ನನ್ನಾಕಿ ಅದಾಳ ಬಿಳಿ ಜಿರಳೆಯಂತಾಕಿ
ಸದಾ ನನ್ನಿಂದೆ ತಿರುಗಾಕಿ
ಮೈಗೆ ಮೈಯ ತಿಕ್ಕುತಾ ಬಳಿಯಲ್ಲೇ ಇರುವಾಕಿ…!!
ಚಹಾ ಬಿಸ್ಕಿಟು ಬೇಡಾಕಿ
ಹಾಲು ಮೊಸರು ತಿನ್ನಾಕಿ
ನಿಂತಲ್ಲೇ ನಿಲ್ಲದಾಕಿ ಮನೆ ತುಂಬಾ ಓಡಾಡುವಾಕಿ….!!
ಮನೆ ಮಂದಿಗೆಲ್ಲಾ ಬೇಕಾದಾಕಿ
ಮನೆ ಬಿಟ್ಟೆಲ್ಲೂ ಹೋಗದಾಕಿ
ಎಲ್ಲರ ಮನ ಮನದಲ್ಲಿ ಉಳಿದಾಕಿ….!!
ಕಾಲು ಕಾಲಾಗ ಅಡ್ಡಡ್ಡ ಬರುವಾಕಿ
ಮನೆಗೆ ಬಂದವರ ಚೀಲ ಹುಡುಕಾಕಿ
ಸಿಕ್ಕಿಲ್ಲೆಂದರ ಸಿಟ್ಟಿಲೇ ಮೂಲ್ಯಾಗ ಕೂಡಾಕಿ….!!
ಚಿಕನ್ನು ಮಟನ್ನು ಬೇಡಾಕಿ
ಚಂಚಲದಾಕಿ ಚೆಲ್ಲಾಟ ಆಡುವಾಕಿ
ಚರ್ರ್ ಪರ್ರ್ ಅಂತ ಹಾಸಿಗೆ ಜಗ್ಗಿ ಮಗ್ಗಲಕ ಮಲಗಾಕಿ….!!
ಮುದ್ದಾದ ಮೊಗದಾಕಿ
ಪ್ರೀತಿ ಹೆಚ್ಚಾದ್ರ ಚುಂಬನ ನೀಡಾಕಿ
ತಲೆ ಸವರಿದರ ತೆಕ್ಕೆಯಲಿ ಬಂದು ಮಲಗಾಕಿ…..!!
ನನ್ನಾಕಿ ಅದಾಳ ಬಿಳಿ ಜಿರಳೆಯಂತಾಕಿ
ಮುಟ್ಟಿದರ ಮಾಸುವಂತಾಕಿ
ಮೀಯಾವ್ ಮೀಯಾವ್ ಅಂತ ಮುಖವನ್ನೇ ನೆಕ್ಕಾಕಿ….!!
- ಹನುಮಂತ ದಾಸರ
ಯುವ ಕವಿ ಸಾಹಿತಿ ಬರಹಗಾರರು
ಧಾರವಾಡ- 9945246234.