
ಮರಳು ಲಾರಿ ಸೀಜ್ ಆದರೆ ಲಾರಿಯಲ್ಲಿ ಮರಳು ಕಾಣೆಯಾಗಿದೆ.!
ಕಲಬುರ್ಗಿ ಯಡ್ರಾಮಿ ತಾಲೂಕಿನಲ್ಲಿ ಕೆಲವು ವರ್ಷಗಳಿಂದ ಪಟ್ಟಣ ಹಾಗೂ ಹಳ್ಳಿ ಹಳ್ಳಿಗಳಲ್ಲಿ ಅಕ್ರಮ ಮರಳು ದಂದೆ ಕೋರರ ಹಾವಳಿ ಹೆಚ್ಚಾಗಿದೆ ಎಂದು ಇಲ್ಲಿನ ನಾಗರಿಕರು ಹೇಳುತ್ತಾರೆ. ಇದನ್ನು ಕಡಿವಾಣ ಹಾಕುವ ನಿಟ್ಟಿನಲ್ಲಿ ಯಡ್ರಾಮಿ ತಾಲೂಕ ದಂಡಾಧಿಕಾರಿಗಳ. ನೇತೃತ್ವದಲ್ಲಿ ದಾಳಿಯಿಂದ ಅಕ್ರಮವಾಗಿ ಮರಳು ಸಾಗುತ್ತಿರುವ ಟಿಪ್ಪರನ್ನು ವಶಕ್ಕೆ ಪಡೆದುಕೊಂಡು. ನಂತರ ಟಿಪ್ಪರ್ ನಲ್ಲಿ ಇದ್ದ ಮರಳು ಸ್ಥಳದಿಂದ ಏಕಏಕಿ ನಾಪತ್ತೆ ಆಗುತ್ತದೆ. ಈ ನಾಪತ್ತೆಯ ಹಿಂದೆ ಕಾಣದ ಕೈಗಳ ಕೈವಾಡ ಇರಬಹುದು. ಎಂದು ಸಾರ್ವಜನಿಕ ವಲಯದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ.
ಒಂದು ದಿನದವರೆಗೂ ವಶದಲ್ಲಿ ಇದ್ದ ಮರಳುಗಾಡಿ ಏಕಾಏಕಿ ನಾಪತ್ತೆ ಆಗಿದ್ದು ಹೇಗೆ..!
ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿರುವ ಟಿಪ್ಪರನ್ನು ಸೋಮವಾರ ಮುಂಜಾನೆ ಸಮಯದಲ್ಲಿ ತಾಲೂಕ ಅಧಿಕಾರಿಗಳು ಟಿಪ್ಪರನ್ನು ವಶಕ್ಕೆ ಪಡೆಯುತ್ತಾರೆ. ಆದರೆ ಮಾರನೇ ದಿನ ಸ್ಥಳದಿಂದ ಈ ಟಿಪ್ಪರ್ ನಾಪತ್ತೆ ಆಗುತ್ತದೆ ಅಂದರೆ ಅದು ಹೇಗೆ ಸಾಧ್ಯ ಎಂಬುವುದು ಸಾರ್ವಜನಿಕರ ಯಕ್ಷಪ್ರಶ್ನೆಯಾಗಿದೆ..?
ಇದಕ್ಕೆ ತಾಲೂಕಾ ದಂಡಾಧಿಕಾರಿಗಳು ಉತ್ತರ ನೀಡಬೇಕು ಎಂದು ಇಲ್ಲಿನ ನಾಗರಿಕರು ಹೇಳುತ್ತಾರೆ.
ಅಕ್ರಮವಾಗಿ ಮರಳು ಸಾಗಿಸುತ್ತಿರುವ ಟಿಪ್ಪರನ್ನು ತಾಲೂಕ ಅಧಿಕಾರಿ ವಶಕ್ಕೆ ಪಡೆದಿದ್ದ. ಟಿಪ್ಪರಿನ ನಂಬರ್ ಪ್ಲೇಟಿನಲ್ಲಿ ಸಂಖ್ಯೆಗಳು ಕಾಣದ ರೀತಿಯಲ್ಲಿ ಸಂಪೂರ್ಣವಾಗಿ ಹಾಳು ಮಾಡಲಾಗಿರುತ್ತದೆ. ಯಾವ ರೀತಿ ನಾಶಪಡಿಸಿದ್ದಾರೆ ಅಂದರೆ ಯಾರಿಗೂ ತಿಳಿಯದ ರೀತಿಯಲ್ಲಿ ನಾಶಪಡಿಸಿದ್ದಾರೆ.
ಈ ಸ್ಥಿತಿಯಲ್ಲಿ ಇದ್ದ ವಾಹನವನ್ನು ಸುಮಾರು ಒಂದು ದಿನದವರೆಗೂ ಡಾ.ಬಿ.ಆರ್.ಅಂಬೇಡ್ಕರ ವೃತ್ತದಲ್ಲಿ ನಿಲುಗಡೆ ಮಾಡುವ ಅವಶ್ಯಕತೆ ಇತ್ತ..! ಹಾಗಾದರೆ ವಾಹನದ ಭದ್ರತೆಯ ಕುರಿತು ತಾಲೂಕ ಅಧಿಕಾರಿಗಳು ಹಾಗೂ ಪೊಲೀಸ ಇಲಾಖೆ ಉತ್ತರ ನೀಡಬೇಕು. ಎಂಬುದು ಸಾರ್ವಜನಿಕರ ಯಕ್ಷ ಪ್ರಶ್ನೆಯಾಗಿದೆ ?
ವರದಿ:ರಾಜಶೇಖರ ಮಾಲಿ ಪಾಟೀಲ್
