ಗದಗ:ಕರ್ನಾಟಕದಲ್ಲಿ ಕನ್ನಡ ಕಡ್ಡಾಯ ಮತ್ತು ಸಾರ್ವಭೌಮ, ಕರ್ನಾಟಕದಲ್ಲಿದ್ಧೂ ಕನ್ನಡವನ್ನ ಬಳಸದೇ ಇದ್ಧರೇ 5ರಿಂದ 20 ಸಾವಿರ ರೂಪಾಯಿ ಜುಲ್ಮಾನೆ ವಿಧಿಸುವ “ಕನ್ನಡ ಕಾಯ್ದೆ”ಯನ್ನು(ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ -2022)ವಿಧಾನ ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಿದ್ಧು ಕನ್ನಡತನದ ದಿಟ್ಟ ನಿಲುವಾಗಿದೆ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಅಂಗೀಕಾರ ಅಭಿನಂದನೀಯ ಕಾರ್ಯವಾಗಿದೆ ಎಂದು ಜನಪದ ಕಲಾವಿದ ಶ್ರೀ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ ಸ್ವಾಗತಿಸಿ ಸಂತಸ ವ್ಯಕ್ತಪಡಿಸಿದ್ಧಾರೆ.
ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಶಿಕ್ಷಣದಲ್ಲಿ ಮೀಸಲಾತಿ,ಸಾರ್ವಜನಿಕ ಉದ್ಯಮಗಳಲ್ಲಿ ಉದ್ಯೋಗ ಮೀಸಲಾತಿ,ನ್ಯಾಯಲಯಗಳಲ್ಲಿ ಕನ್ನಡದಲ್ಲಿ ಕಲಾಪ,ಕನ್ನಡದಲ್ಲೆ ತೀರ್ಪು ಪ್ರಕಟ,ಬ್ಯಾಂಕಗಳೂ ಸೇರಿದಂತೆ ಎಲ್ಲಾ ಖಾಸಗಿಯವರೂ ಕನ್ನಡದಲ್ಲೆ ಮಾತನಾಡಬೇಕು,ಖಾಸಗಿ ಕೈಗಾರಿಕಾ ವಲಯ ಸರ್ಕಾರ ನಿಗದಿ ಮಾಡಿದಷ್ಟು ಮೀಸಲಾತಿಯನ್ನು ಕನ್ನಡಿಗರಿಗೆ ನೀಡದೆ ಇದ್ಧರೇ ತೆರಿಗೆ ವಿನಾಯ್ತಿಗಳು ರದ್ಧು,ಮೊದಲಾದ ಅಂಶಗಳನ್ನು ಒಳಗೊಂಡ ವಿಧೇಯಕಕ್ಕೆ ವಿದ್ಯುಕ್ತವಾಗಿ ವಿಧಾನ ಪರಿಷತ್ ಒಪ್ಪಿಗೆ ನೀಡಿದ್ಧು ಐತಿಹಾಸಿಕ ಹೆಜ್ಜೆಯಾಗಿದೆ.
ಕಾಯ್ದೆಯ ಜಾರಿ ಸಮರ್ಪಕವಾಗಿ ಆಗುವಂತೆ ನೋಡಿಕೊಳ್ಳಲು ರಾಜಭಾಷಾ ಆಯೋಗ ಅಸ್ತಿತ್ವಕ್ಕೆ ತರುತ್ತಿರುವದು ಹೆಮ್ಮೆಯ ವಿಷಯ, ಕನ್ನಡಭಾಷೆ ಎಂದರೆ ಅದು ಜೀವನಾಡಿ, ಇತಿಹಾಸ ಹೊಂದಿದ ನಮ್ಮ ಭಾಷೆಗೆ ಹೆಚ್ಚಿನ ಮಹತ್ವ ದೊರೆಯಬೇಕು ಸರಕಾರದ ನಿಲುವಿಗೆ ಎಲ್ಲರು ಬದ್ಧರಾಗಿ ಒಲವನ್ನು ವ್ಯಕ್ತಪಡಿಸಿದ್ಧು ಶ್ಲಾಘನೀಯ .
ಕಾಯಿದೆ ಬಹುಬೇಗನೇ ಅನುಷ್ಠಾನಕ್ಕೆ ಬರಲಿ ನಾಡು ನುಡಿ ಜಲ ಸರಂಕ್ಷಣೆಗೆ ಮುಂದಾಗಲಿ ಕನ್ನಡದ ಸ್ವಾಭಿಮಾನದ ನೆಲದ ಝೈಂಕಾರ ಎಲ್ಲಡೆ ಮಾರ್ಧನಿಸಲಿ,ಪ್ರತಿಯೊಬ್ಬ ಕನ್ನಡಿಗರಲ್ಲೂ ಕನ್ನಡದ ನೀತಿ ಸಂವರ್ಧನೆಗೊಳ್ಳಲಿ ಸರಕಾರ ಕಾಯ್ದೆಯನ್ನು ಅಂಗೀಕರಿಸಿದ್ಧು ಸಂತೋಷವಾಗಿದೆ ,ಶೀಘ್ರವೇ ಕಾಯಿದೆ ಜಾರಿಗೆಯಾಗಲಿ ಎಂದು ಹಳ್ಳಿಕೇರಿಮಠ ಮೆಚ್ಚುಗೆ ವ್ಯಕ್ತಪಡಿಸಿದ್ಧಾರೆ.
-ಶ್ರೀಗವಿಶಿದ್ಧಯ್ಯ ಜ ಹಳ್ಳಿಕೇರಿಮಠ
ಜನಪದ ಕಲಾವಿದರು
ಜಂತಲಿ ಶಿರೂರು
ಗದಗ ಜಿಲ್ಲೆ