ಸಿಂಧನೂರು:ತುರವಿಹಾಳ ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವಸತಿ ಗೃಹಗಳ ಆವರಣದಲ್ಲಿ 10ವರ್ಷಕ್ಕಿಂತ ಹೆಚ್ಚಿನ ಬೇವಿನ ಗಿಡಮರಗಳನ್ನು ಅರಣ್ಯ ಇಲಾಖೆಯ ಪರವಾನಗಿ ಬುಧವಾರ ಮಾರಣಹೋಮ ಮಾಡಲಾಗಿದೆ ಇದನ್ನು ತಿಳಿದ ವನಸಿರಿ ತಂಡ ಹಾಗೂ ಪಟ್ಟಣದ ಪರಿಸರ ಪ್ರೇಮಿಗಳು ಸ್ಥಳಕ್ಕೆ ಭೇಟಿ ನೀಡಿದರು ಇದಕ್ಕೆ ಪರಿಸರ ಪ್ರೇಮಿ ಹಾಗೂ ವನಸಿರಿ ಫೌಂಡೇಶನ್ ಅದ್ಯಕ್ಷ ಅಮರೇಗೌಡ ಮಲ್ಲಾಪೂರ ಆಕ್ರೋಶ ವ್ಯಕ್ತಪಡಿಸಿದರು.
ಪರಿಸರ ಸಂರಕ್ಷಣೆಗೆ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದರೂ ಪ್ರಯೋಜನವಾಗುತ್ತಿಲ್ಲ,ಒಂದು ಕಡೆ ಪರವಾನಗಿ ಇಲ್ಲದೆ ಬೇವಿನ ಗಿಡಮರಗಳ ಮಾರಣ ಹೋಮವಾದರೂ ಕಣ್ಮುಚ್ಚಿ ಕುಳಿತ ಅರಣ್ಯ ಅಧಿಕಾರಿಗಳು ಇಂತಹದೊಂದು ಘಟನೆ ಸಿಂಧನೂರು ತಾಲೂಕಿನ ತುರವಿಹಾಳ ಪಟ್ಟಣದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವಸತಿ ಗೃಹಗಳ ಆವರಣದಲ್ಲಿ ನಡೆದಿದೆ ಬುಧವಾರ ಕಟ್ಟಡ ನಿರ್ಮಾಣದ ನೆಪಹೊಡ್ಡಿ ಸುಮಾರು 10 ವರ್ಷದ ಮೇಲ್ಪಟ್ಟ ಗಿಡಮರಗಳನ್ನು ಅರಣ್ಯ ಇಲಾಖೆಯ ಪರವಾನಗಿ ಇಲ್ಲದೆ ಗಿಡಮರಗಳನ್ನು ಗುತ್ತಿಗೆದಾರರು ಕಡಿದು ಹಾಕಿರುವುದು ತುರವಿಹಾಳ ಪಟ್ಟಣದ ಸಾರ್ವಜನಿಕರು ಹಾಗೂ ವನಸಿರಿ ಫೌಂಡೇಶನ್ ಅದ್ಯಕ್ಷ ಹಾಗೂ ಪರಿಸರ ಪ್ರೇಮಿ ಅಮರೇಗೌಡ ಮಲ್ಲಾಪೂರ ಅವರ ಆಕ್ರೋಶಕ್ಕೆ ಕಾರಣವಾಗಿದೆ.
ಗುತ್ತಿಗೆದಾರರು ಅರಣ್ಯ ಇಲಾಖೆಯ ಪರವಾನಗಿ ಪಡೆಯದೆ ಬುಧವಾರ ಗಿಡಮರಗಳನ್ನು ಕಡಿದ ನಂತರ ಪರವಾನಗಿ ಪಡೆಯಲು ಓಡಾಡುತ್ತಿದ್ದಾರೆ ಎಂಬ ಸಂಶಯ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ ಇದಕ್ಕೆ ಅರಣ್ಯ ಅಧಿಕಾರಿಗಳು ಯಾವುದೇ ರೀತಿಯ ಆಮೀಷಕ್ಕೆ ಒಳಗಾಗದೆ ತಮ್ಮ ಕರ್ತವ್ಯವನ್ನು ನಿಭಾಯಿಸಬೇಕು ಮತ್ತು ಗಿಡಗಳ ಮರಣ ಹೋಮ ಮಾಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಪರಿಸರ ಪ್ರೇಮಿಗಳು ಒತ್ತಾಯಿಸಿದರು.