ಬೆಳಗಾವಿ ಜಿಲ್ಲೆಯ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದ ಭಾಗವಾದ ಯಳ್ಳೂರಿನ
ರಾಜಹಂಸಗಡದಲ್ಲಿ ಶಾಸಕಿ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ ಅವರು 4.5 ಕೋಟಿ ವೆಚ್ಚದಲ್ಲಿ ಪ್ರವಾಸಿಗರ ತಾಣವಾಗಿಸಲು ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಶಂಕುಸ್ಥಾಪನೆಯ ಕಾರ್ಯ ಭರದಿಂದ ಸಾಗಿದೆ ಆ ನಿಟ್ಟಿನಲ್ಲಿ ಬರುವ ಮಾರ್ಚ್ ತಿಂಗಳ 5 ರಂದು ಅನಾವರಣ ಕಾರ್ಯಕ್ರಮದ ನಿಮಿತ್ಯವಾಗಿ ಕೊನೆಯ ಕ್ಷಣದ ಕಾಮಗಾರಿ ವಿಕ್ಷೀಸಲು ಹೆಬ್ಬಾಳಕರ ಸಹೋದರ ವಿಧಾನ ಪರಿಷತ್ ಸದಸ್ಯ ಶ್ರೀ ಚನ್ನರಾಜ ಹಟ್ಟಿಹೊಳಿ ಹೋದಂತಹ ಸಂದರ್ಭದಲ್ಲಿ ಅದೇ ವೇಳೆಗೆ ಗೋಕಾಕ ಸಾಹುಕಾರ ಶ್ರೀ ರಮೇಶ್ ಜಾರಕಿಹೊಳಿಯವರ ಕಾರು ಮುಖಾಮುಖಿಯಾದವು ಆ ವೇಳೆ ಪರಸ್ಪರ ಘೋಷಣೆ ಕೂಗಾಡಿದ್ದಾರೆ ನಂತರ ಸಾಹುಕಾರ ಕಾರಿನಿಂದ ಕೆಳಗಿಳಿದು ಕಾಲ್ನಡಿಗೆಯಲ್ಲಿ ಕೋಟೆಯನ್ನು ವೀಕ್ಷಿಸಲು ತೆರಳಿದರು ಮಾಧ್ಯಮದವರೊಂದಿಗೆ ಮಾತನಾಡುತ್ತಾ ಕಾರ್ಯಕ್ರಮದ ಶಿಷ್ಟಾಚಾರ ಉಲ್ಲಂಘನೆಯಾಗುತ್ತಿದ್ದು ಕಾರಣ ಭಾರತೀಯ ಜನತಾ ಪಕ್ಷ ಸರ್ಕಾರದ ಅನುದಾನ ಬಳಕೆ ಮಾಡಿಕೊಂಡು ಮಹಾರಾಷ್ಟ್ರ ಕೈ ನಾಯಕರ ಸಮಾನತೆ ಮಾಡಿ ಮರಾಠ ಸಮುದಾಯದ ಮತಗಳ ಸೆಳೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದಾಗ ಇದಕ್ಕೆ ಪ್ರತಿಯಾಗಿ ಶ್ರೀ ಚನ್ನರಾಜ ಹಟ್ಟಿಹೊಳಿ ಯವರು ಇನ್ನೂ ಕಾರ್ಯಕ್ರಮ ನಿಗದಿಯಾಗದೇ ನಾವು ಹೇಗೆ ಶಿಷ್ಟಾಚಾರ ಉಲ್ಲಂಘನೆ ಮಾಡುತ್ತೆವೆ ಖಂಡಿತವಾಗಿ ಜಿಲ್ಲಾಡಳಿತ ಉಸ್ತುವಾರಿ ಸಚಿವರು ಪಾಲ್ಗೊಳ್ಳುತ್ತಾರೆ ಎಂದು ಹೇಳಿದರು ಇನ್ನು ಮುಂದುವರೆದು ಮಾಜಿ ಶಾಸಕ ಶ್ರೀ ಸಂಜಯ ಪಾಟೀಲ ಮಾತನಾಡುತ್ತಾ 2008ರಲ್ಲಿ ಕಾಲು ಹಾದಿಯು ಇಲ್ಲದ ಈ ಕೋಟೆಯನ್ನು ಅಭಿವೃದ್ಧಿ ಮಾಡಿದ್ದು ನಾವೆ ಎಂದು ಹೇಳಿದರು ಹೀಗಿರುವಾಗ ಎಲ್ಲಾ ಕಾಂಗ್ರೆಸ್ ಪಕ್ಷ ಅಭಿವೃದ್ಧಿ ಮಾಡಿದೆ ಎಂಬ ತಪ್ಪು ಅಭಿಪ್ರಾಯ ಹೋಗಬಾರದು ಜನರಿಗೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು ಒಟ್ಟಾರೆಯಾಗಿ ಕೈ ಕಮಲದ ನಾಯಕರು ಮರಾಠ ಸಮುದಾಯದವರನ್ನು ರಂಗೆರಿಸಿದ್ಧಾರೆ ಕಾರಣ ಒಂದು ಲಕ್ಷ ಮರಾಠ ಮತಗಳು ಮಾತುಗಳು ಗ್ರಾಮೀಣ ಶಾಸಕರನ್ನು ನಿರ್ಣಯಿಸುವ ಮತಗಳಾಗಿದ್ದು ಹೀಗಾಗಿ ನಾಯಕರ ಕಿತ್ತಾಟಗಳೂ ನಾ ಮುಂದು ನೀ ಮುಂದು ಎಂದು ಸಂಘರ್ಷದ ವಾತಾವರಣ ಗರಿಗೆದರುತ್ತಿವೆ ಇನ್ನೂ ಕಾರ್ಯಕ್ರಮವಂತು ಈಗಿನಿಂದಲೇ ಭರ್ಜರಿ ಪ್ರಚಾರ ಸಿಕ್ಕಂತಾಗಿದೆ ಕೋಟೆಯ ಶುಭ ಲಾಭ ಯಾರಿಗೆ ವರವಾಗುವುದು ನೆರವಾಗುವುದು ಕಾದು ನೋಡಬೇಕು.
ವರದಿಗಾರ ದಿನೇಶ್ ಕುಮಾರ್ ಅಜಮೇರಾ