ರಾಯಚೂರು:ಸಿಂಧನೂರು ತಾಲೂಕಿನ ಕಾರುಣ್ಯ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಶಿವರಾತ್ರಿಯ ಅಂಗವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಕುಟುಂಬದ ಮುನಿ ವೆಂಕಟಮ್ಮದೇವಿ ರಾಮಚಂದ್ರಪ್ಪ ಕುಟುಂಬದಿಂದ ಮಹಾಪ್ರಸಾದ ಸೇವೆ ಮತ್ತು ಸಿಂಧನೂರಿನ ಎಂ.ಟಿ.ಎಸ್.ಫ್ರೂಟ್ ಮರ್ಚೆಂಟ್ ನ ವತಿಯಿಂದ ಹಣ್ಣು ಹಂಪಲುಗಳನ್ನು ವಿತರಿಸುವ ವಿಶೇಷ ಕಾರ್ಯಕ್ರಮ ನೆರವೇರಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಿವಾಸಿಯಾದ ರಾಮಚಂದ್ರಪ್ಪ ಸಿಂಧನೂರಿನ ಕಾರುಣ್ಯ ಆಶ್ರಮದ ಸೇವೆಯ ಜೊತೆ ನಮ್ಮ ಚಿಕ್ಕಬಳ್ಳಾಪುರ ಜಿಲ್ಲೆಯ ಜನತೆ ಸದಾವಕಾಲವಿರುತ್ತದೆ.ನಾವು ಬೆಂಗಳೂರಿನಲ್ಲಿ ಹಲವಾರು ಆಶ್ರಮಗಳನ್ನು ನೋಡಿದ್ದೇವೆ ಆದರೆ ಇಲ್ಲಿನ ಸಿಬ್ಬಂದಿಗಳು ವೃದ್ಧರ ಜೊತೆಗೆ ಹೊಂದಿರುವ ಅವಿನಾಭಾವ ಸಂಬಂಧ ಸ್ವಂತ ತಂದೆ ತಾಯಿಗಳ ಹಾಗೆ ಅವರನ್ನು ನೋಡಿಕೊಳ್ಳುವ ರೀತಿ ಬಹಳ ಇಷ್ಟವಾಗಿದೆ ಶಿವರಾತ್ರಿಯ ಶಿವನ ಧ್ಯಾನದ ಈ ದಿನ ಯಾವುದೋ ಒಂದು ದೇವಸ್ಥಾನದ ಶಿವನ ಮೂರ್ತಿಗಳ ಮುಂದೆ ನಾನಾ ರೀತಿಯ ಪ್ರಸಾದ ಹಣ್ಣುಗಳನ್ನು ಇಟ್ಟು ಪೂಜಿಸುವುದಕ್ಕಿಂತ ಶಿವನ ಅವತಾರದಲ್ಲಿರುವ ಇಂತಹ ಅನಾಥ ಹಿರಿಯ ಜೀವಿಗಳ ಹಸಿವು ನೀಗಿಸಿದಾಗ ಮಾತ್ರ ಶಿವರಾತ್ರಿ ಹಬ್ಬಕ್ಕೆ ವಿಶೇಷ ಅರ್ಥ ದೊರೆಯುತ್ತದೆ ನಾನು ನನ್ನ ಕುಟುಂಬ ಅಲ್ಲಿಂದ ಈ ಕಾರುಣ್ಯ ಕುಟುಂಬವನ್ನು ವೀಕ್ಷಿಸಲು ಬಂದಾಗ ನಮಗೆ ಬಹಳ ಖುಷಿಯೆನಿಸುತ್ತದೆ ಮತ್ತು ಈ ಹಬ್ಬದ ದಿನ ಸಿಂಧನೂರಿನ ಎಂ.ಟಿ.ಎಸ್ ಫ್ರೂಟ್ ಮರ್ಚೆಂಟ್ ನ ಮಾಲೀಕರಾದ ಹುಲುಗಪ್ಪ ಅವರ ಕುಟುಂಬ ದೊಡ್ಡ ಮಟ್ಟದಲ್ಲಿ ವಿವಿಧ ರೀತಿಯ ನಾನಾ ಬಗೆಯ ಹಣ್ಣುಗಳನ್ನು ವಿತರಿಸುತ್ತಿರುವುದು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದಂತಾಗಿದೆ ಯಾವತ್ತಿಗೂ ಕೂಡ ನಾನು ನನ್ನ ಕುಟುಂಬ ಎಷ್ಟು ದೂರದಲ್ಲಿದ್ದರೂ ನಮ್ಮ ಸೇವೆ ಮಾತ್ರ ಕಾರುಣ್ಯ ಕುಟುಂಬದೊಂದಿಗೆ ಇರುತ್ತದೆ ಎಂದು ಭಾವುಕರಾಗಿ ಮಾತನಾಡಿದರು ಈ ಕಾರ್ಯಕ್ರಮದಲ್ಲಿ ಮುನಿ ವೆಂಕಟಮ್ಮ ದೇವಿ ರಾಮಚಂದ್ರಪ್ಪ ಈ ದಂಪತಿಗಳ ಮಕ್ಕಳಾದ ವೈಭವ್ ವರ್ಷಿತಾ ಈ ಕುಟುಂಬಕ್ಕೆ ಹಾಗೂ ಎಂ.ಟಿ.ಎಸ್. ಫ್ರೂಟ್ ಮರ್ಚೆಂಟ್ ನ ಮಾಲೀಕರಾದ ಹುಲುಗಪ್ಪ ರಮೇಶ ಮಲ್ಲಮ್ಮ ಗಂಗಮ್ಮ ಶರಣಮ್ಮ ಸುವರ್ಣ ಸುದೀಪ್ ಇವರುಗಳಿಗೆ ಕಾರುಣ್ಯ ಆಶ್ರಮದ ವತಿಯಿಂದ ಸನ್ಮಾನಿಸಿ ಗೌರವಿಸಿ ಆಶೀರ್ವದಿಸಿದರು. ಈ ಕಾರ್ಯಕ್ರಮದಲ್ಲಿ ಆಶ್ರಮದ ಗೌರವಾಧ್ಯಕ್ಷರಾದ ಶರಣು. ಪಾ.ಹಿರೇಮಠ ಆಡಳಿತಾಧಿಕಾರಿಗಳಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ ವ್ಯವಸ್ಥಾಪಕರಾದ ಇಂದುಮತಿ. ಸಿಬ್ಬಂದಿಗಳಾದ ಶರಣಮ್ಮ ಮರಿಯಪ್ಪ ಕರಿಯಪ್ಪ ಅನೇಕರು ಉಪಸ್ಥಿತರಿದ್ದರು
ವರದಿ-ವೆಂಕಟೇಶ.ಹೆಚ್.ಬೂತಲದಿನ್ನಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.