ಧಾರವಾಡ: ಧಾರವಾಡ ನಗರ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಲಕ್ಷ್ಮೀಸಿಂಗನಕೇರಿಯ 27 ಪರಿಶಿಷ್ಟ ಜಾತಿಯ ಡೊಂಗ್ರಿ ಗರಾಸಿ ಸಮುದಾಯದ ಕುಟುಂಬಗಳಿಗೆ ಪ್ರಧಾನ ಮಂತ್ರಿ ಅವಾಸ್ ಯೋಜನೆ ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಘೋಷಣೆಯಂತೆ ಮನೆ ನಿರ್ಮಿಸಲು ಆಯ್ಕೆ ಮಾಡಿಕೊಂಡಿರುವುದು ಸರಿಯಷ್ಟೇ,ಸದರಿ ಪ್ರದೇಶವು ಕರ್ನಾಟಕ ಕೊಳಗೇರಿ ಅಭಿರುದ್ಧಿ ಕಾಯ್ದೆಯನ್ವಯ ಘೋಷಣೆಯಾಗಿದ್ದು ಸ್ಥಳೀಯ ಜನರು ಚಿಂದಿ ಆಯುವ ಕಸುಬನ್ನು ಮಾಡುತ್ತಿದ್ದಾರೆ.ಇತ್ತೀಚಿಗೆ ಫಲಾನುಭವಿ ಆಯ್ಕೆ ಪಟ್ಟಿಯಲ್ಲಿ ಈ ಲಗತ್ತಿನಲ್ಲಿರುವ 27 ಕುಟುಂಬಗಳು ಅರ್ಹತೆ ಪಡೆದ ನಂತರ ಸರ್ಕಾರದ ಸೂಚನೆಯಂತೆ ಪ್ರತೀ ಕುಟುಂಬ ತಲಾ 25 ಸಾವಿರ ರೂಪಾಯಿಗಳಂತೆ ಡಿಡಿಯನ್ನು ಕರ್ನಾಟಕ ಕೊಳಗೇರಿ ಅಭಿರುದ್ದಿ ಮಂಡಳಿ ಆಯುಕ್ತರಿಗೆ ಪಾವತಿಸಿ 5 ತಿಂಗಳಾಗಿದೆ ಈ ಮಧ್ಯೆ ಮಂಡಳಿ ಇಂಜಿನಿಯರ್ ಗಳ ಸೂಚನೆ ಮೇರೆಗೆ ಮನೆಯನ್ನು ಕೆಡವಿಕೊಂಡು ಜನರು ಮನೆ ನಿರ್ಮಿಸಲು ಅಧಿಕಾರಿಗಳಲ್ಲಿ ಕೇಳಿಕೊಂಡರೂ ಸ್ಲಮ್ ಬೋರ್ಡ್ ಅಧಿಕಾರಿಗಳು ಜಾತಿಯ ಕಾರಣ ನೀಡಿ ವಿನಾಕಾರಣ ನಿರ್ಲಕ್ಷಿಸುತ್ತಿದ್ದಾರೆ ಹಾಗೂ ಕೇಳಲು ಹೋದ ಹಲವಾರು ಪರಿಶಿಷ್ಟ ಜಾತಿಯ ಕುಟುಂಬದವರನ್ನು ಮಧ್ಯವರ್ತಿಗಳ ಮೂಲಕ ಹಲ್ಲೆ ಮಾಡಿಸಿ ನಿಂದಿಸಿರುತ್ತಾರೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಾದ ವಿದ್ಯಾಗಿರಿಯಲ್ಲಿ ದೂರು ದಾಖಲಿಸಿ ರಾಜಿ ಸಂಧಾನವಾಗಿರುತ್ತದೆ.ಆದರೆ ಇದುವರೆಗೂ ಮನೆ ನಿರ್ಮಿಸಲು ಮಂಡಳಿ ಅಧಿಕಾರಿಗಳು ಇಲ್ಲಸಲ್ಲದ ಸಬೂಬು ಹೇಳುತ್ತಿದ್ದು ಬೇರೆ ರಾಜಕೀಯ ಒತ್ತಡಗಳನ್ನು ಇಲ್ಲಿರುವ ಕುಟುಂಬಗಳ ಮೇಲೆ ಹೇರುತ್ತಿದ್ದಾರೆ ಆದರಿಂದ ಪರಿಶಿಷ್ಟ ಜಾತಿ ಡೊಂಗ್ರಿ ಗರಾಸಿ ಸಮುದಾಯಕ್ಕೆ ಸೇರಿದ ಚಿಂದಿ ಆಯುವ ನಮಗೆ ನ್ಯಾಯ ದೊರಕಿಸಿ ಕೊಡಬೇಕು ತಪ್ಪಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ಪರಿಶಿಷ್ಟ ಜಾತಿ ಪಂಗಡದ ದೌರ್ಜನ್ಯ ತಡೆ ಕಾಯಿದೆ ಅನ್ವಯ ದೂರು ದಾಖಲಿಸಲು ಸಮಾಜ ಕಲ್ಯಾಣ ಇಲಾಖೆಗೆ ಸೂಚನೆ ನೀಡಬೇಕೆಂದು ಕರ್ನಾಟಕ ಹುಬ್ಬಳ್ಳಿ ತಾಲ್ಲೂಕ ಘಟಕ ಹಾಗೂ ಸಾವಿತ್ರಿಬಾಯಿ ಫುಲೆ ಹೋರಾಟ ಸಮಿತಿ ವತಿಯಿಂದ ಧಾರವಾಡದ ಸ್ಲಮ್ ಬೋರ್ಡ್ ಇಲಾಖೆಯ ಮುಂದೆ ಅಧಿಕಾರಿಗಳ ವಿರುದ್ಧ ಹಾಗೂ ಮಂಡಳಿಗಳ ವಿರುದ್ಧ ಕೂಗು ಹಾಕುತ್ತಾ ಮನವಿ ಪತ್ರ ನೀಡಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.