ಸಿಂಧನೂರಿನ ಬೂದಿಹಾಳ ಗ್ರಾಮದಲ್ಲಿ ವಿವಿಧ ಪಕ್ಷಗಳನ್ನು ತೊರೆದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸೇರ್ಪಡೆ
ಸಿಂಧನೂರು : ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಿಂಧನೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳಾದ ಶ್ರೀಮಲ್ಲಿಕಾರ್ಜುನ ನೆಕ್ಕಂಟಿಯವರಿಗೆ ಸಿಂಧನೂರಿನ ಬೂದಿವಾಳ್ ಗ್ರಾಮಮದಲ್ಲಿ ಡೊಳ್ಳು ವಾದ್ಯಗಳಿಂದ ಹಾಗೂ ಪಟಾಕ್ಷಿ ಬಿಡುವ ಮುಖಾಂತರ ಅದ್ದೂರಿಯಾಗಿ ಮೆರವಣಿಗೆಯಿಂದ ಸ್ವಾಗತವನ್ನು ಮಾಡಿದರು.
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಿಂಧನೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳಾದ ದ ಶ್ರೀ ಮಲ್ಲಿಕಾರ್ಜುನ ನೆಕ್ಕಂಟ್ಟಿಯವರ ಸಮ್ಮುಖದಲ್ಲಿ ಗ್ರಾಮದ ಹಿರಿಯ ಮುಖಂಡರುಗಳಾದ ಮಲ್ಲೇಶ, ವೀರೇಶ, ಬಬ್ರುವಾಹನ, ಶರಣಪ್ಪ, ನಾಗರಾಜ, ಬಸವರಾಜ್, ಯಂಕೋಬ ಮತ್ತು ಇನ್ನೂ ಅನೇಕ ಗ್ರಾಮದ ಮುಖಂಡರು, ಯುವಕರು ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಹಾಗೂ ಕ್ಷೇತ್ರದ ಜನತೆ ರಾಜಕೀಯ ಬದಲಾವಣೆಯನ್ನು ಬಯಸಿರುವ ಹಿನ್ನೆಲೆಯಲ್ಲಿ ಜನತೆಯ ಆಷೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ದೃಢ ಸಂಕಲ್ಪ ಮಾಡಿ ಕಲ್ಯಾಣ ರಾಜ್ಯ ಪ್ರಗತಿಪಕ್ಷಕ್ಕೆ ವಿವಿಧ ಪಕ್ಷಗಳನ್ನು ತೊರೆದು ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ನೆಕ್ಕಂಟಿ ಯವರು ಗ್ರಾಮದ ಏಳಿಗೆಯನ್ನು ಉದ್ದೇಶಿಸಿ ಹಾಗೂ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಮತ ನೀಡಿ ಆಶೋತ್ತರಗಳನ್ನು ಈಡೇರಿಸಬೇಕೆಂದು ಗ್ರಾಮಸ್ಥರಲ್ಲಿ ಮನವಿ ಮಾಡಿಕೊಂಡರು. ಹಾಗು ಕೆ ಆರ್ ಪಿ ಪಕ್ಷದ ತಾಲೂಕು ಯುವ ಘಟಕ ಅಧ್ಯಕ್ಷರಾದ ಶ್ರೀ ಹನುಮನ ಗೌಡ ಹಟ್ಟಿ, ಶಿವು ಹಿರೇಮಠ ಅಭಿ, ಶಿವರಾಜ್,ಗೌಸ್ ಪಟೇಲ್ ಹಾಗೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ:ವೆಂಕಟೇಶ.ಹೆಚ್.ಬೂತಲದಿನ್ನಿ