ಹನೂರು :ಪವರ್ ಟಿ ವಿ ನಡೆಸಿದಂತಹ ಹನೂರು ವಿಧಾನಸಭಾ ಕ್ಷೇತ್ರದ ವೋಟಿಂಗ್ ಸಮೀಕ್ಷೆಯಲ್ಲಿ ಹನೂರು ಕ್ಷೇತ್ರದಲ್ಲಿ ವನ್ನಿಕುಲ ಕ್ಷತ್ರಿಯ ಸಮುದಾಯದವರು 2023ರ ಸಮೀಕ್ಷೆಯ ಪ್ರಕಾರ 25ಸಾವಿರಕ್ಕು ಅಧಿಕ ಜನರಿದ್ದು ಈ ಸಮುದಾಯದ ಹೆಸರನ್ನು ಕೈ ಬಿಟ್ಟಿರುವುದು ಹಾಗೂ ಈ ಸಮುದಾಯಕ್ಕೆ ಎಲ್ಲಾ ರಂಗದಲ್ಲೂ ಹಿಂದೆ ನೂಕುತಿರುವದು ವನ್ನಿಕುಲ ಸಮುದಾಯ ಜನಾಂಗದ ಶಾಪವಾಗಿದೆ ಹಾಗೂ ವನ್ನಿಕುಲ ಕ್ಷತ್ರಿಯ ಸಮಾಜವನ್ನು
ಎಲ್ಲಾ ಅಭ್ಯರ್ಥಿಗಳು ಕಡೆಗಣಿಸಿರುವದು ಈ ಸಮುದಾಯಕ್ಕೆ ಮಾಡಿರುವ ಅವಮಾನ ಹಾಗೂ ಮುಂದಿನ ದಿನಗಳಲ್ಲಿ ವನ್ನಿಕುಲ ಕ್ಷತ್ರಿಯ ಸಮಾಜಕ್ಕೆ ಸರಿಯಾದ ಸ್ಥಾನ ಮಾನ ನೀಡದೆ ಹೋದರೆ ಚುನಾವಣೆಯಲ್ಲಿ ಸರಿಯಾದ ಬುದ್ದಿ ಕಲಿಸುತ್ತೇವೆ ಎಂದು ವನ್ನಿಕುಲ ಕ್ಷತ್ರಿಯ ಸಮಾಜದ ಮುಖಂಡರು ಹಾಗೂ ವನ್ನಿಕುಲ ಕ್ಷತ್ರಿಯ ಜನಾಂಗದ ಯುವ ಬಳಗ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವನ್ನಿಕುಲ ಸಮಾಜದ ಪ್ರದೀಪ್ ಕುಮಾರ್ ಕೆ ಹಾಗೂ ಬಸವರಾಜು ರವರು ತಿಳಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.