ಹನೂರು ಕ್ಷೇತ್ರಕ್ಕೆ ಮಂಜುನಾಥ್ ಶಾಸಕ ಆಗಿ ಕಾಣಲು ಸಜ್ಜಾಗುತ್ತಿರುವ ಕ್ಷೇತ್ರದ ಜನತೆ ಅತಿ ಹೆಚ್ಚು ಸೇರ್ಪಡೆ ಆಗುತ್ತಿರುವ ಕ್ಷೇತ್ರದ ಜನರು ಕಾಂಗ್ರೆಸ್ ತೊರೆದು ಎಂ. ಆರ್ ಮಂಜುನಾಥ್ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆ.
ಹನೂರು:ತಾಲೂಕಿನ ಬದ್ರಿನಹಳ್ಳಿ ಗ್ರಾಮಸ್ಥರು ಜೆಡಿಎಸ್ ಕಚೇರಿಯಲ್ಲಿ ಎಂ ಆರ್ ಮಂಜುನಾಥ್ ರವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಷಣ್ಮುಗಂ ರವರು ಮಾತನಾಡಿ ನಾವು ನಮ್ಮ ತಾತನ ಕಾಲದಲ್ಲೂ ಕಾಂಗ್ರೆಸ್ ಪಕ್ಷದಲ್ಲಿ ಇದ್ದು, ಯಾವ ಪಕ್ಷದವರು ಕರೆದರು ಹೋಗುತ್ತಿರಲಿಲ್ಲ ನಾವು ಹಿಂದುಳಿದ ವರ್ಗದ ಜನರಾಗಿದ್ದು ನಮಗೆ ವಾಸಿಸಲು ಜಾಗ ಮನೆ ಶೌಚಾಲಯ ಯಾವುದನ್ನು ಕಾಂಗ್ರೆಸ್ ಪಕ್ಷ ಮಾಡಿಕೊಟ್ಟಿಲ್ಲ.ಬೇರೆಯವರ ಜಾಗದಲ್ಲಿ ಹಳೆ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದು ಸುಮಾರು 50 ಕುಟುಂಬಗಳು ಇದ್ದೇವೆ,20 ವರ್ಷಗಳಿಂದ ಮನೆ ಬೇಕು ಎಂದು ಕಾಂಗ್ರೆಸ್ ಪಕ್ಷದವರಿಗೆ ಸಂಸದರಿಗೆ ಹಾಗೂ ಶಾಸಕರಿಗೆ ಎಲ್ಲರಿಗೂ ಅರ್ಜಿಯನ್ನು ನೀಡಿದ್ದೇವೆ. ಯಾರು ನಮಗೆ ಸಹಾಯವನ್ನು ಮಾಡಿಲ್ಲ ಸುಳ್ವಾಡಿ ವಿಷಪ್ರಾಸನವಾದಾಗ ನಮ್ಮ ಊರಿನಲ್ಲಿ 17 ಜನ ಸಾಲಿನಪಿದರು, ಸರ್ಕಾರ ಎರಡು ಎಕರೆ ಜಮೀನನ್ನು ನೀಡಿದರು ಅದನ್ನು ಡಿಸಿ ಕಾವೇರಿ ಮೇಡಮ್ ಅವರು ಮಾಡಿಕೊಟ್ಟರು, ಆ ಜಮೀನನ್ನು ಭಾಗ ಮಾಡಿ ಹಂಚಿಕೊಂಡಿ ಎಂದು ಮಾಟಳ್ಳಿ ಪಿಡಿಒ ಹಾಗು ಚೇರ್ಮನ್ ರವರನ್ನು ಕೇಳಿದರು, ಮಾಡಿಕೊಡುತ್ತಿಲ್ಲ ಏನಾದರೂ ಒಂದು ಸಬೂಬು ಹೇಳಿ ಕಳಿಸುತ್ತಾರೆ. ನೆನ್ನೆ ನಮ್ಮಿಂದ ಇದನ್ನು ಮಾಡಲು ಆಗಲ್ಲ ನೀವು ಬೇಕಾದ್ರೆ ಯಾರಿಂದಾದರೂ ಮಾಡಿಸಿಕೊಳ್ಳಿ ಎಂದು ಹೇಳುತ್ತಿದ್ದಾರೆ ನಂತರ ಎಂಆರ್ ಮಂಜುನಾಥ್ ರವರ ಸಹಾಯವನ್ನು ಕೇಳಿದೆವು ಅವರು ಮಾಡಿಕೊಡುವುದಾಗಿ ನಮಗೆ ಭರವಸೆಯನ್ನು ನೀಡಿದ್ದಾರೆ ನಮಗೆ ಜಾಗವನ್ನು ಕೊಡಿಸಿದರೆ ಸಾಕು ಹಾಗೂ ಹೌಸಿಂಗ್ ಬೋರ್ಡ್ ನಿಂದ ಕೆಲಸವಾಗಬೇಕಿದೆ ಅದನ್ನು ಮಾಡಿಸಿ ಕೊಡಿ ಎಂಬುದಾಗಿ ಬೇಡಿಕೆ ಇಟ್ಟರು.
