ಯಾದಗಿರಿ ತಾಲೂಕಿನ ಮಗದಂಪೂರ್ ಗ್ರಾಮದಲ್ಲಿ ವಾಲ್ಮೀಕಿ ಸಮುದಾಯದ ಜಿಲ್ಲಾ ಅಧ್ಯಕ್ಷರಾದ ಮರೆಪ್ಪ ನಾಯಕ್ ಮಗದಂಪೂರ್ ಇವರು 70 ಲಕ್ಷ ರೂಪಾಯಿ ಸ್ವಂತ ಖರ್ಚಿನಲ್ಲಿ ಸಮಾಜದ ಏಳ್ಗೆಗಾಗಿ ಮತ್ತು ಸಮಾಜದ ಒಳಿತಿಗಾಗಿ ಇವರ ಪರಿಶ್ರಮದಿಂದ ಇಂದು ಮಗದಂಪೂರ್ ದಲ್ಲಿ ಮಹರ್ಷಿ ವಾಲ್ಮೀಕಿಯ ಭವ್ಯ ಮಂದಿರವನ್ನು ನಿರ್ಮಾಣ ಮಾಡಿರುತ್ತಾರೆ.ಮಹಾ ಶಿವರಾತ್ರಿ ದಿನದಂದು ವಾಲ್ಮೀಕಿ ಸಮುದಾಯದ ಮುಖಂಡರು ಒಂದುಗೂಡಿ ಮಾರ್ಚ್ 2 ನೇ ತಾರೀಕಿನಂದು ಶ್ರೀ ಮಹರ್ಷಿ ವಾಲ್ಮೀಕಿಯ ಮಂದಿರವನ್ನು ಹಾಗೂ ಶ್ರೀ ಅನಂತೇಶ್ವರ ದೇವಾಲಯವನ್ನು ಲೋಕಾರ್ಪ್ರಣೆ ಮಾಡಲಾಗುವುದು ಎಂದು ಹೇಳಿದರು. ಈ ಭವ್ಯ ಮಂದಿರವು ಮಗದಂಪೂರ್ ಬೆಟ್ಟದ ಮೇಲೆ ಅತ್ಯಂತ ಸುಂದರವಾಗಿ ನಿರ್ಮಿಸಲಾಗಿದೆ ತಾವೆಲ್ಲರೂ ಈ ಲೋಕಾರ್ಪಣ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕೆಂದು ಸಮಾಜದ ಎಲ್ಲಾ ಮುಖಂಡರಿಗೆ ಕೇಳಿ ಕೊಳ್ಳುತ್ತೇವೆ. ಮರೆಪ್ಪ ನಾಯಕ್ ಮಗದಂಪೂರ್ ಹಾಗೂ ವಾಲ್ಮೀಕಿ ಸಮಾಜದ ಅಧ್ಯಕರಾದ ಗೌಡಪ್ಪಗೌಡ ಆಲ್ದಾಳ, ಹಣುಮಂತ ದೊರೆ ಟೋಕಾಪುರ, ರಾಜ್ಯದ ಎಲ್ಲಾ ಗೌರವಾನ್ವಿತ ನಾಯಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ವರದಿ: ರಾಜಶೇಖರ ಮಾಲಿ ಪಾಟೀಲ್ ಶಹಾಪುರ