ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಪಟ್ಟಣದಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ
ಜಾತಿ, ಜಾತಿಗಳ ಮಧ್ಯ ವೈಮನಸ್ಸು ಹುಟ್ಟಿಸಿ ಸಹೋದರತೆಯ ಭಾವ ಕದಡುವ ವ್ಯವಸ್ಥೆ ನಡೆದಿದ್ದು, ಚುನಾವಣೆ ಸಮೀಪದಲ್ಲಿ ಜಾತಿಗೊಂದರಂತೆ ವೃತ್ತ, ಭವನ, ಸಭೆ ಸಮಾರಂಭಗಳನ್ನು ನಡೆಸುವ ಮೂಲಕ ಸಮಾಜ ಇಬ್ಬಾಗಿಸುವ ತಂತ್ರ ನಡೆದಿದ್ದು, ಇದಕ್ಕೆ ಯಾರೂ ತಲೆಕೆಡಿಸಿಕೊಳ್ಳಬಾರದು. ಇಂಡಿ ವಿಧಾನಸಭೆ ಕ್ಷೇತ್ರಕ್ಕೆ ಬಿಜೆಪಿಯಿಂದ ಯಾರೇ ಟಿಕೇಟ್ ತಂದರೂ ನಾವೆಲ್ಲ ಮುಖಂಡರು ಒಗ್ಗಟ್ಟಾಗಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದಯಾಸಾಗರ ಪಾಟೀಲ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕಳೆದ ದಿನದ ಹಿಂದೆ ಇಂಡಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಎಂದು ಬಿಂಬಿಸಲಾಗಿದ್ದು, ಕಾಂಗ್ರೆಸ್
ಸೇರ್ಪಡೆಯಾದವರು ಯಾರೂ ಬಿಜೆಪಿಯ ನಿಷ್ಠಾವಂತರಲ್ಲ. ನಿಷ್ಠಾವಂತ ಬಿಜೆಪಿ ಪಕ್ಷದವರು ಯಾರೂ ಕಾಂಗ್ರೆಸ್ ಸೇರ್ಪಡೆಯಾಗಿರುವುದಿಲ್ಲ. ಕಾಂಗ್ರೆಸ್ ಸೇರ್ಪಡೆಯಾದವರು ಈ ಮೊದಲು ಕಾಂಗ್ರೆಸ್ ಹತ್ತಿರದಲ್ಲಿಯೇ ಇದ್ದು, ಅಂದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ವಿನ ಬಿಜೆಪಿಯವರು ಯಾರೂ ಕಾಂಗ್ರೆಸ್ ಸೇರ್ಪಡೆಯಾಗಿರುವುದಿಲ್ಲ ಎಂದು ಹೇಳಿದರು.
ಒಂದು ಸಮುದಾಯದ ಮುಖಂಡರು ನಮಗೆ ನೀವು ನೀಡುವ ಮೂರ್ತಿ ಬೇಡ ಎಂದು ಶಾಸಕರಿಗೆ ಹೇಳಿದರೂ,ಒತ್ತಾಯಪೂರ್ವಕವಾಗಿ ಮೂರ್ತಿ ತರಳು ಹಣ ನೀಡಿದ್ದಾರೆ ಎಂದು ಆರೋಪಿಸಿದ ಅವರು,ಈ
ರೀತಿ ಮಾಡುವವರನ್ನು ಜನರು ಮುಂದಿನ ದಿನದಲ್ಲಿ ತಕ್ಕಪಾಠ ಕಲಿಸುತ್ತಾರೆ ಎಂದು ಹೇಳಿದರು.
ಅಥರ್ಗಾ ಗ್ರಾಮದಿಂದ ಸಾವಿರಾರು ಜನರು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಕ್ಕೆ ಬಂದಿದ್ದಾರೆ ಎಂದು ಊಹಾಪೋವ ಎಬ್ಬಿಸಿದ್ದು, ಅಥರ್ಗಾ ಗ್ರಾಮದಿಂದ ಬ೦ದಿರುವ ಜೀಪ್ ವಾಹನದಲ್ಲಿ ಬೆರಳೆಣಿಕೆಯಷ್ಟು ಜನರು ಇದ್ದರು ಎಂದು ಹೇಳಿದರು.ಸಾಮಾಜಿಕ ಜಾಲತಾಣದಲ್ಲಿ ಮರಾಠ ಸಮುದಾಯದ ಬಗ್ಗೆ ಅವಹೇಳನವಾಗಿ ಮಾತನಾಡಿದ್ದು,ಕೂಡಲೆ ಸಂಬಂದ ಸಿದವರು ಬಹಿರಂಗ ಕ್ಷೇಮೆ ಕೇಳಬೇಕು ಎಂದು ಒತ್ತಾಯಿಸಿದರು.
ಪುರಸಭೆ ಸದಸ್ಯರಾದ ಅನೀಲಗೌಡ ಬಿರಾದಾರ,ದೇವೆಂದ್ರ ಕುಂಬಾರ, ಬಿಜೆಪಿ ಮುಖಂಡರಾದ ಮಲ್ಲು ಹಾವಿನಾಳಮಠ, ಬಾಳು ಮುಳಜಿ, ಗೋವಿಂದ ರಾಠೋಡ,ನಾಗೇಶ ಶಿಂಧೆ, ಶ್ರೀಶೈಲಗೌಡ ಬಿರಾದಾರ,ಭೀಮರಾಯ ಬಡಿಗೇರ,ಬೂತಾಳಿ ಅಂಕಲಗಿ,ಪ್ರವೀಣ ಮಠ, ಅಶೋಕ ಅಕಲಾದಿ,ಶಾಂತು ಬಿರಾದಾರ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ವರದಿ:ಅರವಿಂದ್ ಕಾಂಬಳೆ