ಬೆಳಗಾವಿ/ಮುಗಳಖೋಡ:ಪರಿಸರ ಮಲಿನವಾಗಿ ಅದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಹಾನಿ ಉಂಟಾಗದಂತೆ ಹಳ್ಳಿ ಪಟ್ಟಣ ನಗರಗಳೊಂದಿಗೆ ದೇಶವನ್ನು ಸ್ವಚ್ಛವಾಗಿಡಲು ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛ ಭಾರತದ ಕನಸು ಕಂಡಿದ್ದರು ಅದರಂತೆ ಕನಸನ್ನ ನನಸು ಮಾಡಲು ಹಲವಾರು ಯೋಜನೆಗಳನ್ನ ಜಾರಿಗೆ ತಂದಿದ್ದಾರೆ ಆ ಯೋಜನೆಗಳನ್ನು ಅಳವಡಿಸಿಕೊಂಡು ಗ್ರಾಮ ಪಟ್ಟಣ ನಗರಗಳನ್ನು ಸ್ವಚ್ಛವಾಗಿಡುವುದು ಆಯಾ ಪಂಚಾಯಿತಿ ಪಟ್ಟಣ ಪಂಚಾಯಿತಿ ಪುರಸಭೆ ನಗರಸಭೆಗಳ ಕೆಲಸವಾಗಿರುತ್ತದೆ.
ಆದರೆ ಮುಗಳಖೋಡದಲ್ಲಿ ಯಾವ ರಸ್ತೆಯಿಂದ ಹೋದರೂ ರಸ್ತೆಯ ಅಕ್ಕ ಪಕ್ಕ ಗಿಡಗಂಟಿಗಳು ತ್ಯಾಜ್ಯ ವಸ್ತುಗಳು ಚರಂಡಿಯಿಂದ ಹೊರಬರುವ ನೀರು ಸೇರಿದಂತೆ ಮುಖ್ಯರಸ್ತೆಯ ಮೇಲೆ ದನಕರಗಳನ್ನು ಕಟ್ಟುವುದು ತಿಪ್ಪೆಯನ್ನು ಒಗಿಯುವುದು ಇವುಗಳನ್ನು ಎದುರಿಸಿ ಮೂಗು ಮುಚ್ಚಿಕೊಂಡು ರಸ್ತೆಯನ್ನು ದಾಟುವ ಪರಿಸ್ಥಿತಿ ಇಲ್ಲಿಯ ಜನರದ್ದಾಗಿದೆ.
ಇಷ್ಟೆಲ್ಲ ಆದರೂ ಸಾರ್ವಜನಿಕರು ಪುರಸಭೆಗೆ ಹೋಗಿ ದೂರು ನೀಡಿದರೆ ನಾಳೆ ನಾಳೆ ಎಂದು ಯಾವ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸದೆ ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ.
ಮುಗಳಖೋಡ ಪುರಸಭೆಗೆ ಹೆಚ್ಚಾಗಿ ಬಿಜೆಪಿ ಪಕ್ಷದಿಂದಲೆ ಸದಸ್ಯರು ಆಯ್ಕೆಯಾಗಿದ್ದರು ಸಹ ಇಲ್ಲಿ ಸ್ವಚ್ಚ ಭಾರತದ ಕನಸು ಕನಸಾಗಿಯೇ ಉಳಿಯುತ್ತಿದೆ.
ಇಲ್ಲಿಯವರೆಗೂ ಪುರಸಭೆಯಿಂದ ಚರಂಡಿ, ಸಿಸಿ ರಸ್ತೆ, ವಿದ್ಯುತ್ ದೀಪ, ಶೌಚಾಲಯ, ಬಸ್ ನಿಲ್ದಾಣ ಸೇರಿದಂತೆ ಯಾವುದೊಂದು ಅಭಿವೃದ್ಧಿ ಕಾರ್ಯ ಪೂರ್ಣವಾಗಿಲ್ಲ. ಅದೆಷ್ಟೋ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಪುರಸಭೆ ಕೇವಲ ಹೆಸರಿಗೆ, ಬಂದ ಅನುದಾನವನ್ನು ಕೊಳ್ಳೆ ಹೊಡೆಯಲು ಇದೆ ಎಂದು ಸಾರ್ವಜನಿಕರ ಆಕ್ರೋಶವಾಗಿದೆ.
ನಾಲ್ಕಾರು ಬಾರಿ ಪತ್ರಿಕೆಗಳಲ್ಲಿ ಸಮಸ್ಯೆಗಳನ್ನು ಕುರಿತು ಸುದ್ದಿಗಳು ಪ್ರಕಟವಾದರು ಇತ್ತ ಕಡೆ ಗಮನಹರಿಸದೆ, ದಿನನಿತ್ಯ ಇದನ್ನು ನೋಡುವ ಅಧಿಕಾರಿಗಳು, ಜನಪ್ರತಿನಿಧಿಗಳು ಯಾಕೆ ಮೌನವಾಗಿದ್ದಾರೆಂದು ತಿಳಿಯದಾಗಿದೆ.
ಪಟ್ಟಣದ ಅಭಿವೃದ್ಧಿಯ ಬಗ್ಗೆ ಸದಸ್ಯರನ್ನು ಸೇರಿಸಿ ಯಾವ ಅಧಿಕಾರಿಗೂ ಕಾಳಜಿ ಇಲ್ಲ. ವರ್ಷ ಒಂದಕ್ಕೆ ಕೋಟಿ ಕೋಟಿ ಅನುದಾನ ಬಂದರೂ ಅದೆಲ್ಲಿ ವ್ಯಯವಾಗುತ್ತಿದೆ ತಿಳಿಯುತ್ತಿಲ್ಲ. ಗೆದ್ದ ಸದಸ್ಯರಿಗಂತೂ ಶಾಸಕ, ಸಂಸದನಾದ ಭ್ರಮೆಯಲ್ಲಿದ್ದಾರೆ.
ಮುಗಳಖೋಡದ ಜೊತೆಗೆ ಪುರಸಭೆಯಾಗಿ ಮೇಲ್ದರ್ಜೆಗೇರಿದ ಹಾರೂಗೇರಿ ಪಟ್ಟಣ ಇಲ್ಲಿಯವರೆಗೂ ಸಾಕಷ್ಟು ಅಭಿವೃದ್ದಿ ಹೊಂದಿದೆ. ಮುಗಳಕೋಡ ಯಾಕೆ ಅಭಿವೃದ್ಧಿ ಆಗುತ್ತಿಲ್ಲ ಎಂಬುವುದು ಜನರಿಗೆ ಪ್ರಶ್ನೆಯಾಗಿಯೇ ಉಳಿದಿದೆ.
ಇನ್ನಾದರೂ ಪುರಸಭೆ ಸದಸ್ಯರು ಶಾಸಕರು ಸಚಿವರು ಸಂಬಂಧಪಟ್ಟ ಅಧಿಕಾರಿಗಳು ಇತ್ತಕಡೆ ಗಮನ ಹರಿಸುತ್ತಾರೆ ಇಲ್ಲವೋ ಎಂದು ಕಾದುನೋಡಬೇಕಿದೆ.