ರಾಯಚೂರು:- ಸಿಂಧನೂರು ತಾಲೂಕಿನ ಒಳಬಳ್ಳಾರಿ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದ ನಿರ್ಮಾಣಕ್ಕಾಗಿ ಪೊಲೀಸ್ ಇಲಾಖೆಯ ಅಧಿಕಾರಿಗಳಾದ ವೆಂಕಟಪ್ಪ ನಾಯಕ ಡಿ.ವೈ.ಎಸ್.ಪಿ. ಸಿಂಧನೂರು ವಲಯ. ಕೆ. ರವಿಕುಮಾರ ಸಿ.ಪಿ.ಐ.ಸಿಂಧನೂರು ವೃತ್ತ ಈ ಅಧಿಕಾರಿಗಳು ಕಾರುಣ್ಯ ಆಶ್ರಮಕ್ಕೆ ಸಹಾಯ ಮಾಡುವುದರ ಮೂಲಕ ನಿರಂತರ ನಮ್ಮ ಇಲಾಖೆಯ ಸಹಕಾರವಿರುತ್ತದೆ ಎನ್ನುವ ಭರವಸೆಯನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ. ಈ ಸಮಯದಲ್ಲಿ ಸಹಾಯವನ್ನು ಸ್ವೀಕರಿಸಿದ ಆಶ್ರಮದ ಆಡಳಿತಾಧಿಕಾರಿಗಳಾದ ಡಾ.ಚನ್ನಬಸವ ಸ್ವಾಮಿ ಮಾತನಾಡಿ ನಮ್ಮ ಸಿಂಧನೂರಿನ ಡಿವೈಎಸ್ ಪಿ ಗಳಾದ ವೆಂಕಟಪ್ಪ ನಾಯಕ ಹಾಗೂ ಸಿಪಿಐ ಗಳಾದ ಕೆ.ರವಿಕುಮಾರ ಈ ಹಿರಿಯ ಅಧಿಕಾರಿಗಳು ಮಾಡಿರುವ ಸಹಾಯ ಅದೆಷ್ಟೋ ಅಂದ ಅನಾಥರ ಬಾಳಿಗೆ ಶಾಶ್ವತ ಆಶ್ರಯ ನೀಡುತ್ತದೆ.ಕಾರುಣ್ಯ ಆಶ್ರಮಕ್ಕೆ ಪೊಲೀಸ್ ಇಲಾಖೆಯ ಹೆಚ್ಚಿನ ಮಟ್ಟದ ಸಹಾಯ ಕಾರುಣ್ಯ ಆಶ್ರಮಕ್ಕೆ ದೊರೆಯುತ್ತಿದೆ. ಇಂತಹ ಒಂದು ಕಾನೂನಾತ್ಮಕ ಇಲಾಖೆ ಈ ಸಂಸ್ಥೆಗೆ ನೀಡುತ್ತಿರುವ ಸಹಾಯ ಸಹಕಾರಕ್ಕೆ ನಮ್ಮ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಅಭಿನಂದನೆಗಳನ್ನು ಅರ್ಪಿಸಿದ್ದಾರೆ ಕಾರುಣ್ಯ ಆಶ್ರಮದಲ್ಲಿ ಆಶ್ರಯ ಪಡೆದಿರುವ ಎಲ್ಲಾ ಜೀವಿಗಳು ಸಹ ಪೊಲೀಸ್ ಇಲಾಖೆಯು ಗುರುತಿಸದ ಮೇಲೆ ಆಶ್ರಯ ನೀಡಲಾಗುತ್ತಿದೆ ನಾನು ಕಾರುಣ್ಯ ಆಶ್ರಮದ ವತಿಯಿಂದ ಸಮಸ್ತ ಕಾರುಣ್ಯ ಆಶ್ರಮದ ಎಲ್ಲಾ ದಾನಿಗಳ ಪರವಾಗಿ ಪೊಲೀಸ್ ಇಲಾಖೆಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಅಧಿಕಾರಿಗಳು ಕಾರುಣ್ಯ ಆಶ್ರಮದ ಸೇವೆಯ ಜೊತೆಗಿರುವುದು ನಮ್ಮ ಭಾರತೀಯ ಕರುಣಾಮಯಿ ಸಂಸ್ಕೃತಿಯನ್ನು ಎತ್ತಿ ಹಿಡಿದಂತಾಗಿದೆ ಎಂದು ಮಾತನಾಡಿದರು. ಈ ಸಮಯದಲ್ಲಿ ಪೊಲೀಸ್ ಅಧಿಕಾರಿಗಳಾದ ಮಹೇಶ ಆಶ್ರಮದ ಸಿಬ್ಬಂದಿಗಳಾದ ಮರಿಯಪ್ಪ ಇಂದುಮತಿ ಅನೇಕರು ಉಪಸ್ಥಿತರಿದ್ದರು
ವರದಿ//ವೆಂಕಟೇಶ. ಹೆಚ. ಬೂತಲದಿನ್ನಿ
