ಸಿಂಧನೂರು:ದೇಶದ ಬಂಜಾರ ಸಮುದಾಯದ ಏಕೈಕ ಸಂತ ಸೇವಾಲಾಲ್ ಅವರ 284ನೇ ಜಯಂತೋತ್ಸವ ಫ಼ೆಬ್ರವರಿ 15ರಂದು ಸಿಂಧನೂರು ತಾಲೂಕಿನ ಜನತಾ ಕಾಲೋನಿಯಲ್ಲಿ ಸೇವಾಲಾಲ್ ಜಯಂತಿ ಆಚರಿಸಲಾಯಿತು.
ಈ ಸಂತರ ಬಗ್ಗೆ ಅನೇಕ ಐತಿಹಾಸಗಳಿವೆ 1739ರಲ್ಲಿ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಭೀಮಾನಾಯ್ಕ ಮತ್ತು ಧರ್ಮಣಿ ಮಾತೆ ದಂಪತಿಯ ಮಗನಾಗಿ ಜನ್ಮ ತಾಳಿದ ಸಂತ ಸೇವಾಲಾಲ್ ಸೂರಗೊಂಡನಕೊಪ್ಪದಲ್ಲಿ ಅನೇಕ ಪವಾಡಗಳನ್ನು ನಡೆಸಿದ್ದಾರೆ. ಬಾಲಕನಾಗಿ ಬೆಳೆಯುತ್ತಿದ್ದಾಗ ಚಿನ್ನಿಕಟ್ಟೆ ಸುತ್ತಮುತ್ತ ಗೋವುಗಳನ್ನು ಮೇಯಿಸಲು ಹೋಗುತ್ತಿದ್ದಾಗಲೇ ಸಹಪಾಠಿಗಳೊಂದಿಗೆ ಆಟವಾಡುತ್ತಾ ಪವಾಡಗಳನ್ನು ತೋರುತ್ತಿದ್ದರು. ಅವರು ಪವಾಡಗಳು ಬಂಡಿಯನ್ನು ನಗಾರಿಯನ್ನಾಗಿ ಭಾರಿಸುವುದು, ಕೆಸರನ್ನು ಹುಗ್ಗಿ ಪಾಯಸವನ್ನಾಗಿಸುವುದು,ನೀರನ್ನು ತುಪ್ಪ ಮಾಡಿ ಯಜ್ಞ ಮಾಡುತ್ತಿದ್ದರು ಎನ್ನುವ ಪ್ರತಿತಿಯಿದೆ ದೇವಿ ಮರಿಯಮ್ಮ ಅವರಿಂದ ದೊರೆತ ದಿವ್ಯ ಶಕ್ತಿಯನ್ನು ಬಂಜಾರರು ಸೇರಿ ಅಲೆಮಾರಿ ಜೀವನ ನಡೆಸುವ ಸಮುದಾಯಗಳನ್ನು ಉದ್ದರಿಸಲು ಬಳಸಿದ ಸಂತ ಇವರು ಎಂಬ ಕಥೆಗಳು ಚಾಲ್ತಿಯಲ್ಲಿವೆ. ಮಹಾರಾಷ್ಟ್ರದ ಪೌರಂಗಡದಲ್ಲಿ ಸೇವಾಲಾಲರು ಐಕ್ಯರಾದರು ಎಂದು ಇತಿಹಾಸ ಹೇಳುತ್ತದೆ. ಈ ಕಾರ್ಯಕ್ರಮದಲ್ಲಿ ಮಾಜಿ ಎಂ.ಪಿ ವಿರುಪಾಕ್ಷಪ್ಪ ಅವರು ಮಾತನಾಡಿ ಸಮಾಜದ ಬಂಧುಗಳಿಗೆ ಶುಭ ಕೋರಿದರು ಮತ್ತು ಸಮಾಜದ ಕೆಲವು ಮುಖಂಡರಿಗೆ ಸನ್ಮಾನ ಮಾಡಲಾಯಿತು ಹಾಗೂ ಈ ಸಂದರ್ಭದಲ್ಲಿ ಕಿಚ್ಚ ಸುರೇಶ್ ಹಚ್ಚೋಳ್ಳಿ, ಅಭಿಷೇಕನಾಡಗೌಡ, ತಾಲೂಕಿನ ತಹಸಿಲ್ದಾರ್,ಶಿವನಗೌಡ ಗೊರೆಬಾಳ್, ರವಿ ರಾಥೋಡ್, ಲಕಪಥಿ ರಾಥೋಡ್, ಮೂರ್ತಿ ನಾಯ್ಕ, ಲಕ್ಷ್ಮಣ ನಾಯ್ಕ, ಚೆನ್ನಪ್ಪ, ಶೇಖರ್, ಕರಾಟೆ ಧನರಾಜ್, ಚಂದಪ್ಪ, ಸಮಾಜದ ಹಿರಿಯ ಮುಖಂಡರು ಉಪಸ್ಥಿತರಿದ್ದರು.
ವರದಿ-ವೆಂಕಟೇಶ.ಹೆಚ್.ಬೂತಲದಿನ್ನಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.