ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಪ್ರಕೃತಿಯಲ್ಲಿ ನಾನಿರುವೆ: ಶ್ರೀ ಸಿದ್ದೇಶ್ವರ ಸ್ವಾಮೀಜಿ

‘ಪ್ರಕೃತಿಯಲ್ಲಿ ನಾನಿರುವೆ’ ಎಂದು ಹೇಳಿದ‌ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಮಾತಿನ ಹಿಂದಿರುವ ಅರ್ಥ ಯಾವಾಗ ಎಲ್ಲರಿಗೂ ತಿಳಿಯುವುದೋ ಅಂದು ಪ್ರಕೃತಿ ಉಳಿದು ಮಾನವ ಕುಲ ಉಳಿಯಲು ಸಾಧ್ಯ’.

ಮುಂದಿನ 20-30 ವರ್ಷಗಳಲ್ಲಿ ಪ್ರಕೃತಿ ನಾಶವಾಗಿ ಸುಮಾರು 200 ಕೋಟಿ ಜನ ಸಾವಿಗೀಡಾಗುವ ಸಾಧ್ಯತೆಯಿದೆ ಎಂದು ವಿಶ್ವ ಸಂಸ್ಥೆ ಹೇಳಿದೆ. ವಿಜ್ಞಾನಿಗಳು ಭಾಹ್ಯ ಸಂಶೋಧನೆಯ ಮೂಲಕ ಇದನ್ನು ಕಂಡುಕೊಂಡರೆ, ಆಧ್ಯಾತ್ಮಿಕ ಗುರುಗಳು ಆಂತರಿಕ ಶೋಧನೆ ಮೂಲಕ ಅದರ ಭೀಕರತೆಯನ್ನೂ ಕೂಡಾ ಕಾಣುತ್ತಾರೆ. ಯಾರು ಆಂತರಿಕ ಶೋಧನೆ ಮೂಲಕ ಮುಂದಾಗುವ ಸಮಸ್ಯೆಯನ್ನು ಆಳವಾಗಿ ಅರಿಯುತ್ತಾರೋ ಅವರು ಸಮಸ್ಯೆಯನ್ನು ಹೋಗಲಾಡಿಸುವ ಜವಾಬ್ದಾರಿಯನ್ನು ಮೊದಲು ತಾವೇ ಹೊರುತ್ತಾರೆ. ಇದೇ ಕಾರಣಕ್ಕೆ ಸಾವಿನಲ್ಲಿಯೂ ಸಹ ಸಿದ್ದೇಶ್ವರ ಶ್ರೀಗಳು ಪ್ರಕೃತಿಯನ್ನು ಉಳಿಸುವ ಅವಶ್ಯಕತೆಯನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡಿದರು. ಅಂದರೆ, ನನ್ನನ್ನು ಕೇವಲ ಪೋಟೋ, ಮೂರ್ತಿ ಹಾಗೂ ಮಂದಿರಗಳಲ್ಲಿ ಕಂಡು ನನ್ನನ್ನು ಪೂಜೆಗೆ ಸೀಮಿತಗೊಳಿಸದೇ ವಾಸ್ತವಿಕ ಸಮಸ್ಯೆಯನ್ನು ಅರಿತು ಅದಕ್ಕೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿ ಎಂಬ ಸ್ಪಷ್ಟ ಸಂದೇಶವನ್ನು ನಮಗೆಲ್ಲರಿಗೆ ನೀಡಿದ್ದಾರೆ.

ಹಾಗಾದರೆ, ನಾವೆಲ್ಲರೂ ಶ್ರೀಗಳ ಮಾತನ್ನು ಅರಿತು ಪ್ರಕೃತಿ ಉಳಿಸುವ ಕಾರ್ಯದಲ್ಲಿ ಒಗ್ಗೂಡಬೇಕಾದ ಅವಶ್ಯಕತೆ ಬಂದೊದಗಿದೆ.

