ಹನೂರು:ತಾಲೂಕಿನ ಜೀರಿಗೆ ಗದ್ದೆ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ
ಹಳ್ಳಿಯ ಕಡೆ
ಕಾರ್ಯಕ್ರಮವನ್ನು ತಹಸೀಲ್ದಾರ್ ಆನಂದಯ್ಯರವರು ಉದ್ಘಾಟಿಸಿ
ಮಾತನಾಡಿದ ಆನಂದಯ್ಯ ರವರು ಪ್ರತಿ ತಾಲೂಕಿನಲ್ಲಿ ಒಂದು ಗ್ರಾಮವನ್ನು ಆಯ್ಕೆ ಮಾಡಿಕೊಂಡು ತಿಂಗಳ ಮೂರನೇ ಶನಿವಾರ ಈ ಒಂದು ಕಾರ್ಯಕ್ರಮ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬುವಂತ ಶೀರ್ಷಿಕೆ ಕಾರ್ಯಕ್ರಮವನ್ನು ನಾವು ಸರ್ಕಾರ ಆದೇಶದಂತೆ ನಡೆ ನಡೆಸಿಕೊಂಡು ಬರುತ್ತಿದ್ದೇವೆ
ಈ ಕಾರ್ಯಕ್ರಮದ ಉದ್ದೇಶವೇನೆಂದರೆ ನಾವು ಕೂಡ ಎಲ್ಲರು ತಾಲೂಕು ಕೇಂದ್ರಕ್ಕೆ ಉಪ ವಿಭಾಗದ ಮಟ್ಟಕ್ಕೆ ಕುಂದು ಕೊರತೆ ಸೌಲಭ್ಯ ಬಗ್ಗೆ ಅರ್ಜಿ ನೀಡುವುದರಿಂದ ನಿಮಗೆ ತೊಂದರೆ ಆಗುತ್ತದೆ ಆ ತೊಂದರೆಗಳನ್ನು ನಾವು ಒಂದು ಮಟ್ಟದಲ್ಲಿ ಈ ಒಂದು ಕಾರ್ಯಕ್ರಮ ನಿಮ್ಮ ಗ್ರಾಮದಲ್ಲಿ ಇಟ್ಟುಕೊಂಡಿದ್ದೀವಿ, ಎಲ್ಲ ರೀತಿಯ ಸೌಲಭ್ಯವನ್ನು ನೂರಕ್ಕೆ ನೂರು ಸಹ ಯಾರು ಪಡೆಯುತ್ತಿಲ್ಲ ಅದರಲ್ಲಿ ಯಾರು ವಂಚಿತರಾಗಿದ್ದೀರಿ ಇದುವರೆಗೂ ಯಾವ ಸೌಲಭ್ಯ ಇಲ್ಲ ಕೊರತೆ ಆಗಿದೆ ಅಂಥವರು ಈ ಒಂದು ವೇದಿಕೆಯಲ್ಲಿ ಅರ್ಜಿಯನ್ನು ಕೊಡಿ ಕಂದಾಯ ಇಲಾಖೆ ವಿದ್ಯುತ್ ದಿನಕ್ಕೆ ಆರೋಗ್ಯ ಇಲಾಖೆ ಇನ್ನು ಅನೇಕ ಇಲಾಖೆಗೆ ಸಂಬಂಧಪಟ್ಟಂತೆ ವಂಚಿತರಾಗಿದ್ದರೆ ಸ್ಥಳದಲ್ಲಿ ಪರಿಹಾರ ಮಾಡಿಕೊಳ್ಳುತ್ತೇವೆ.
