ಬೆಳಗಾವಿ/ಅಥಣಿ:ಬಿಜೆಪಿ ಒಳ ಜಗಳದ ಲಾಭ ಪಡೆಯಲು ಮುಂದಾದ ಕಾಂಗ್ರೆಸ್ ರಾಜ್ಯದಲ್ಲಿ ಮುಂದೆ ನಡೆಯಲಿರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಕಾವು ಈಗಿನಿಂದಲೇ ಹೆಚ್ಚಾಗುತ್ತಿದ್ದು ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ರಾಜಕೀಯ ಪಕ್ಷಗಳು ತೊಡಗಿಕೊಂಡಿವೆ ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಜಿದ್ದಾಜಿದ್ದಿ ಹಾಗೂ
ರಾಜ್ಯ ರಾಜಕಾರಣದಲ್ಲಿ ತನ್ನದೇ ಮಹತ್ವ ಹೊಂದಿರುವ ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ.
ವಿಜಯಪುರ ಪೊಲೀಸ್ ಠಾಣೆಯಲ್ಲಿ ಸಿಪಿಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಸವರಾಜ ಬಿಸನಕೊಪ್ಪ ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ರಾಜಕಾರಣಕ್ಕೆ ಧುಮುಕಿದ್ದಾರೆ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿರುವ ಅವರು,ಈಗಾಗಲೇ ಕ್ಷೇತ್ರದಲ್ಲಿ ಸುತ್ತಾಟ ನಡೆಸಿದ್ದಾರೆ.
ಪಕ್ಕದ ರಾಯಬಾಗ ತಾಲೂಕಿನ ಸವಸುದ್ದಿ
ಗ್ರಾಮದವರಾದ ಬಸವರಾಜ ಬಿಸನಕೊಪ್ಪ ಅವರು ಪ್ರಬಲ ಪಂಚಮಸಾಲಿ ಸಮುದಾಯದವರು ಅಥಣಿ ಮತಕ್ಷೇತ್ರದಲ್ಲಿ ಪಂಚಮಸಾಲಿ ಮತಗಳು ಹೆಚ್ಚಿನ ಪ್ರಮಾಣದಲ್ಲಿ ಇದ್ದು,ಇವರ ಬೆನ್ನಿಗೆ ಯುವಕರ ತಂಡ ನಿಂತುಕೊಂಡಿದೆ ಸದ್ಯದ ಈ ಎಲ್ಲಾ ಬೆಳವಣಿಗೆಯಿಂದ ಅಥಣಿ ಚುನಾವಣಾ ಕಣ ರಂಗೇರಿದ್ದು, ಜನ ಯಾರಿಗೆ ಆಶಿರ್ವಾದ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಮಾಜಿ ಡಿಸಿಎಂ ಲಕ್ಷ್ಮಣ ಸವದಿ,ಶಾಸಕ ಮಹೇಶ್ ಕುಮಠಳ್ಳಿ ಅವರಂತಹ ಘಟಾನುಘಟಿ ರಾಜಕಾರಣಿಗಳನ್ನು ಹೊಂದಿರುವ ಅಥಣಿ ಕ್ಷೇತ್ರಕ್ಕೆ ಖಡಕ್ ಪೊಲೀಸ್ ಅಧಿಕಾರಿ ಸಿಂಗಂ ಎಂದೇ ಖ್ಯಾತಿ ಹೊಂದಿರುವ ಬಸವರಾಜ ಬಿಸನಕೊಪ್ಪ ಅಖಾಡಕ್ಕೆ ಇಳಿದಿದ್ದರಿಂದ ಚುನಾವಣೆ ಕಾವು ರಂಗೇರಿದೆ.