ಮುಂದಿನ ದಿನಗಳಲ್ಲಿ ಮಾನವ ಜನಾಂಗದ ಮೇಲೆ ಆಗುವ ಭೀಕರ ಪರಿಣಾಮವನ್ನು ಅರಿತ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಎಲ್ಲರೂ ನನ್ನ ಪೋಟೊ ಪೂಜಿಸುವ ಕಾರ್ಯದಲ್ಲಿ ಒಗ್ಗೂಡುವ ಬದಲು ಪ್ರಕೃತಿ ಉಳಿಸುವ ಕಾರ್ಯದಲ್ಲಿ ಒಗ್ಗೂಡಿ ಎಂಬ ಸಂದೇಶವನ್ನು “ನನ್ನನ್ನು ಪ್ರಕೃತಿಯಲ್ಲಿ ಕಾಣಿ” ಎಂಬ ಮಾತಿನ ಮೂಲಕ ತಿಳಿಸಿದ್ದಾರೆ.

ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಮಾತನ್ನು ಅರಿತು ಪ್ರಕೃತಿ ಉಳಿಸುವ ಕಾರ್ಯದಲ್ಲಿ ತೊಡಗಿದರೆ ಮಾತ್ರ ನಮ್ಮ ಮಕ್ಕಳಿಗೆ ಒಳ್ಳೆಯ ಭವಿಷ್ಯವಿದೆ.

ನಮ್ಮ ಕಾಲಘಟ್ಟದಲ್ಲಿ ಕಾಣುವ ಜ್ಞಾನೋದಯ ಹೊಂದಿದ ಗುರುಗಳು ಮತ್ತು ಸದಾ ಜನರ ಒಳಿತನಲ್ಲಿಯೇ ತಮ್ಮ ಒಳಿತನ್ನು ಕಾಣುವ ಸದ್ಗುರು ಅವರು ಮಣ್ಣು ಉಳಿಸಿ ಅಭಿಯಾನದ ಮೂಲಕ ಪ್ರಕೃತಿ ಉಳಿಸಿ ಮುಂದಿನ ಜನಾಂಗವನ್ನು ಉಳಿಸುವ ಸಂದೇಶವನ್ನು ಜಗತ್ತಿನ ಎಲ್ಲ ಜನರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದೇ ಕಾರಣಕ್ಕಾಗಿ ಅವರು ಒಂದು ನೂರು ದಿನಗಳಲ್ಲಿ ಇಂಗ್ಲೆಂಡ್ ನಿಂದ ಕರ್ನಾಟಕದ ಕಾವೇರಿ ನದಿಯ ವರೆಗೆ ಒಟ್ಟು 30 ಸಾವಿರ ಕಿಲೋಮೀಟರ್ ಬೈಕ್ ಮೇಲೆ ಪ್ರಯಾಣಿಸಿ ಜಗತ್ತಿಗೆ ಪ್ರಕೃತಿಯನ್ನು ಉಳಿಸಬೇಕಾದ ಅವಶ್ಯಕತೆಯ ಕುರಿತು ಅರಿವು ಮೂಡಿಸಿದರು. ಪ್ರಕೃತಿ ಉಳಿಯಬೇಕಾದರೆ ಮಣ್ಣಿನ ಜೀವಂತಿಕೆ ಹೆಚ್ಚಾಗಬೇಕು, ಮಣ್ಣಿನ ಜೀವಂತಿಕೆ ಹೆಚ್ಚಾಗಬೇಕಾದರೆ, ಮಣ್ಣಿಗೆ ಹೆಚ್ಚು ಗಿಡಮರಗಳ ಮತ್ತು ದನಕರುಗಳ ತ್ಯಾಜ್ಯ ಸೇರಿವಂತಾಗಬೇಕು. ಈ ನಿಟ್ಟಿನಲ್ಲಿ ರೈತರಿಗೆ ಲಾಭವಾಗುವ ಸೂಕ್ತ ಕಾನೂನನ್ನು ಎಲ್ಲ ದೇಶಗಳಲ್ಲಿ ಅನುಷ್ಠಾನ ಆಗಬೇಕು ಎಂಬ ಉದ್ದೇಶದಿಂದ ಮಣ್ಣು ಉಳಿಸಿ ಅಭಿಯಾನವನ್ನು ಸದ್ಗುರು ಅವರು ಪ್ರಾರಂಭಿಸಿದ್ದಾರೆ.

