ಹಾವೇರಿ/ಹಾನಗಲ್:ಆಯುಷ್ ಇಲಾಖೆ ಹಾವೇರಿ ಸರ್ಕಾರಿ ಯುನಾನಿ ಚಿಕಿತ್ಸಾಲಯ ಕೊಪ್ಪರಸಿಕೊಪ್ಪದಲ್ಲಿ ಏಳನೆಯ ರಾಷ್ಟ್ರೀಯ ಯುನಾನಿ ದಿನಾಚರಣೆಯನ್ನು ಮಾಡಲಾಯಿತು.ಈ ದಿನಾಚರಣೆಯ ಸ್ವಾಗತ ಭಾಷಣವನ್ನು ಡಾಕ್ಟರ್ ಆನಂದ ನಾಯಕ ಮಾಡಿದರು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶಾಸಕರಾದ ಸನ್ಮಾನ್ಯ ಶ್ರೀನಿವಾಸ ಮಾನೆ ವಹಿಸಿದ್ದರು,ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಮಂಜುಳಾ ರಾಮಚಂದ್ರ ಓಲೆಕಾರ ವಹಿಸಿದ್ದರು ಪ್ರಾತ್ಸಾವಿಕ ಭಾಷಣವನ್ನು ಜಿಲ್ಲಾ ಆಯುಷ್ ಅಧಿಕಾರಿ ಡಾಕ್ಟರ ಜೆ.ಸಿ.ನಿಡಗುಂದಿ ಅವರು ಯುನಾನಿ ವೈದ್ಯ ಪದ್ಧತಿ ಕುರಿತು ಮಾತನಾಡಿದರು ಯುನಾನಿ ಉಳಿವಿಗಾಗಿ ಹಕ್ಕಿಮ ಅಜ್ಮಲ ಖಾನ ಅವರ ಪಾತ್ರ ಮುಖ್ಯವಾದದ್ದು ಅವರ ಸ್ಮರಣಾರ್ಥವಾಗಿ ರಾಷ್ಟ್ರೀಯ ಯುನಾನಿ ದಿನಾಚರಣೆಯಾಗಿ ಮಾಡಲಾಗುವುದು ಎಂದು ತಿಳಿಸಿದರು ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕರಾದ ಶ್ರೀನಿವಾಸ ಮಾನೆ ಅವರು ಉದ್ಘಾಟಿಸಿ ಯುನಾನಿ ವೈದ್ಯ ಪದ್ಧತಿಯ ಕುರಿತು ಉತ್ತಮವಾದ ಯುನಾನಿ ಔಷಧಿಯನ್ನು ಬಳಸಿಕೊಂಡು ಆರೋಗ್ಯಕರವಾದ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ನುಡಿದರು ಯುನಾನಿ ಪದ್ಧತಿಯ ಔಷಧಿ ಭಾರತದಲ್ಲಿ ರೂಡಿ ತಂದ ಹಕ್ಕಿಮ್ ಅಜ್ಮಲ್ ಖಾನ್ ಅವರನ್ನು ಸ್ಮರಿಸಿದರು ಅಧ್ಯಕ್ಷೀಯ ಭಾಷಣವನ್ನು ಶ್ರೀಮತಿ ಮಂಜುಳಾ ರಾಮಚಂದ್ರ ಓಲೆಕಾರ ಮಾತನಾಡಿ,ನಮ್ಮ ಗ್ರಾಮದಲ್ಲಿರುವ ಯುನಾನಿ ಚಿಕಿತ್ಸಾಲಯದ ಔಷಧಿಯನ್ನು ತೆಗೆದುಕೊಂಡು ಆರೋಗ್ಯವಂತರಾಗಿ ಬಾಳೋಣ ಎಂದು ನುಡಿದರು ನಂತರ ಸರ್ಕಾರಿ ಯುನಾನಿ ಜಿಕಿತ್ಸಾಲಯದಲ್ಲಿ ಉಪಚಾರವನ್ನು ಪಡೆದುಕೊಂಡು ಆರೋಗ್ಯವಂತರಾದ ಶ್ರೀಮತಿ ಪಾರಮ್ಮ ಪಾಟೀಲ್ ಮಾತನಾಡಿ ಯುನಾನಿ ಪದ್ದತಿಯ ಔಷಧಿಯು ಸರ್ವೇಸಾಮಾನ್ಯ ಔಷಧಿಯಲ್ಲ ಅದು ಕಾಯಿಲೆಗಳನ್ನು ಬೇರು ಸಮೇತ ಕಿತ್ತುವಗೆಯುವ ಔಷಧಿಯಾಗಿದೆ ಎಂದು ವೈದ್ಯರಾದ ಡಾಕ್ಟರ್ ಮೈನುದ್ದಿನ್ ಲೋಹರ ಬಗ್ಗೆ ಕೊಂಡಾಡಿದರು. ಎಸ್ ಬಿ ಐ ಸಿಬ್ಬಂದಿ ಆದ ಶ್ರೀ ಬಾಲಚಂದ್ರ ವಾಲ್ಮೀಕಿ ಮತ್ತು ಶ್ರೀ ಶಮ್ಮನಗೌಡ ಪಾಟೀಲ ಇವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದ ಉಪಸ್ಥಿತರಾದ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಶಿವಾಜಿ ಸಾಳಂಕಿ, ಮಂಜುನಾಥ್ ನಾಗೋಜಿ, ಮಕ್ಬೂಲಮ್ಮದ್ ಬಡಗಿ ಶ್ರೀಮತಿ ನನ್ನೀಮಾ ನಾಸಿಪುಡಿ, ಗೀತಾ ವಡ್ಡರ, ಕಲಾವತಿ ದೇಸಾಯಿ, ಗ್ರಾಮದ ಮುಖಂಡರಾದ, ಶ್ರೀ ಅಶೋಕ ಜಾಧವ , ಹಾವೇರಿ ಜಿಲ್ಲೆಯ ಎಲ್ಲಾ ತಾಲೂಕಿನ ಆಯುಷ್ಯ ವೈದ್ಯಾಧಿಕಾರಿಗಳು ಮತ್ತು ಕಚೇರಿಯ ಸಿಬ್ಬಂದಿಗಳು ಮತ್ತು ಪತಂಜಲಿ ಆಯುಷ್ ಯೋಗಾ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಮುಕ್ತಾಯದ ವೇಳೆ ಸರ್ಕಾರಿ ಯುನಾನಿ ಚಿಕಿತ್ಸಾಲಯ ಕೊಪ್ಪರಿಸಿಕೊಪ್ಪದ ಡಾಕ್ಟರ್ ಶ್ರೀ ಮೈನುದ್ದಿನ್ ಲೋಹಾರ ವಂದನಾರ್ಪಣೆ ಮಾಡಿದರು ಕಾರ್ಯಕ್ರಮದ ನಂತರ ಸಾರ್ವಜನಿಕರಿಗೆ ಉಚಿತ ಆರೋಗ್ಯ ಶಿಬಿರ ಆಯುಷ್ ಅರಿವು ಮಾಡಿ ಉಚಿತ ಔಷಧಿ ವಿತರಣೆ ಮಾಡಲಾಯಿತು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.