ಬೀದರ್:ಯುವ ಸಂಪತ್ತು ಬಲಿಷ್ಟವಾಗಲು ಅವರಲ್ಲಿ ನಾಯಕತ್ವ ಗುಣ ಅಗತ್ಯವಾಗಿರುವುದರ ಜೊತೆಗೆ ಕೌಶಲ್ಯ ತರಬೇತಿ ಸಹ ಅಗತ್ಯವಾಗಿದೆ ಎಂದು ಬಾಪು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಕಾಶಿನಾಥ ಪಾಟೀಲ ತಿಳಿಸಿದರು.
ಇತ್ತಿಚೀಗೆ ಭಾರತ ಸರಕಾರದ ನೆಹರು ಯುವ ಕೇಂದ್ರ, ರೈಜಿಂಗ್ ಹ್ಯಾಂಡ್ಸ್ ಯುವ ನಗರ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಗಳ ಸಹಯೋಗದಲ್ಲಿ ಜರುಗಿದ ಯುವ ಮುಂದಾಳತ್ವ ಹಾಗೂ ಸಮುದಾಯ ಅಭಿವೃದ್ಧಿ ತರಬೇತಿ ಶಿಬಿರದ ಸಮಾರೋಪ ಉದ್ದೇಶಿಸಿ ಮಾತನಾಡಿದ ಅವರು,ಯುವ ಸಂಪತ್ತು ಇರುವ ವಿಶ್ವದ ಏಕೈಕ ರಾಷ್ಟ್ರ ಭಾರತವಾಗಿದ್ದು,
ಇತ್ತಿಚೀನ ದಿನಮಾನದಲ್ಲಿ ದುಷ್ಟಟಗಳು ಹಾಗೂ ವಿದೇಶಿ ಜೀವನಕ್ಕೆ ವ್ಯಾಮೋಹಪಟ್ಟು ಅರ್ಥವಲ್ಲದ ಬದುಕಿಗೆ ಮುನ್ನುಗ್ಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದರು.
ಇಂದು ಮನುಷ್ಯನಿಗೆ ಹಸಿವು,ನೀರಡಿಕೆ ದಣಿವಾರಿಸಿಕೊಳ್ಳುವುದು ಎಷ್ಟು ಮುಖ್ಯವೋ ಸಂಸ್ಕಾರ,ಸಂಸ್ಕೃತಿ,ಆಚಾರ,ವಿಚಾರ ಹಾಗೂ ಆತ್ಮಗೌರವ ಅಷ್ಟೇ ಮುಖ್ಯವಾಗಿದೆ.ಈ ನಿಟ್ಟಿನಲ್ಲಿ ಇಂಥ ತರಬೇತಿಗಳಲ್ಲಿ ಯುವಜನತೆ ಭಾಗವಹಿಸಿ ಇಲ್ಲಿ ನೀಡುವ ತರಬೇತಿಯ ಸಂಪೂರ್ಣ ಲಾಭ ಪಡೆದುಕೊಳ್ಳುವಂತೆ ಕಿವಿ ಮಾತು ಹೇಳಿದರು.
ರಾಜ್ಯಯುವ ಪ್ರಶಸ್ತಿ ಪುರಸ್ಕೃತರು ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಮಾತನಾಡಿ, ಇಂದು
ಯುವನಾಯಕತ್ವದ ಕೊರತೆಯಿಂದ ಅನಕ್ಷರಸ್ಥ ಹಾಗೂ ನಿರಂಕುಶ ರಾಜಕಾರಣ ಹೆಚ್ಚಾಗುತ್ತಿದೆ. ಅವರಿಗೆ ದೇಶಭಕ್ತಿ ಹಾಗೂ ರಾಷ್ಟ್ರಾಭಿವೃದ್ಧಿ ಮುಖ್ಯವಾಗಿರದೆ ರಾಜಕಾರಣಕ್ಕೆ ಬಂದು ದೇಶದ ಸಂಪತ್ತು ಕೊಳ್ಳೆಹೊಡೆಯುವುದೇ ಮೂಲ ಗುರಿ. ಇಂಥ ದರಿದ್ರತನ ದೂರವಾಗಬೇಕಾದರೆ ಪದವೀಧರ ಹಾಗೂ ಸಜ್ಜನ ಯುವಜನರು ರಾಜಕೀಯಕ್ಕೆ ಬರಬೇಕು,ದೇಶದ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಮುಂದಾಗಬೇಕೆಂದು ಕರೆ ನೀಡಿದರು.
ರಾಜ್ಯ ಸಂಪನ್ಮೂಲವ್ಯಕ್ತಿಡಾ.ಲಕ್ಕಿ ಪ್ರಥ್ವಿರಾಜ ಮಾತನಾಡಿ, ಇಂದು ಯುವ ಸಂಪತ್ತು ಗಟ್ಟಿಗೊಳ್ಳಲು ಅವರಲ್ಲಿ ಪರಿಸರ ಪ್ರಜ್ಞೆ ಅಗತ್ಯವಾಗಿದೆ.ದೇಶದ ಸಂನ್ಮೂಲ ರಕ್ಷಣೆ ಹಾಗೂ ವಿದೇಶಿ ವ್ಯಾಮೋಹಕ್ಕೆ ಧಿಕ್ಕರಿಸುವ ಮನೋಭಾವನಮ್ಮಲ್ಲಿ ಬರಬೇಕಾಗಿದೆ ಎಂದರು.ಮಕ್ಕಳ ರಕ್ಷಣಾ ಘಟಕದ ಅಧಿಕಾರಿಶಾರದಾ ಕಲಮಾಳಕ, ಸಹಾಯಕ ತೋಟಗಾರಿಕೆ ಇಲಾಖೆಯ ಅಧಿಕಾರಿ ಸಂಜೀವಕುಮಾರ, ವಿಶ್ವಧಾಮ ಸಂಸ್ಥೆಯ ಅಧ್ಯಕ್ಷ ಡಾ.ಅಂಕುರ, ರೋಟಿ ಕ್ಲಬ್‌ನ ರಾಜಕುಮಾರ ಅಳ್ಳೆ ಸೇರಿದಂತೆ ಇತರರು ವೇದಿಕೆಯಲ್ಲಿದ್ದರು.