ಎತ್ತ ನೋಡಿದರತ್ತ ಕಾಣುತಿದೆ
ಕೋಮು-ದ್ವೇಷ,ಸ್ವಾರ್ಥಕೆ ಬಲಿಯಾಗಬೇಕೆ ಭಾರತ ದೇಶ
ಯಾಕೆ ಹೀಗಾಗುತಿದೆ,ಈ ದೇಶದಲ್ಲಿ?.
ಹೊತ್ತಿ ಉರಿಯುತಿದೆ,
ಕೋಮು ದಳ್ಳುರಿಯಲ್ಲಿ!
ಈ ದೇಶದಲ್ಲೀಗ ಮಾತೆತ್ತಿದರೆ
ಮುಷ್ಕರ,ತಲೆ ಎತ್ತಿದೆ ಬ್ರಷ್ಟಾಚಾರ,
ನಡೆಸಿಹರು ಸ್ವ-ಉದ್ಧಾರಕೆ
ಇವರು ಏನೆಲ್ಲ ಹುನ್ನಾರ!
ನಮ್ಮಲ್ಲಿಲ್ಲ ಒಕ್ಕಟ್ಟು,
ಉಂಟಾಗಿದೆ ಬಿಕ್ಕಟ್ಟು,
ಸೌಲಭ್ಯ ಪಡೆವ ನೆಪದಲ್ಲಿ
ಸಂವಿಧಾನ ಶಿಲ್ಪಿಗೆ,
ಸ್ವಜನರಿಂದಲೇ ಅಪಮಾನದ
ಸಂಕೋಲೆ,ನಡೆದಿದೆ
ಹಾಡುಹಗಲೆ ಅಮಾಯಕರ ಕಗ್ಗೊಲೆ, ಮಾನವೀಯತೆಗಿಲ್ಲ
ಇಲ್ಲಿ ಬೆಲೆ ಕಳೆದು ಕೊಂಡಿದೆ
ಅದು ತನ್ನ ನೆಲೆ,
ಎತ್ತ ನೋಡಿದರತ್ತ
ಕಾಣುತಿದೆ ಕೋಮು ದ್ವೇಷ,
ಹೀಗಾದರೆ ಆಗದಿರುವುದೇ,
ದೇಶ ನಾಶ?
ಬನ್ನಿ ಸೋದರರೇ ನಾವೆಲ್ಲ ಒಂದೆನ್ನಿ,ಸಾಮರಸ್ಯದ
ಸೂತ್ರವ ಜಾರಿಗೆ ತನ್ನಿ,
ಭಾವೈಕ್ಯತೆಯ ಮಂತ್ರ ನಮ್ಮದೆನ್ನಿ,
ಭಾರತಾಂಬೆ,ಕನ್ನಡಾoಬೆಗೆ
ಕೀರ್ತಿಯ ತನ್ನಿ
-ಶಿವಪ್ರಸಾದ್ ಹಾದಿಮನಿ.
ಕನ್ನಡ ಉಪನ್ಯಾಸಕರು,ಕೊಪ್ಪಳ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.