ಬಳ್ಳಾರಿ: ಕೇಂದ್ರ ಗೃಹಮಂತ್ರಿಗಳಾದ ಸನ್ಮಾನ್ಯ ಶ್ರೀ ಅಮಿತ್ ಷಾ ರವರ ನೇತೃತ್ವದಲ್ಲಿ ಇಂದು ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಆಯೋಜಿಸಲಾಗಿದ್ದ ಬಳ್ಳಾರಿ ವಿಭಾಗದ ಪ್ರಮುಖರ ಸಭೆಯಲ್ಲಿ ಮಾನ್ಯ ಹಟ್ಟಿ ಚಿನ್ನದ ಗಣಿ ಕಂಪನಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ, ಮಾನಪ್ಪ ಡಿ.ವಜ್ಜಲರು ಭಾಗಿಯಾಗಿ ಮುಂಬರುವ ವಿಧಾನ ಸಭಾ ಚುನಾವಣೆಯ ರೂಪುರೇಷೆಗಳ ಕುರಿತು ಸುದೀರ್ಘವಾಗಿ ಚರ್ಚಿಸಿದರು.ಈ ಸಂದರ್ಭದಲ್ಲಿ ಕರ್ನಾಟಕದ ಉಸ್ತುವಾರಿಗಳಾದ ಶ್ರೀಅರುಣ್ ಜೀ,ಹಾಗೂ ರಾಜ್ಯಾಧ್ಯಕ್ಷರಾದ ಶ್ರೀನಳಿನ್ ಕುಮಾರ್ ಕಟೀಲ್,ಹಾಗೂ ನಿಕಟ ಪೂರ್ವ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ಹಾಗೂ ಸಾರಿಗೆ ಸಚಿವರಾದ ಶ್ರೀ ಬಿ.ಶ್ರೀರಾಮುಲು ಹಾಗೂ ರಾಯಚೂರು ಸಂಸದರಾದ ಶ್ರೀ ರಾಜಾ ಅಮರೇಶ್ವರ ನಾಯಕರು, ಸೇರಿದಂತೆ ಸಂಸದರು ಹಾಗೂ ಶಾಸಕರು ಪಕ್ಷದ ಉಸ್ತುವಾರಿಗಳು ಉಪಸ್ಥಿತರಿದ್ದರು
