ಪುತ್ತೂರು , ಫೆಬ್ರವರಿ ೨೪ :ಸಿ.ಎಸ್.ಸಿ-ವಿ.ಎಲ್.ಈ ಗಳ ದ.ಕ. ಜಿಲ್ಲಾ ಮಟ್ಟದ ಕಾರ್ಯಾಗಾರವು
ಇಲ್ಲಿನ ತಾಲೂಕು ಕಚೇರಿಯ ಸಭಾಂಗಣದಲ್ಲಿ ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು ಸಭೆಯ ಅಧ್ಯಕ್ಷತೆಯನ್ನು ಸಿ ಎಸ್ ಸಿ ರಾಜ್ಯ ಮುಖ್ಯಸ್ಥ ಶ್ರೀ ವಿಭಾಸ್ ವಹಿಸಿದ್ದರು, ಎಲ್ಲ ವಿ.ಎಲ್.ಈ. ಗಳಿಗೆ ಶುಭಕೋರಿ ಕಾರ್ಯಕ್ರಮದ ಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕಾಗಿ ವಿನಂತಿಸಿದರು ಇನ್ನೊಮ್ಮೆ ರಾಜ್ಯ ಮುಖ್ಯಸ್ಥ ಶ್ರೀಕಿರಣ್ ರವರು ಸಿ ಎಸ್ ಸಿ ಯಿಂದ ಕೊಡಲಾಗುವ ನೂರಾರು ಸೇವೆಗಳ ಬಗ್ಗೆ ಪೂರ್ಣ ಮಾಹಿತಿ ನೀಡಿದರು ತಾಲೂಕು ಪಂಚಾಯತ್ ಬಿ ಓ ಶ್ರೀಮತಿ ಶೈಲಜಾ ರವರು ಡಿಜಿಟಲ್ ಇಂಡಿಯಾದ ಪ್ರಾಮುಖ್ಯತೆಯ ಬಗ್ಗೆ ವಿವರಿಸುತ್ತಾ ಕಳೆದ ಹತ್ತು ವರ್ಷಗಳ ಹಿಂದೆಗೆ ಹೋಲಿಸಿದರೆ ಊಹಿಸಲು ಅಸಾದ್ಯದಷ್ಟು ಬದಲಾವಣೆ ಆಗಿದೆ. ಎಲ್ಲ ಕ್ಷೇತ್ರದಲ್ಲಿ ಡಿಜಿಟಲ್ ಇಂಡಿಯಾ ಛಾಪು ಮೂಡಿಸಿದೆ ಎಂದು ತಿಳಿಸಿದರು.ಶ್ರೀಕಿರಣ್ ರವರು ಗ್ರಾಮೀಣ ಈ ಸ್ಟೋರ್ ಬಗ್ಗೆ ಉಪಯುಕ್ತ ಮಾಹಿತಿ ನೀಡುತ್ತಾ ಇವತ್ತು ಸಿ.ಎಸ್.ಸಿ ಗ್ರಾಮೀಣ್ ಸ್ಟೋರ್ ಮೂಲಕ ರೆನಾಲ್ಟ್ ಕಾರ್ ಕೂಡ ಬುಕ್ ಮಾಡುವ ಅವಕಾಶ ಕಲ್ಪಿಸಿದೆ ಹಾಗುೂ ಸಾವಿರಾರು ಗೃಹ ಉಪಯೋಗಿ ವಸ್ತು, ಉಪಕರಣಗಳನ್ನು ಬುಕ್ ಮಾಡಿ ಮನೆಗೆ ತರಿಸಿಕೊಳ್ಳಬಹುದು ಎಂಬ ಮಾಹಿತಿಯನ್ನು ಹಂಚಿಕೊಂಡರು ಹಾಗೂ ಗ್ರಾಮೀಣ e ಸ್ಟೋರ್ ಆಪ್ ನ್ನು ಡೌನ್ ಲೋಡ್ ಮಾಡಲು ನಿರ್ದೇಶಿಸಿದರು.ಶ್ರೀ ಶೈಲೇಂದ್ರ ರವರು ಬ್ಯಾಂಕಿಂಗ್ ಬಗ್ಗೆ ಮಾಹಿತಿ ಕೊಡುತ್ತ ಡಿಜಿ ಪೇ ಲೈಟ್ ಬಗ್ಗೆ ಪ್ರೆಸೆಂಟೇಷನ್ ನೀಡಿದರು. ಶ್ರೀ ಬಾಲಕೃಷ್ಣರವರು ರೆನಾಲ್ಟ್ ಕಾರ್ ನ ವಿವಿಧ ಮಾಡೆಲ್ ಗಳಬಗ್ಗೆ ಪ್ರೆಸೆಂಟೇಷನ್ ನೀಡಿದರು.ದ.ಕ ಜಿಲ್ಲಾ ಡಿ ಎಂ ಶ್ರೀ ಗೋವರ್ಧನ್ ರವರು ಕಾರ್ಯಾಗಾರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿ ಎಲ್ ಈ ಗಳು ಭಾಗವಹಿಸಿದುದಕ್ಕೆ ಸಂತೋಷ ವ್ಯಕ್ತ ಪಡಿಸಿದರು ಮತ್ತು ಸಿ ಎಸ್ ಸಿ ವಿ ಎಲ್ ಈ ಗಳಿಗೆ ತನ್ನ ಬೆಂಬಲವನ್ನು ವ್ಯಕ್ತ ಪಡಿಸಿದರು. ವಿ ಎಲ್ ಈ ಸೊಸೈಟಿಯ ಅಧ್ಯಕ್ಷ ಶ್ರೀ ರೋಹಿತ್ ಕುಮಾರ್ , ಕೋಶಾಧಿಕಾರಿ ಶ್ರೀ ನವೀನ್ ವೇದಿಕೆಯಮೇಲೆ ಉಪಸ್ಥಿತರಿದ್ದರು ಕಾರ್ಯದರ್ಶಿ ಶ್ರೀ.ಅಬೂಬಕರ್ ರವರು ಕಾರ್ಯಕ್ರಮ ನಿರೂಪಿಸಿದರು.
ವರದಿ:ಚಂದ್ರಶೇಖರ ಹೆಬ್ಬಾರ್ ಕೊಲ್ಯ