ಯಾದಗಿರಿ ಯಾದಗಿರಿ ತಾಲೂಕಿನ ಸುಕ್ಷೇತ್ರ ಅಬ್ಬೆ ತುಮಕೂರು ಈ ಭಾಗದ ಆರಾಧ್ಯದೈವ ಶ್ರೀ ವಿಶ್ವಾರಾಧ್ಯ ರಥೋತ್ಸವ ಜರುಗಲಿದೆ ಎಂದು ಡಾ|| ಸುಭಾಶ್ಚಂದ್ರ ಕೌಲಗಿ ಪತ್ರಿಕಾ ಪ್ರಕಟಣೆ ಹೇಳಿದರು.
ಫೆ: ೨೫ ರಂದು ನಡೆಯಲಿದ್ದು ಮಠದ ಪೀಠಾಧಿಪತಿಗಳಾದ ಡಾ||ಗಂಗಾಧರ ಸ್ವಾಮೀಜಿಗಳ ನೇತೃತ್ವದಲ್ಲಿ ರಥೋತ್ಸವ (ಜಾತ್ರಾ) ಮಹೋತ್ಸವದ ಸಿದ್ದತೆ ಭರದಿಂದ ಸಾಗಿದೆ ಎಂದು ತಿಳಿಸಿದರು.
ಫೆ: ೧೪ ರಿಂದ ಮಂಗಳವಾರ ಸಂಜೆ ಅಬ್ಬೆ ತುಮಕೂರಿನ ಶ್ರೀ ವಿಶ್ವಾರಾಧ್ಯ ಪುರಾಣ ಪ್ರಾರಂಭೋತ್ಸವ ಮಾಡುವುದರ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗುವುದು. ಮಲ್ಲಿಕಾರ್ಜುನ ಶಾಸ್ತಿ ಐನಾಪುರ ಸಾಹಿತ್ಯ ಸಂಗೀತದೊಂದಿಗೆ ಶ್ರೀ ವಿಶ್ವಾರಾಧ್ಯ ಪುರಾಣವನ್ನು ೧೧ ದಿನಗಳ ಕಾಲ ನೋಡಿಸಿಕೊಂಡು ಹೋಗಲಾಗುವದು. ಶ್ರೀ ಮಠದ ಜಾತ್ರೆಗಾಗಿ ಬೃಹತ್ ಪೆಂಡಾಲ್ ಹಾಕುವ ಮೂಲಕ ಕಾರ್ಯಕ್ರಮ ಆರಂಭಿಸಲಾಗುತ್ತಿದೆ. ಶ್ರೀ ಮಠದ ಭಕ್ತರು ಜಾತ್ರೆಯ ಪೊರ್ವ ಸಿದ್ದತೆ ನಡೆದಿದೆ ಎಂದರು. ಪ್ರತಿ ದಿನ ರಾತ್ರಿ ೮ ಗಂಟೆಗೆ ಶ್ರೀ ವಿಶ್ವಾರಾಧ್ಯ ಪುರಾಣ ಪ್ರವಚನ ನಿರಂತರ ೧೧ ದಿನಗಳ ಕಾಲ ನಡೆಯಲಿದೆ. ಫೆ: ೧೮ ರಂದು ಮಾಹಾಶಿವರಾತ್ರಿ ಹಾಗೂ ಫೆ: ೨೦ ರಂದು ಮಾಹಾಶಿವರಾತ್ರಿ ಅಮಾವಾಸೆಯ ಕಾರ್ಯಕ್ರಮ ನಡೆಯಲಿವೆ. ಫೆ: ೨೪ ರೇ ಸಂಜೆ ಪುರಾಣ ಮಹಾ ಮಂಗಲ ಗೊಳ್ಳುವುದು.
ಫೆ: ೨೫ ರೇ ಸಂಜೆ ೬:೩೦ ಗಂಟೆಗೆ ಶ್ರೀ ವಿಶ್ವಾರಾಧ್ಯರ ಭವ್ಯವಾದ ರಥೋತ್ಸವ ಸಡಗರದಿಂದ ನಡೆಯಲಿದೆ. ನಂತರ ರಾತ್ರಿ ೮ ಗಂಟೆಗೆ ಮಾನವಧರ್ಮ ಸಮಾವೇಶ ಜರುಗಲಿದೆ. ಈ ಕಾರ್ಯಕ್ರಮಕ್ಕೆ ನಾಡಿನ ಕವಿ ಮತ್ತು ಸಾಹಿತಿಗಳು ಹಾಗೂ ರಾಜಕೀಯ ನಾಯಕರುಗಳು ಭಾಗವಹಿಸುವರು.
ವರದಿ: ರಾಜಶೇಖರ ಮಾಲಿ ಪಾಟೀಲ್ ಶಹಾಪುರ