ಹನೂರು:ತಾಲೂಕಿನ ಲೋಕೋಪಯೋಗಿ ಗೃಹದಲ್ಲಿ ನಡೆದ ಸೇವಾಲಾಲ್ ಜಯಂತಿ ಕುರಿತು ಮಾತನಾಡಿದ ಉಪ ತಹಸೀಲ್ದಾರ್ ಧನಂಜಯ ರವರು ರವರು ತಮ್ಮ ಕಾಯಕವೆ ಕೈಲಾಸವೆಂಬಂತೆ ದುಡಿಯುವ ವರ್ಗವೆ ಬಂಜಾರ ಸಮುದಾಯ ಈ ಕುಲದಲ್ಲಿ ಹುಟ್ಟಿರುವ
ಸಂತ ಸೇವಾಲಾಲ್ ರವರು ಶ್ರೇಷ್ಠ ಸಂತರಾಗಿದ್ದಾರೆ ಅವರ ತತ್ವ ಆದರ್ಶಗಳು ಇಂದಿಗೂ ಆದರ್ಶನೀಯವಾಗಿವೆ ಎಂದರು.
ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ವತಿಯಿಂದ ಪಟ್ಟಣದ ಲೋಕೋಪಯೋಗಿ ವಸತಿಗೃಹದಲ್ಲಿ ಆಯೋಜಿಸಲಾಗಿದ್ದ ಸಂತ ಸೇವಾಲಾಲ್ ರವರ 285ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು
ಬಂಜಾರ ಸಮುದಾಯಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿರುವಂತಹ ಆದರ್ಶ ಪುರುಷ ಸೇವಾಲಾಲ್,ಅಂತಹ ಮಹಾನ್ ವ್ಯಕ್ತಿಗಳು ಎಲ್ಲಾ ಜನಾಂಗಕ್ಕೆ ಸೇರಿದವರು ಅವರನ್ನು ನಾವೆಲ್ಲರೂ ಸ್ಮರಣೆ ಮಾಡುವುದು ಒಂದು ಉತ್ತಮ ಬೆಳವಣಿಗೆ ಹಾಗೂ
ಸಂತ ಸೇವಾಲಾಲ್ ರ ವಿಚಾರಧಾರೆಗಳನ್ನು ಇಂದಿನ ಯುವ ಪೀಳಿಗೆಗಳು ಇನ್ನಷ್ಟು ಸರಳ ರೀತಿಯಲ್ಲಿ ಉನ್ನತ ಮಟ್ಟದ ಸಂಶೋಧನೆಗಳನ್ನು ನಡೆಸಿ ಹೊರಹಾಕುವ ಮೂಲಕ ಸಮುದಾಯದ ಹಿನ್ನೆಲೆ ಬಗ್ಗೆ ತಿಳಿಸಿಕೊಡಬೇಕು ಎಂದರು.
ಇದೇ ಸಮಯದಲ್ಲಿ ಕಂದಾಯ ಇಲಾಖೆಯ ಎಲ್ಲಾ ಅಧಿಕಾರಿಗಳು ಹಾಗೂ ನೌಕರರು ಜಿಲ್ಲಾ ಬಂಜಾರ ನೌಕರರ ಸಂಘದ ಗೌರವಾಧ್ಯಕ್ಷರಾದ ಶಾಂತರಾಜು, ಅಧ್ಯಕ್ಷರಾದ ಪಳನಿ ಸ್ವಾಮಿ ಉಪಾಧ್ಯಕ್ಷ ಮುನಿ ನಾಯಕ ಕಾರ್ಯದರ್ಶಿ ಬಾಲು ನಾಯಕ ಕೃಷ್ಣ ನಾಯ್ಕ .ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮುರುಗೇಶ್, ಮುಖಂಡರಾದ ಬಾಲು ನಾಯ್ಕ ರವಿ ನಾಯಕ ಸೇರಿದಂತೆ ವಿವಿಧ ಗ್ರಾಮದ ಸೇವಾಲಾಲ್ ಸಂಘದ ಮುಖಂಡರು ಮತ್ತು ಸದಸ್ಯರು ಹಾಜರಿದ್ದರು.
ವರದಿ ಉಸ್ಮಾನ್ ಖಾನ್.