ಹನೂರು:ತಾಲೂಕಿನ ಬಂಡಳ್ಳಿ ಗ್ರಾಮ ಪಂಚಾಯಿತಿಯ ಎರಡನೇ ವಾರ್ಡಿನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅಬ್ರಾರ್ ಅಹಮ್ಮದ್ ರವರ ನಿಧನದಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಜುಲ್ಫಿಕಾರ್ ಅಹಮದ್ ನಾಮಪತ್ರ ಸಲ್ಲಿಸಿದರು. ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾದ ಜವಾದ್ ಬೇಗ್ ಮತ್ತು ಸೈಯದ್ ಬಶಾರತ್ ಇಬ್ಬರು ಸದಸ್ಯರು ಕ್ರಮೇಣ ನಾಮಪತ್ರವನ್ನು ಸಲ್ಲಿಸಿದರು.
ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಸಮಿಉಲ್ಲಾ, ಜಸಿಮ್ ಪಾಶ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಆದ ಶಾಗ್ಯ ಬಾಬು,ಅಬ್ದುಲ್ ಖಾಲಿದ್ , ಗುರುಗಳು ಆದ ಸಯ್ಯದ್ ತಾರೀಕ್ ಗ್ರಾಮ ಪಂಚಾಯತ್ ಸದಸ್ಯರು ಆದ ತಮ್ಮಯ್ಯ, ನಾಗರಾಜು, ಮಹದೇವಪ್ಪ, ಸಿದ್ದು ನಾಯಕ್,ಶ್ರೀನಿ,ಮುಖಂಡರಾದ ಮಾರಪ್ಪ,ರಾಚಪ್ಪ, ನಂಜಪ್ಪ,ಪುಟ್ಮಾದ ಹಾಗೂ ಎಲ್ಲಾ ಕಾರ್ಯಕರ್ತರು ಯುವ ಕಾರ್ಯಕರ್ತರು ಹಾಜರಿದ್ದರು.
ವರದಿ:ಉಸ್ಮಾನ್ ಖಾನ್