ಈ ಎಲ್ಲ ಕಾರಣಕ್ಕೆ ದಿನಾಂಕ : 18-02-2023 ರಂದು ವಿಜಯಪುರ ಜಿಲ್ಲೆಯ, ಬಸವನ ಬಾಗೇವಾಡಿ ತಾಲ್ಲೂಕಿನ ವಡವಡಗಿ ಗ್ರಾಮದಲ್ಲಿರುವ ‘ಓಂ ಆಧ್ಯಾತ್ಮಿಕ ಕೇಂದ್ರ’ದಲ್ಲಿ ನಡೆಯುವ ಮಹಾಶಿವರಾತ್ರಿ ಜಾಗರಣೆ ಕಾರ್ಯಕ್ರಮದಲ್ಲಿ ಸೇರುವ ಎಲ್ಲ ಜನರೂ ಒಗ್ಗೂಡಿ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಪ್ರಕೃತಿ ಪ್ರೇಮದ ನೆನಪಿಗಾಗಿ ಆಲದ ಮರವನ್ನು ನೆಡಲಾಗುವುದು ಮತ್ತು ಅದು ಒಂದು ಸಾವಿರಕ್ಕಿಂತ ಅಧಿಕ ವರ್ಷ ಬಾಳಲಿ ಎಂದು ಎಲ್ಲರೂ ಒಗ್ಗೂಡಿ ಸಂಕಲ್ಪ ಮಾಡುವ ವಿಶೇಷ ಕಾರ್ಯಕ್ರಮವನ್ನು ರೂಪಿಸಲಾಗಿದೆ.

ಇದೇ ಸುಸಂದರ್ಭಸದಲ್ಲಿ, “ಇಂದು ನಮ್ಮನ್ನಾಳುವ ನಾಯಕರ ಮೊದಲ ಉದ್ದೇಶ ಏನಾಗಿರಬೇಕು” ಎಂಬ ವಿಷಯದ ಕುರಿತು ರೈತರ ಮಕ್ಕಳಿಗಾಗಿ ವಿಶೇಷ ಭಾಷಣ ಸ್ಪರ್ಧೆಯನ್ನು ಯೂಟ್ಯೂಬ್ ಮುಖಾಂತರ ಏರ್ಪಡಿಸುವ ಯೋಜನೆಯನ್ನು ಘೋಷಿಸಲಾಗುವುದು. ಪ್ರಜ್ಞಾವಂತ ಕೃಷಿ ಪದವೀಧರರು ಸೇರಿ ನೀಡುವ ದೇಣಿಗೆ ಹಣದ ಮೂಲಕ ಬಹುಮಾನ ನೀಡಲಾಗುವುದು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ
ಮೊದಲ ಬಹುಮಾನ ಒಂದು ಲಕ್ಷ, ಎರಡನೇ ಬಹುಮಾನ ಐವತ್ತು ಸಾವಿರ ಮತ್ತು ಮೂರನೇ ಬಹುಮಾನ ಇಪ್ಪತ್ತೈದು ಸಾವಿರ ರೂಪಾಯಿಗಳನ್ನು ನೀಡಲಾಗುವುದು. ಇದರ ಕುರಿತ ವಿಶೇಷ ಸೂಚನೆಗಳನ್ನೊಳಗೊಂಡ ಪೂರ್ಣ ಮಾಹಿತಿಯನ್ನು ವಿವಿಧ ಸೋಷಿಯಲ್ ಮಿಡಿಯಾಗಳಲ್ಲಿ ಹಂಚಿಕೊಳ್ಳಲಾಗುವುದು.

ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಪ್ರಕೃತಿ ಉಳಿಸುವ ಕನಸು ನನಸಾಗಬೇಕಾದರೆ, ನಾವು ಅಯೋಜಿಸುವ ಪ್ರತಿಯೊಂದು ಕಾರ್ಯಕ್ರಮದಲ್ಲಿ ಪ್ರಕೃತಿಯ ಕುರಿತು ಅರಿವು ಮೂಡಿಸುವ ಪ್ರಯತ್ನ ಮಾಡಬೇಕು.

ಯೋಚಿಸಿ! ನಿಮ್ಮ ಅಭಿಪ್ರಾಯ ತಿಳಿಸಿ.


ಬಸವರಾಜ (ಅಭೀಃ)-9449303880
ನಮ್ಮ ಮಕ್ಕಳನ್ನು ಉಳಿಸಿ ಅಭಿಯಾನದ ಸ್ವಯಂ ಸೇವಕ, ವಿಜಯಪುರ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