ಬಸವರಾಜ ಬಿಸನಕೊಪ್ಪ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಬೇಕೆಂದು ಹಲವು ನಾಯಕರು ಚಿಂತನೆ ನಡೆಸಿದ್ದಾರೆ ಪ್ರಬಲ ಲಿಂಗಾಯತ ಸಮುದಾಯದ ಹಾಗೂ ಯುವಕರ ಪಡೆ ರೈತರ ಬೆಂಬಲ ಇವರ ಬೆನ್ನಿಗೆ ಇರುವುದನ್ನು ಮನಗಂಡು ಕಾಂಗ್ರೆಸ್ ಈ ಲೆಕ್ಕಾಚಾರ ಹಾಕಿದೆ ಎಂಬ ಮಾತು ಕೇಳಿ ಬರುತ್ತಿದೆ ಸದ್ಯ ಕಾಂಗ್ರೆಸ್ ಪಕ್ಷದಲ್ಲಿ ಕ್ಷೇತ್ರದಲ್ಲಿ ಮುಖಂಡರು ಇದ್ದರು ಚುನಾವಣೆಗಳಲ್ಲಿ ಮತಗಳನ್ನು ಆಕರ್ಷಿಸುವ ಮಟ್ಟಿಗೆ ಬೆಳೆದಿಲ್ಲ ಎಂಬ ಮಾತು ನಾಯಕರಿಗೆ ಮನದಟ್ಟಾಗಿದೆ ಜೊತೆಗೆ ಪ್ರಬಲ ಲಿಂಗಾಯತ ಸಮುದಾಯದ ಮತಗಳನ್ನು ಕಾಂಗ್ರೆಸ್ ಯತ್ತ ಒಂದುಗೂಡಿಸಿ ಗೆಲುವು ಸಾಧಿಸುವ ಲೆಕ್ಕಾಚಾರ ಹಾಕಿರುವ ಜಿಲ್ಲಾ ನಾಯಕರು ಬಸವರಾಜ ಬಿಸನಕೊಪ್ಪ ಅವರಿಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ಆಹ್ವಾನ ನೀಡಿದ್ದಾರೆ ಎಂಬ ಸುದ್ದಿ ಸದ್ಯ ಗೌಪ್ಯವಾಗಿ ಉಳಿದಿಲ್ಲ ಜೊತೆಗೆ ದಕ್ಷ ಪೊಲೀಸ್ ಅಧಿಕಾರಿ ಬಸವರಾಜ ಬಿಸನಕೊಪ್ಪ ಅವರು ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಅವರ ಅಭಿಮಾನಿ ಬಳಗವು ಕೂಡಾ ಆಶಯವಾಗಿದೆ.
ಬಸವರಾಜ ಬಿಸನಕೊಪ್ಪ ಪರವಾಗಿ ತಂಡ ಕಟ್ಟಿಕೊಂಡ ಯುವಕರು ಖಡಕ್ ಹಾಗೂ ದಕ್ಷ ಪೊಲೀಸ್ ಅಧಿಕಾರಿ ಸಿಂಗಂ ಎಂದೇ ಕರೆಸಿಕೊಳ್ಳುವ ಬಸವರಾಜ ಬಿಸನಕೊಪ್ಪ ಪರ ಸಾವಿರಾರು ಯುವಕರು ಅಥಣಿ ಮತ ಕ್ಷೇತ್ರದಲ್ಲಿ ತಂಡವನ್ನು ಕಟ್ಟಿಕೊಂಡು ಸಮಾಜ ಸೇವೆ ಮಾಡುತ್ತಿದ್ದಾರೆ ವಿವಿಧ ಗ್ರಾಮಗಳಲ್ಲಿ ಸ್ವಯಂ ಕ್ರೀಡಾಕೂಟ ಆಯೋಜಿಸುವ ಮೂಲಕ ಪ್ರತಿಯೊಂದು ಹಳ್ಳಿಗಳಲ್ಲಿ ಕೂಡಾ ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ ಹಾಗೂ ಲಿಂಗಾಯತ ಸಮುದಾಯದ ಪ್ರಬಲ ಯುವ ಮುಖಂಡರು,ಬಸವರಾಜ ಬಿಸನಕೊಪ್ಪ ಪರ ಕ್ಷೇತ್ರದಲ್ಲಿ ರಾಜಕೀಯ ಅಲೆ ಎದ್ದಿರುವುದು ವಿಶೇಷ.
ಬಸವರಾಜ ಬಿಸನಕೊಪ್ಪ ಅವರ ಬೆನ್ನೆಲುಬಾಗಿ ಅಥಣಿ ಮತಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಹಾಗೂ ಯುವಕರ ಪಡೆಯನ್ನು ಕಟ್ಟುತ್ತಿರುವ ಸಿಂಗಂ.
ವರದಿ:ಎಸ್.ವಿಶ್ವನಾಥ