ಶ್ರೀ ಉಳ್ಳಾಕ್ಲು ಮಗೃಂತಾಯಿ ದೈವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು, ನಿತ್ಯ ವಿವಿಧ ವಿಧಿ ವಿಧಾನ, ಧಾರ್ಮಿಕ ಆಚರಣೆಗಳು , ಧ್ವಜಾರೋಹಣ , ಬಾಕಿಮಾರುಗದ್ದೆ ಚೆಂಡು ಆಟ, ಕಂಜಿಲ್ , ಉಳ್ಳಾಕ್ಲು, ಮಗೃಂತಾಯಿ ದೈವಗಳ ನೇಮ , ಬಲಿ, ಬಂಡಿ ಎಳೆಯುವುದು, ಭಕ್ತರ ಅಹವಾಲು ವಿಚಾರಣೆ , ಅಭಯ ಕೊಟ್ಟು ಪರಿಹಾರ ದಾರಿ ಹೇಳುವುದು ಮತ್ತು ಪ್ರಸಾದ ವಿತರಣೆ. ವಿಧ ವಿಧ ವಾದ್ಯ, ಬ್ಯಾಂಡ್, ವಾಲಗ , ಸಿಡಿ ಮದ್ದು ಸುಡುವುದರೊಂದಿಗೆ ಅರ್ಕುಳ ತುಪ್ಪೆಕಲ್ ನಲ್ಲಿ ನಾಡಿದ್ದು ಫೆಬ್ರವರಿ 11 ರವರೆಗೆ ಹಬ್ಬದ ವಾತಾವರಣ. ಈ ಎಲ್ಲಾ ಮಹತ್ಕಾರ್ಯಗಳು ಸಂಬಂಧ ಪಟ್ಟ ಬೀಡಿನ ಮುಖ್ಯಸ್ಥರು, ಗಡಿ ಪ್ರಧಾನರು, ಗಡಿ ಮನೆತನಗಳ ಮೇಲ್ವಿಚಾರಣೆಯಲ್ಲಿ ಚಾಕರಿ ಯವರ ಮತ್ತು ಭಕ್ತರ ಸಮಾಗಮದಲ್ಲಿ ವಿಜೃಂಭಣೆಯಿಂದ ಜರುಗಲಿದೆ.
ವರದಿ : ಚಂದ್ರಶೇಖರ ಹೆಬ್ಬಾರ್ ಕೊಲ್ಯ