ಹನೂರು ತಾಲೂಕಿನ ಮಹದೇಶ್ವರ ಬೆಟ್ಟಕ್ಕೆ ಶಿವರಾತ್ರಿ ಹಬ್ಬದ ಪ್ರಯುಕ್ತ ಸಚಿವ ವಿ.ಸೋಮಣ್ಣ ಹೋಗುತಿದ್ದ ಸಂಧರ್ಭ ವಾಹನ ತಡೆದು ಪ್ರತಿಭಟಿಸಿದ ಕಾಮಗೆರೆಯ ಕೆಲ ಗ್ರಾಮಸ್ಥರು.
ಹನೂರು :ರಸ್ತೆ ಕಾಮಗಾರಿ ಪ್ರಾರಂಭವಾಗಿ ಸುಮಾರು ಎರಡು ಮೂರು ವರ್ಷ ಕಳೆದರು ಅಗಲಿಕರಣ ಸಮಯದಲ್ಲಿ ತಮ್ಮ ಸ್ವಂತ ಜಾಗವನ್ನು ಕಳೆದುಕೊಂಡವರಿಗೆ ಸರ್ಕಾರದಿಂದ ಸಿಗಬೇಕಾದ ಅನುದಾನವನ್ನು ಅಧಿಕಾರಿಗಳು ಸರಿಯಾಗಿ ನೀಡದೆ ಕಾಲಹರಣ ಮಾಡುತ್ತಿದ್ದಾರೆ ಎಂದು
ವಸತಿ ಸಚಿವರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಸೋಮಣ್ಣ ರ ವಾಹನವನ್ನು ತಡೆದು ಪ್ರತಿಭಟನೆ ಮಾಡಿದ ಪ್ರಸಂಗ ಜರುಗಿದೆ. ಶಿವರಾತ್ರಿ ಜಾತ್ರೆ ಹಿನ್ನಲೆಯಲ್ಲಿ ಮಲೆ ಮಾದೇಶ್ವರ ಬೆಟ್ಟಕ್ಕೆ ತೆರಳುತಿದ್ದ ಸಮಯದಲ್ಲಿ ಕಾಮಗೆರೆ ಸಮೀಪದಲ್ಲಿ ಸಚಿವರ ಕಾರು ತಡೆದ ಗ್ರಾಮಸ್ಥರು ಅವರನ್ನು ತರಾಟೆಗೆ ತೆಗೆದುಕೊಂಡ ಸಂದರ್ಭ ಎದುರಾಗಿದೆ , ನಂತರ ಮಾತನಾಡಿದ ಸ್ಥಳೀಯರು ಕೊಳ್ಳೇಗಾಲ ಮತ್ತು ಹನೂರಿನವರೆಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ನಡೆಸಲಾಗುತ್ತಿರುವ ಕಾಮಗಾರಿಯು ಮಂದಗತಿಯಲ್ಲಿ ಸಾಗುತ್ತಿದ್ದು ಇಲ್ಲಿಯ ಜನರಲ್ಲಿ ಕೆಲವರು ಬಾಡಿಗೆದಾರಾಗಿದ್ದು ಸರ್ಕಾರದಿಂದ ಬರಬೇಕಿದ್ದ ಪರಿಹಾರದ ಹಣ ವಿಳಂಬ ಆಗುತ್ತಿರುವ ಹಿನ್ನೆಲೆ ಹಲವು ಬಾರಿ ಸ್ಥಳೀಯ ಶಾಸಕರು ಹಾಗೂ ನಿಮ್ಮ ಗಮನಕ್ಕೂ ತಂದರು ಸಹ ಯಾವುದೇ ಪ್ರಾಯೋಜನವಾಗಿಲ್ಲ ಎಂದು ಸಚಿವರಿಗೆ ಗ್ರಾಮಸ್ಥರು ತಿಳಿಸಿದರು. ನಂತರ ಮಾತನಾಡಿದ ಸಚಿವರು ಜೊತೆಯಲ್ಲಿದ್ದ ಸಚಿವರು ಕೊಳ್ಳೇಗಾಲ ಉಪವಿಭಾಗ ಅಧಿಕಾರಿ ಗೀತಾ ಹುಡೇದ್ ರವರಿಗೆ ಈ ವಿಚಾರವಾಗಿ ಸಂಭಂದಿಸಿದ ಎಲ್ಲಾ ಗ್ರಾಮಸ್ತರಿಗೂ ಕೂಡಲೆ ಸ್ಪಂದಿಸುವಂತೆ ಹಾಗೂ ಪರಿಹಾರದ ಹಣ ಮಂಜೂರು ಮಾಡುವಂತೆ ತಿಳಿಸಿದರು.ಇದೇ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಸ್ಥಳೀಯರು ಹಾಜರಿದ್ದರು .
ವರದಿ :ಉಸ್ಮಾನ್ ಖಾನ್.