ಕುಮಾರಸ್ವಾಮಿ ಅವರು ನಮ್ಮ ಗ್ರಾಮಕ್ಕೆ ಬಂದಿದ್ದರು ಸುಮಾರು ಜನರು ಸಾವನ್ನಪ್ಪಿದರೂ, ಹಾಗೂ ಮೈಸೂರು ಖಾಸಗಿ ಆಸ್ಪತ್ರೆಯ ಚಿಕಿತ್ಸೆಗೆ ಒಬ್ಬೊಬ್ಬರಿಗೆ 20 ರಿಂದ 25 ಲಕ್ಷದವರೆಗೆ ಖರ್ಚಾಗಿದ್ದು ನಮ್ಮಲ್ಲಿ ಆಸ್ಪತ್ರೆಗೆ ಕಟ್ಟಬೇಕಾದ ಹಣ ಇರಲಿಲ್ಲ ಆ ಸಮಯದಲ್ಲಿ ನಮ್ಮ ನೆರವಿಗೆ ಬಂದಿದ್ದೆ ಕುಮಾರಸ್ವಾಮಿಯವರು ಅವರನ್ನು ನಾವು ಸಾಯುವವರೆಗೆ ಮರೆಯುವುದಿಲ್ಲ, ಅದಕ್ಕಾಗಿಯೇ ನಾವು ಎಮ್ ಆರ್ ಮಂಜುನಾಥ್ ರವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷವನ್ನು ಸೇರುತ್ತಿದ್ದೇವೆ ಎಂಬುದಾಗಿ ತಿಳಿಸಿದರು.
ಮಂಜುನಾಥ್ ರವರು ಮಾತನಾಡಿ ಇವರ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಿ ಕೊಡುತ್ತೇನೆ ಎಂಬ ಭರವಸೆಯನ್ನು ನೀಡಿದ್ದೇನೆ. ಕುಮಾರಸ್ವಾಮಿಯವರ ಮೇಲಿರುವ ವಿಶ್ವಾಸದಿಂದ ಇವರೆಲ್ಲ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಹನೂರಿನಲ್ಲಿ ಜೆಡಿಎಸ್ ಗೆಲುವಿಗೆ ಕೈಜೋಡಿಸಲಿದ್ದಾರೆ ಎಂಬುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಮಂಜೇಶ್ ಹಾಗೂ ಇನ್ನು ಮುಂತಾದವರು ಹಾಜರಿದ್ದರು ಕಂದಸ್ವಾಮಿ, ಬಸವರಾಜ್, ಸರವಣ, ಸಿದ್ದಪ್ಪ, ರಾಮು, ತಂಗರಾಜು, ಮುರುಗೇಶ್, ಮತ್ತು ಮುತ್ತು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ವರದಿ:ಉಸ್ಮಾನ್ ಖಾನ್