ಅದೇ ರೀತಿ ಅರಣ್ಯ ಹಕ್ಕು ಕಾಯ್ದೆ ಅಡಿ ಜಮೀನು ಇದೆ. ಫಾರೆಸ್ಟ್ ರೈಟ್ ಪ್ರಕಾರ ಹಕ್ಕು ಪತ್ರ ಕೊಟ್ಟಿದ್ದಾರೆ ನಮ್ಮಲ್ಲಿ ಒಟ್ಟು ಸರ್ಕಾರದ ಮೂವತ್ತ ಮೂರು ಇಲಾಖೆ ಸೌಲಭ್ಯ ಪಡೆಯಲಿಕ್ಕೆ ತೊಂದರೆಯಾಗಲಿದ್ದು ನಾವು ಹೊಸದಾಗಿ ಬೇರೆ ಇಡುವಳಿ ಪಾಣಿದಾರರು ಹೇಗೆ ಸರ್ಕಾರದ ಸೌಲಭ್ಯ ಪಡೆಯುತ್ತಿದ್ದರೆ, ನೀವು ಕೂಡ ಎಫ್ ಆರ್ ಐ ಡಿ ಕಡ್ಡಾಯವಾಗಿ ಮಾಡಿಸಿ ಪ್ರತಿಯೊಂದು ಇಲಾಖೆಯ ಸೌಲಭ್ಯವು ಕೂಡ ಪಡೆಯುತ್ತೀರಿ.ಎಫ್ ಆರ್ ಐಡಿ ಮೂಲಕ ಪ್ರತಿವರ್ಷ ಬೆಳೆ ನಷ್ಟ, ಯಾವುದಾದರು ಪರಿಹಾರ ಸಿಗುವಂತೆ ಎಫ್ಆರ್‌ಐಡಿನಲ್ಲಿ ಇದ್ದಲ್ಲಿ ಮಾಡುತ್ತೇವೆ. ಉಳಿದಂತೆ ಬಿಪಿಎಲ್ ಕಾರ್ಡಿಗೆ ಅರ್ಜಿ ಹಾಕಬಹುದು ಅತಿ ಶೀಘ್ರದಲ್ಲಿ ಕಾರ್ಡು ನೀಡಲಾಗುತ್ತದೆ. ಉಳಿದಂತೆ ಪಿಂಚಣಿ ಯಾರಿಗೆ ಬರುತ್ತಿಲ್ಲ ಅವರು ಈ ವೇದಿಕೆಯಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು ಎಂದು ತಿಳಿಸಿದರು.ಹಾಗೂ ಮಹಿಳಾ ಮತ್ತು ಮಕ್ಕಳ ಕುಟುಂಬ ಅಭಿರುದ್ದಿ ಇಲಾಖೆಯ ಅಧಿಕಾರಿ ಪೂರ್ಣಿಮಾ ರವರು ತಮ್ಮ ಇಲಾಖೆಯಿಂದ ಬರುವಂತಹ ಸರ್ಕಾರಿ ಸೌಲಭ್ಯಗಳು ಹಾಗೂ ಹಾಗೂ ಹಲವಾರು ಇಲಾಖೆಯಲ್ಲಿ ಬರುವಂತ ಹಲವಾರು ಸಾಲ ಸೌಲಭ್ಯ ಯೋಜನೆಗಳ ಬಗ್ಗೆ ಭಾಗ್ಯಲಕ್ಷ್ಮಿ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಸರ್ಕಾರದಿಂದ ಬರುವಂತಹ ಎಲ್ಲಾ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಲು ತಿಳಿಸಿದರುಇನ್ನು ಇದೆ ವೇಳೆ ಆರ್‌ಟಿಐ ಕಾರ್ಯಕರ್ತ ಅಪ್ಪಾಜಿಯವರು ಪಿಜಿ ಪಾಳ್ಯ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಹಲವು ಗ್ರಾಮದ ಜನರಿಗೆ ಮೂಲಭೂತ ಸೌಕರ್ಯಗಳು ಸಮರ್ಪಕವಾಗಿ ತಲುಪುತ್ತಿಲ್ಲ ಎಂದು ಅಧಿಕಾರಿಗಳ ಹತ್ತಿರ ಅಸಮಾಧಾನವನ್ನು ಹೊರ ಹಾಕಿದರು ಹಾಗೂ ಪಿಜಿ ಪಾಳ್ಯ ಗ್ರಾಮ ಪಂಚಾಯತಿಯ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಕೃಷ್ಣಮೂರ್ತಿ ರವರು ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮದಲ್ಲಿ ಹಲವು ಇಲಾಖೆಗಳ ಅಧಿಕಾರಿಗಳು ಗೈರು ಹಾಜರಾಗಿರುವುದರ ಕುರಿತು ಅಸಮಾಧಾನ ವ್ಯಕ್ತಪಡಿಸಿದರು
ಈ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಮಾದಮ್ಮ, ಆರ್ ಐ ಮಾದೇಶ್, ಗ್ರಾಮ ಲೆಕ್ಕಿಗರಾದ ನಾಗರಾಜು, ಸರವಣ, ಲಿಂಗರಾಜು ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರು ಉಪಸ್ಥಿತರಿದ್ದರು,
ವರದಿ ಉಸ್ಮಾನ್ ಖಾನ್.