ಧಾರವಾಡ:ಜಿಲ್ಲಾಡಳಿತ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾದ ಬಂಜಾರ ಸಮುದಾಯದ ಏಕೈಕ ಸಂತ ಸೇವಾಲಾಲರ 284 ನೇ ಜಯಂತಿಯ ಅಂಗವಾಗಿ ಇಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರು ಧಾರವಾಡದ ಡಿ.ಸಿ ಕಚೇರಿಯ ಹತ್ತಿರ ಸಂತ ಸೇವಾಲಾಲರ ಭಾವಚಿತ್ರಕ್ಕೆ ಪುಷ್ಪನಮನಗಳನ್ನು ಸಲ್ಲಿಸುವ ಮೂಲಕ ಬೃಹತ್ ಮೆರವಣಿಗೆಗೆಗೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಬಂಜಾರ ಸಮಾಜದ ಮುಖಂಡರಾದ ಶ್ರೀ ನಾಗರಾಜ ನಾಯಕ,ಶ್ರೀ ಕೃಷ್ಣಾಜಿ ಚವಾಣ್,ಶ್ರೀ ಪರಶುರಾಮ ರಾಠೋಡ,ಶ್ರೀ ಭೀಮಶಿ ನೇಮಿಕ್ಕಲ, ಅಪರ ಅಧಿಕಾರಿಗಳಾದ ಶ್ರೀ ಶಿವು ಭಜಂತ್ರಿ, ಧಾರವಾಡ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಕುಮಾರ ಬೆಕ್ಕೇರಿ, ನಾಗರಾಜ ನಾಯ್ಕ್,ಕೃಷ್ಣಾ ಶ್ಯಾಮ್ ಲಮಾಣಿ, ಗೋಪಾಲ ಲೋ ಲಮಾಣಿ,ಅಜಯ್ ರಾಠೋಡ್, ಲಿಂಬಾಜಿ ಸೋ ಲಮಾಣಿ,ಕಿಶೋರ್ ಲಮಾಣಿ, ಗಗನಕುಮಾರ ರಾಠೋಡ್ ಹಾಗೂ ಸಮಾಜದ ಎಲ್ಲಾ ಬಾಂಧವರು ಉಪಸ್ಥಿತರಿದ್ದರು.
