ಹನೂರು ತಾಲೂಕಿನ ಲೊಕ್ಕನಹಳ್ಳಿಶ ಗ್ರಾಮದ ದೊಡ್ಡ ಸಂಪಿಗೆ ದೇವಾಲಯ ದಲ್ಲಿ ಇಂದು ವಿಜೃಂಭಣೆಯಿಂದ ಜರುಗಿದ ಶಿವರಾತ್ರಿ ಹಬ್ಬದ ಪ್ರಯುಕ್ತ ಭಕ್ತ ರಿಂದ ಬಾಯಿ ಬೀಗ.
ಹನೂರು:ಸಮೀಪದ ಲೊಕ್ಕನಳ್ಳಿ ಕೇಂದ್ರದಲ್ಲಿ ಪ್ರತಿ ವರ್ಷವೂ ಬಹಳ ವಿಜೃಂಭಣೆಯಿಂದ ಮಹಾಶಿವರಾತ್ರಿ ಹಬ್ಬವನ್ನು ಆಚರಿಸಲಾಗುತ್ತದೆ ಹಾಗೇಯೆ ಈ ವರ್ಷವು ನಡೆಯಿತು ಅದರ ಅಂಗವಾಗಿ ಗ್ರಾಮದ ದೊಡ್ಡಸಂಪಿಗೇಶ್ವರ ಶಿವನ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯ ನಡೆಯಿತು ಎಂದು ಲೊಕ್ಕನಳ್ಳಿ ಗ್ರಾಮದ ಜಗದೀಶ್ ಎಂಬುವವರು ತಿಳಿಸಿದರು .
ನಂತರ ಮಾತನಾಡಿದ ಯುವ ಮುಖಂಡ ಸತೀಶ್ ಕುಮಾರ್
ಮಹಾಶಿವರಾತ್ರಿ ಪ್ರಯುಕ್ತ 23ನೇ ವರ್ಷದ ಮಹಾಶಿವರಾತ್ರಿ ಜಾತ್ರೆಯ ಅಂಗವಾಗಿ ನಮ್ಮ ದೇವಾಲಯದಲ್ಲಿ ಸುಮಾರು 22 ಅಡಿ, 11 ಅಡಿ ಹಾಗೂ ಸಣ್ಣ ಬಾಯಿ ಬೀಗಗಳ ಜೊತೆಯಲ್ಲಿ ಒಂಬತ್ತು ಪುಟ್ಟ ಹೆಣ್ಣು ಮಕ್ಕಳಿಂದ ತೀರ್ಥ ಕಳಸ ವನ್ನು ಲೋಕನಹಳ್ಳಿ ಗ್ರಾಮದಿಂದ ಮುಖ್ಯ ರಸ್ತೆಯ ಮೂಲಕ ಶ್ರೀ ದೊಡ್ಡ ಸಂಪಿಗೆಶ್ವರ ದೇವಸ್ಥಾನಕ್ಕೆ ತರಲಾಗುವುದು ನಂತರ ಪೂಜ ವಿಧಿವಿಧಾನಗಳನ್ನು ನಡೆಸಲಾಗುತ್ತದೆ, ಇಂದು ಮಧ್ಯಾಹ್ನದಿಂದ ರಾತ್ರಿ ಪೂರ್ತಿಯು ಅನ್ನದಾನವಿರುತ್ತದೆ, ನಾಳೆ ಬೆಳಿಗ್ಗೆ ಅಗ್ನಿಕುಂಭ ಎತ್ತುವುದರ ಮೂಲಕ ಶಿವರಾತ್ರಿ ಹಬ್ಬಕ್ಕೆ ತೆರೆ ಬೀಳಲಿದೆ ದೇವರ ಕೃಪೆಗೆ ಪಾತ್ರರಾಗಲು ಸುತ್ತಮುತ್ತಲಿನ ಹಳ್ಳಿಗಳಿಂದ ಸಾವಿರಾರು ಜನರು ಹಾಗಮಿಸುತ್ತಾರೆ ಎಂದು ತಿಳಿಸಿದರು. ಇದೇ ಸಮಯದಲ್ಲಿ ಅರ್ಚಕರು ಸೇರಿದಂತೆ ಗ್ರಾಮಸ್ತರು ಹಾಜರಿದ್ದರು .
ವರದಿ :ಉಸ್ಮಾನ್ ಖಾನ್