ಔರಾದ : “ದಾಸೋಹವೆಂಬುದು ಅಂತರಂಗದ ಭಕ್ತಿಸಾಧ್ಯತೆ, ಅದು ತನು-ಮನ-ಧನದ ಸಮರ್ಪಣೆ. ತನ್ನನ್ನೇ ತಾನು ಸಮುದಾಯಕ್ಕೆ ಸಮಾಜಕ್ಕೆ ಅರ್ಪಿಸಿಕೊಳ್ಳುವುದೇ ನಿಜವಾದ ದಾಸೋಹವೆಂದು ಶರಣರು ಹೇಳಿದ್ದಾರೆ” ಅದರಂತೆ ಇಲ್ಲಿನ ಯುವ ತಂಡ ಅಮರೇಶ್ವರ ಜಾತ್ರಾ ಮಹೋತ್ಸವ ನಿಮಿತ್ಯ ರಥೋತ್ಸವ ಕಾರ್ಯಕ್ರಮದಂದು ಜಾತ್ರೆಗೆ ಆಗಮಿಸಿದ್ದ ಆಂಧ್ರ, ತೆಲಂಗಾಣ,ಮಹಾರಾಷ್ಟ್ರ, ಹಾಗೂ ದೂರದ ಹಳ್ಳಿಗಳಿಂದ ಬಂದಂತಹ ಭಕ್ತರಿಗೆ ಬೇಡಿದ ವರ ನೀಡುವ ಶ್ರೀ ಅಮರೇಶ್ವರ ದರ್ಶನ ಪಡೆಯುವುದರ ಜೊತೆಗೆ ಹಳ್ಳಿ ಸೊಗಡಿನ ರುಚಿಕರವಾದ ಭಜ್ಜಿ- ರೊಟ್ಟಿ ಪ್ರಸಾದ ವ್ಯವಸ್ಥೆ ಸಂಗಮೇಶ ಚಿದ್ರೆ ಹಾಗೂ ಅವರ ಗೆಳೆಯರ ಬಳಗದ ವತಿಯಿಂದ ಮಾಡಲಾಗಿತ್ತು. ಬಂದಂತಹ ಭಕ್ತರಿಗೆ ವ್ಯವಸ್ಥಿತವಾಗಿ ದಾಸೋಹ ನೇರೆವೆರಿಸಿಕೊಟ್ಟಿದ್ದರು. ಸುಮಾರು 7-8 ಸಾವಿರ ಜನ ಭಜ್ಜಿ – ರೊಟ್ಟಿ ಪ್ರಸಾದ ಸ್ವೀಕರಿಸಿದ್ದು ಈ ಯುವ ತಂಡಕ್ಕೆ ಮತ್ತಷ್ಟು ಸಂತೋಷದ ಭಾವನೆ ಮೂಡಿಸಿತು.ಮುಂಬರುವ ಅಮರೇಶ್ವರ ಜಾತ್ರೆಯಲ್ಲಿ ಇನ್ನೂ ದೊಡ್ಡ ಮಟ್ಟದ ದಾಸೋಹ ಆಯೋಜನೆ ಮಾಡುವ ಆಶಯ ಭಾವ ವ್ಯಕ್ತಪಡಿಸಿದರು. ಮುಖೇಶ ಪಾಟೀಲ್,ಅಮರ ಹೇಡೆ,ಮಾರುತಿ ಚಿಟಗೀರೆ,ವಿರೇಶ ಮೊರ್ಗೆ,ಬಸವಪ್ರಸಾದ ಘಾಳೆ, ರಾಜೇಶ್ ನೀಲಾ, ಮಹೇಶ ಸೊರಳ್ಳೆ, ಸಂತೋಷ ಖೇಳಗೆ, ಸಚಿನ ರೆಡ್ಡಿ, ಮನೋಜ ಕೋಳಿ, ಅಮರ ಹೊನ್ನಶೆಟ್ಟಿ, ಸುರೇಶ ಹಂಡಗೆ, ಶಿವಾನಂದ ಸ್ವಾಮಿ, ಮೊಹನ ರೆಡ್ಡಿ , ಮಾರುತಿ ರೆಡ್ಡಿ, ಇವರ ನೇತೃತ್ವದಲ್ಲಿ ” ಅನ್ನಾತ್ ಭವಂತಿ ಭೂತಾನಿ” ಎನ್ನುವ ಮಾತಿನಂತೆ ಈ ತಂಡ ಅಚ್ಚುಕಟ್ಟಾಗಿ ದಾಸೋಹ ನೇರವೆರಿಸಿಕೊಟ್ಟರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.