ಯಾದಗಿರಿ: ಶಹಾಪುರ ತಾಲೂಕಿನ ಹುರಸಗುಂಡಗಿ ಗ್ರಾಮದ ಪ್ರೇಮಿಗಳು ಮಹಾ ಶಿವರಾತ್ರಿ ಹಬ್ಬದ ದಿನದಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೃತ ಪ್ರೇಮಿಗಳಾದ ಸುವರ್ಣ(20), ಈಶಪ್ಪ(22) ಎಂದು ಗುರುತಿಸಲಾಗಿದೆ.
ಇಬ್ಬರೂ ಶಹಾಪುರದ ಹುರಸಗುಂಡಗಿ ಗ್ರಾಮದವರಾಗಿದ್ದು. ಐದಾರು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು.
2 ವರ್ಷದ ಹಿಂದೆ ಪ್ರಿಯತಮೆ ಮದುವೆಯಾಗಿದ್ದಳು. ಸುವರ್ಣ ಬೆಂಗಳೂರಿನಲ್ಲಿ ತನ್ನ ಗಂಡನ ಜೊತೆ ವಾಸವಿದ್ದಳು.
ನಿನ್ನೆ ಗಂಡನಿಗೆ ಹೇಳದೇ ಕೇಳದೇ ಬೆಂಗಳೂರಿನಿಂದ ಹುರುಸಗುಂಡಗಿ ಗ್ರಾಮಕ್ಕೆ ಬಂದಿದ್ದಳು. ಇಡೀ ರಾತ್ರಿ ಒಂದೇ ಕಡೆ ಕಳೆದಿದ್ದು. ಪ್ರೇಮಿಗಳು ಬೆಳಗಿನ ಜಾವ ಇಬ್ಬರೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಭೀಮರಾಯನ ಗುಡಿ ಪೋಲಿಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ವರದಿ: ರಾಜಶೇಖರ ಮಾಲಿ ಪಾಟೀಲ್ ಶಹಾಪುರ