ಚೇಳಾೖರು, ಮಂಗಳೂರು , ಫೆಬ್ರವರಿ ೧೬ : ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನೂತನ ಕಂಪ್ಯೂಟರ್ ಲ್ಯಾಬ್ ನ ಉದ್ಘಾಟನೆಯನ್ನು ರೋಟರಿ ಸಂಸ್ಥೆಯ ಜಿಲ್ಲಾ ಗವರ್ನರ್ ಶ್ರೀ ಪ್ರಕಾಶ್ ಕಾರಂತ್ ನೆರವೇರಿಸಿದರು. ತಮ್ಮ ಉದ್ಘಾಟನಾ ಭಾಷಣದಲ್ಲಿ ರೋಟರಿಯ ಕಾರ್ಯ ವೈಖರಿಯನ್ನು ವಿವರಿಸುತ್ತಾ ತ್ವರಿತ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಬದಲಾವಣೆಯನ್ನು ಒಪ್ಪಿ ಬದಲಾಗಬೇಕು ಮತ್ತು ಬದಲಾವಣೆಯನ್ನು ಒಪ್ಪಿಕೊಳ್ಳದ ಸಂಸ್ಥೆಯಾಗಲಿ ಅಥವಾ ವ್ಯಕ್ತಿಯಾಗಲಿ ಇತಿಹಾಸ ಸೇರುವರು ಹಾಗೂ ಮಹಿಳೆಯರಿಗೆ ಸಮಾಜದಲ್ಲಿ ಸೂಕ್ತ ಸ್ಥಾನ ಮಾನ ಕೊಟ್ಟು ಗೌರವಿಸಬೇಕು, ತಪ್ಪಿದಲ್ಲಿ ಅಂಥಾ ಸಮಾಜ ಅಥವಾ ದೇಶ ಅವನತಿ ಹೊಂದುವುದೆಂದು ಎಚ್ಚರಿಸಿದರು.ಕಾಲೇಜಿಗೆ ರೋಟರಿ ಸಂಸ್ಥೆ ಮತ್ತು ಕೆನರಾ ಬ್ಯಾಂಕ್ ಜಂಟಿಯಾಗಿ ಕೊಡಮಾಡಿದ ಕಂಪ್ಯೂಟರ್, ಪ್ರೊಜೆಕ್ಟರ್ ಮತ್ತು ಕಂಪ್ಯೂಟರ್ ಡೆಸ್ಕ್ ಗಳನ್ನು ಸದುಪಯೋಗ ಪಡಿಸಿಕೊಂಡು ನೂತನ ಶಿಕ್ಷಣ ನೀತಿಗೆ ಅನುಗುಣವಾಗಿ ವಿದ್ಯಾರ್ಥಿಗಳು ಕಂಪ್ಯೂಟರ್ ಶಿಕ್ಷಣ ಪಡೆದುಕೊಳ್ಳಬೇಕಾಗಿ ಕರೆ ಕೊಟ್ಟರು. ರೋಟರಿ ಬೈಕಂಪಾಡಿ ಯ ಅಧ್ಯಕ್ಷ ಶ್ರೀ ಅಶೋಕ.ಎನ್ ರವರು ರೋಟರಿ ಸಂಸ್ಥೆಯ ವಿವಿಧ ಯೋಜನೆ ಯನ್ನು ವಿವರಿಸುತ್ತಾ ಮಹಿಳೆಯರ ಸಶಕ್ತಿಕರಣದ ಸಲುವಾಗಿ ರೋಟರಿಯಿಂದ ಹೊಲಿಗೆ ತರೆಬೇತಿ ಪಡೆದ ಮಹಿಳೆಯರಿಗೆ ಸೆರ್ಟಿಫಿಕೇಟ್ ವಿತರಿಸಿದರು. ತೋಕೂರು ಸುಬ್ರಮಣ್ಯ ಅಂಗನವಾಡಿಗೆ ಕುಡಿಯುವ ನೀರಿನ ಶುದ್ದೀಕರಣ ಯಂತ್ರವನ್ನು ಹಸ್ತಾ೦ತರಿಸಿದರು. ರೋಟರಿ ಜಿಲ್ಲಾ ಉಪ ಗವರ್ನರ್ ಶ್ರೀ. ಎಸ್.ಬಾಲಕೃಷ್ಣ ಮತ್ತು ಝೋನಲ್ ಸದಸ್ಯ ಶ್ರೀ . ಜಯಕುಮಾರ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಶ್ರೀ . ವೆಂಕಟೇಶ ಶೆಟ್ಟಿ, ಸದಸ್ಯ ಶ್ರೀ ಚಂದ್ರಶೇಖರ ಹೆಬ್ಬಾರ್, ಶ್ರೀ . ಜಯಾನಂದ ಮತ್ತು ಶ್ರೀ. ಪುಷ್ಪರಾಜ ಶೆಟ್ಟಿ ಯವರು ಚೇಳಾೖರು ಗ್ರಾಮ ಮತ್ತು ರೋಟರಿ ಸಂಸ್ಥೆಯ ಅವಿನಾಭಾವ ಸಂಬಂಧ ವನ್ನು ನೆನಪಿಸಿದರು ಮತ್ತು ಮುಂದೆಯೂ ಸಂಸ್ಥೆಯ ಸಹಕಾರವನ್ನು ಬಯಸಿದರು ಮತ್ತು ರೋಟರಿ ಸದಸ್ಯರಲ್ಲಿ ನಮ್ಮ ಕಾಲೇಜಿನಬಗ್ಗೆ ಮಾಹಿತಿ ಯನ್ನು ಹಂಚಿ ವಿದ್ಯಾರ್ಥಿ ಗಳು ಮುಂದಿನ ಶೈಕ್ಷಣಿಕ ವರ್ಷ ಧಾಖಲಾತಿ ಗೊಳಿಸುವಂತೆ ವಿನಂತಿಸಿಕೊಂಡರು . ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ತೆರೇಸಾ ರವರು ರೋಟರಿಯಿಂದ ಕೊಡಲ್ಪಟ್ಟ ಕಂಪ್ಯೂಟರ್ ಗಳನ್ನು ಸದ್ಬಳಕೆ ಮಾಡಿ ಜ್ಞಾನ ವೃದ್ಧಿಗೊಳಿಸಬೇಕಾಗಿ ವಿದ್ಯಾರ್ಥಿಗಳಿಗೆ ಸಲಹೆ ಇತ್ತರು. ಪ್ರಭಾರಿ ಪ್ರಾಂಶುಪಾಲ ಶ್ರೀ ಚಂದ್ರನಾಥ ರವರು ಈ ಕಂಪ್ಯೂಟರ್ ಲ್ಯಾಬ್ ಆರಂಭಿಸುವ ಬಗ್ಗೆ ಪ್ರಾಂಶುಪಾಲೆ ಶ್ರೀಮತಿ ಡಾ. ಜ್ಯೋತಿ ಅವರ ಜೊತೆ ಕೆನರಾ ಬ್ಯಾಂಕ್ ಸಂಪರ್ಕಿಸಿ ಪಡೆದುಕೊಂಡದ್ದು ಮತ್ತು ಡೆಸ್ಕ್ ಬಗ್ಗೆ ಸುರತ್ಕಲ್ ನ ಶೃಂಗಾರ್ ಮಾಲಕ ಶ್ರೀ . ಶ್ರೀಕಾಂತ್ ಶೆಟ್ಟಿ ಯವರನ್ನು ಸಂಪರ್ಕಿಸಿ ರೋಟರಿ ಸಂಸ್ಥೆಯಿಂದ ಪಡೆದುಕೊಳ್ಳುವಲ್ಲಿ ಯಶಸ್ವಿಯಾದ ಬಗ್ಗೆ ವಿವರಿಸಿದರು. ಸಭೆಯ ಮುಂಭಾಗ ರೋಟರಿ ಸಂಸ್ಥೆಯ ಅನೇಕ ಪದಾಧಿಕಾರಿಗಳು, ಉಪನ್ಯಾಸಕ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕಿ ಕು. ಮಮತ ಸ್ವಾಗತಿಸಿದರು. ಉಪನ್ಯಾಸಕಿ ಶ್ರೀಮತಿ. ಶೋಭಾ ಶರ್ಮ ಕಾರ್ಯಕ್ರಮ ನಿರೂಪಿಸಿದರು.ಉಪನ್ಯಾಸಕಿ ಕು. ಹೇಮಶ್ರೀ ಧನ್ಯವಾದ ಸಮರ್ಪಣೆ ಗೈದರು. ರಾಷ್ಟ್ರ ಗೀತೆ ಹಾಡುವದರೊಂದಿಗೆ ಕಾರ್ಯಕ್ರಮ ಮುಕ್ತಾಯ ಗೊಂಡಿತು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.