ಬೆಳಗಾವಿ ಜಿಲ್ಲೆಯ ಹಿರೇಬಾಗೆವಾಡಿಯಲ್ಲಿ ಗೋಕಾಕ ಸಾಹುಕಾರನ ಅಭಿಮಾನಿಗಳ ಸಮಾವೇಶ ಇತ್ತಿಚೆಗೆ ಅದ್ದೂರಿಯಾಗಿ ನೇರವೇರಿಸಿದರು ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಶಂಕರಗೌಡ ಪಾಟೀಲ ಶ್ರೀಉಳವಪ್ಪ ನಂದಿ ಸುಳೇಬಾವಿಯ ಲಕ್ಷ್ಮೀ ಹಿಂಡಲಗಾದ ನಾಗೇಶ ಮನೋಳಕರ ಸಹೋದರರು ಬಡಸ ಗ್ರಾಮದ ಅಲಾಬದಿ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾವ ರೀತಿಯ ತಯಾರಿ ಮಾಡಬೇಕೆಂದು ತಮ್ಮೆಲ್ಲಾ ಅಭಿಮಾನಿಗಳಿಗೆ ಕರೆ ನೀಡುತ್ತಾ ಹಾಲಿ ಶಾಸಕಿ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ ಅವರ ವಿರುದ್ಧ ಪರೋಕ್ಷವಾಗಿ ತಿವಿದರು ಕೆಲವು ಗುತ್ತಿಗೆದಾರರು ಹಾಗೂ ಅವರ ಸಹೋದರರು ಹಸ್ತಕ್ಷೇಪದಿಂದ ಈ ಭಾಗದ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ವಿಮರ್ಶಿಸುತ್ತಾ ಮುಂದಿನ ದಿನಗಳಲ್ಲಿ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹೊರಹಾಕಿದರು ಈ ಸಮಾವೇಶ ಕೇವಲ ಪೂರ್ವಭಾವಿ ಸಭೆ ಮುಂದಿನ ಸಮಾವೇಶ ಬೆಳಗಾವಿ ತಾಲೂಕಿನ ಉಚಗಾಂವನಲ್ಲಿ ಬೃಹತ್ ಸಮಾವೇಶ ನೇರವೇರಿಸಲಾಗುವುದು ಎಂದು ಹೇಳಿದರು ಜೊತೆಗೆ ಮುಂಬರುವ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಘೋಷನೆಯಾದ ನಂತರ ಇನ್ನೂ ಹೆಚ್ಚಿನ ರೀತಿಯಲ್ಲಿ ಚುನಾವಣಾ ತಯಾರಿ ಮಾಡಿಕೊಳ್ಳುವ ಮುನ್ಸೂಚನೆ ನೀಡಿದ್ದಾರೆ ಹಾಗೂ ಯಾವುದೇ ಕಾರಣಕ್ಕೂ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಯಶಸ್ವಿಯಾಗಲು ತಮ್ಮೆಲ್ಲರ ಸಹಕಾರ ಅತ್ಯಗತ್ಯವಾಗಿದ್ದು ಅದಕ್ಕಾಗಿ ಆ ನಿಟ್ಟಿನಲ್ಲಿ ಕದನ ಕಲಿ ಯಾರೇ ಆದರೂ ಯಾವ ರೀತಿಯ ಯೋಜನೆಗಳನ್ನು ಜಾರಿಗೆ ತರಬೇಕು ಹಾಗೂ ಅವುಗಳನ್ನು ಯಶಸ್ವಿಯಾಗಿಸಲು ಬೇಕಾದ ತಾಲೀಮು ಕಳೆದ ನಾಲ್ಕು ವರ್ಷಗಳಿಂದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಕಳೆದುಕೊಂಡ ಉತ್ಸಾಹ ಮತ್ತೆ ಗರಿಗೇದರಿವೆ ಹೀಗಾಗಿ ಹಾಲಿ ಶಾಸಕರಿಗೆ ಚುನಾವಣೆಯಲ್ಲಿ ಕಬ್ಬಿಣದ ಕಡಲೆಯಾಗುವುದಂತು ನಿಶ್ಚಿತ ಎಂಬಂತಾಗಿದೆ ಜೊತೆಗೆ ಈ ಮೊದಲು ಇದ್ದಂತಹ ಸಡಿಲಿಕೆ ಈ ಸಲ ಕ್ಷೇತ್ರದಲ್ಲಿ ಕಂಡುಬರುತ್ತಿಲ್ಲ ಸಹಜವಾಗಿ ಸಾಹುಕಾರ ಸಲೀಸಾಗಿ ಬೆಳಗಾವಿ ಗ್ರಾಮೀಣ ಮತಕ್ಷೇತ್ರವನ್ನು ಬಿಟ್ಟುಕೊಡಲು ತಯಾರಿಲ್ಲ ಹೀಗಾಗಿ ಸಹಜವಾಗಿಯೇ ಸಮಾವೇಶದಲ್ಲಿ ನೆರವೇರಿದ ಜನಸಮೂಹ ಸಾಕ್ಷಿಯಾಗಿತ್ತು ಒಂದೆಡೆ ಜನರ ಅಭಿಪ್ರಾಯ ಲಕ್ಷ್ಮೀ ಅಕ್ಕಾ ಗೆಲ್ಲೋದು ಪಕ್ಕಾ ಅಂತಾ ಪಿಸುಗುಟ್ಟಿದರು ಸಾಹುಕಾರನ ತಂತ್ರಗಳಿಗೆ ಆಮಿಷಗಳಿಗೆ ಫಲಿತಾಂಶ ಯಾರ ಕೈ ಮೇಲಾಗುವುದು ಕಮಲ ಕೆಸರಿನಿಂದ ಅರಳುವುದೋ ಸಧ್ಯದ ಮಟ್ಟಿಗೆ ಕಷ್ಟ ಆದರೂ ಸಾಹುಕಾರನ ಅಭಿಮಾನಿಗಳ ಸಮಾವೇಶ ನೋಡಿದರೆ ಮುದುಡಿದ ಕಮಲಕ್ಕೆ ಆಸರೆಯಾಗಿ ಖಂಡಿತವಾಗಿ ಸಾಹುಕಾರ ನಿಂತಿದ್ದಾರೆನ್ನುವುದು ಸ್ಪಷ್ಟವಾಗಿದೆ.
ವರದಿ:ದಿನೇಶ್ ಕುಮಾರ್ ಅಜಮೇರಾ