ಹನೂರು:ಮಹದೇಶ್ವರಬೆಟ್ಟ ಮುಖ್ಯ ರಸ್ತೆಯಲ್ಲಿ ಪ್ರಗತಿಯಲ್ಲಿರುವ ಕಿರು ಸೇತುವೆ ಕಾಮಗಾರಿಯ ಕಬ್ಬಿಣ ಸರಳುಗಳು ಅಪಾಯಕ್ಕೆ ಆಹ್ವಾನ ನೀಡುತ್ತಿದೆ..!
ಹನೂರು ಪಟ್ಟಣದ ಎಲ್ಲೇಮಾಳದಿಂದ ಮಲೆ ಮಹದೇಶ್ವರ ಬೆಟ್ಟ ಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮದ್ಯೆ ಕಿರು ಸೇತುವೆಗಳು ಪ್ರಗತಿ ಅಂತದಲ್ಲಿದೆ ಆದರೆ ಆ ರಸ್ತೆಯ ಒಂದು ಬದಿಯಲ್ಲಿ ಕಿರು ಸೇತುವೆ ನಿರ್ಮಾಣವಾಗುತ್ತಿದ್ದು ಮತ್ತೊಂದು ಬದಿಯಲ್ಲಿ ವಾಹನಗಳು ಸಂಚರಿಸುತ್ತಿವೆ ಪ್ರಗತಿಯಲ್ಲಿರುವ ಕಿರು ಸೇತುವೆ ಕಾಮಗಾರಿಯಲ್ಲಿ ಕಬ್ಬಿಣದ ಸರಳಗಳನ್ನು ಅಳವಡಿಸಿದ್ದು ಅಗತ್ಯ ರಕ್ಷಣ ಸೂಕ್ತ ಕ್ರಮವನ್ನು ಕೈಗೊಳ್ಳಬೇಕಿದೆ ನೆನ್ನೆ ಅಷ್ಟೇ ಓರ್ವ ಬೈಕ್ ಸವಾರ ಕಿರು ಸೇತುವೆಗೆ ಡಿಕ್ಕಿ ಹೊಡೆದು ಮೃತಪಟ್ಟಿದ್ದಾನೆ ಹೀಗಾಗಿ ಕಾಮಗಾರಿಯ ಸ್ಥಳದಲ್ಲಿ ಸೂಚನಾ ಫಲಕ ಮುನ್ಸೂಚನೆಗಳನ್ನು ಕೈಗೊಂಡು
ಅಗತ್ಯ ಪರ್ಯಾಯ ರಸ್ತೆ ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟು
ಇಂತಹ ದುರ್ಘಟನೆ ಸಂಭವಿಸಿದಂತೆ ಕ್ರಮ ವಹಿಸಬೇಕು ಎಂದು ಪ್ರಜ್ಞಾವಂತ ನಾಗರಿಕರು ಹಾಗೂ ವಾಹನ ಸವಾರರು ಒತ್ತಾಯಿಸಿದ್ದಾರೆ
ಈ ರಸ್ತೆಯ ಮಾರ್ಗದಲ್ಲಿ ಬೆಂಗಳೂರು ಮೈಸೂರು ಕೊಳ್ಳೇಗಾಲ ಕಡೆಗಳಿಂದ ಹನೂರು ಮಾರ್ಗವಾಗಿ ನೂರಾರು ವಾಹನಗಳು ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಲ್ಲಿದ್ದು ರಸ್ತೆ ಬದಿಯಲ್ಲಿ ಕಬ್ಬಿಣದ ಸರಳುಗಳು ಇರುವುದರಿಂದ ಪ್ರಯಾಣಿಕರಿಗೆ ಅಡಚಣೆ ಎದುರಾಗುತ್ತಿದೆ ಅಲ್ಲದೆ ರಸ್ತೆಯ ಇನ್ನೊಂದು ಬದಿಯಲ್ಲಿ ವಿಸ್ತಾರವಾದ ಜಾಗವಿಲ್ಲದ ಹಿನ್ನೆಲೆ ವಾಹನ ಸಾವರರು ಭಯದಿಂದಲೇ ಸಂಚರಿಸಬೇಕಾದ ಪರಿಸ್ಥಿತಿ ಎದುರಾಗಿದೆ ಅಲ್ಲದೆ ರಾತ್ರಿ ವೇಳೆ ಪ್ರಯಾಣಿಕರ ಸಂಚಾರ ಹೇಳತಿರದಂತಾಗಿದ್ದು ಇಂತಹ ಅಪಘಾತ ಘಟನೆಗಳು ಹಾಗಾಗೆ ಜರುಗಲಿದೆ ಇದಕ್ಕೆ ಕಡಿವಾಣ ಹಾಕಲು ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಬೇಕು ಎಂಬ ಕೂಗು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ.