ಮುದ್ದೇಬಿಹಾಳ:೭೪.೮೭ ಲಕ್ಷ ವೆಚ್ಚದ ಸಿಸಿ ರಸ್ತೆ ಚರಂಡಿ ಕಾಮಗಾರಿಗಳಿಗೆ ಭೂಮಿ ಪೂಜೆಗೆ ಚಾಲನೆ ನೀಡಿದ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ
ಹಿರೇಮುರಾಳ ಗ್ರಾಮದಲ್ಲಿ ಅಂದಾಜು ೭೪.೮೭ ಲಕ್ಷ ವೆಚ್ಚದ ಸಿಸಿ ರಸ್ತೆ ಚರಂಡಿ ಕಾಮಗಾರಿಗಳಿಗೆ ಭೂಮಿ ಪೂಜೆ ಚಾಲನೆ ನೀಡಿ ನಂತರ
ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು
ಅಭಿವೃದ್ಧಿಪರ ಇರುವವರೆಗೆ ಬೆಂಬಲ ನೀಡಿದರೆ ಸಾಕಷ್ಟು ಸುಧಾರಣೆ ಆಗುತ್ತದೆ ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದಲ್ಲಿ ಆಗಿರುವ ಬದಲಾವಣೆ ಅಭಿವೃದ್ಧಿ ಕೆಲಸಗಳೇ ಉದಾಹರಣೆಯಾಗಿವೆ. ನಾನು ಜನರ ಪರವಾಗಿ ಜನರಿಗೋಸ್ಕರ ಕೆಲಸ ಮಾಡುವಂಥವನು, 2018ರಲ್ಲಿ ನನ್ನನ್ನು ಶಾಸಕರಾಗಿ ಆಯ್ಕೆ ಮಾಡಿದ ಮೇಲೆ ಎಲ್ಲಾ ರೈತರನ್ನು ಕರೆದುಕೊಂಡು ಮುದ್ದೇವಾಳದಿಂದ ಆಲಮಟ್ಟಿ ವರೆಗೆ ಪಾದಯಾತ್ರೆ ಮಾಡಿ ಎಲ್ಲಾ ಕ್ಯಾನಲ್ಗಳಿಗೆ ನೀರು ಬರುವಂತೆ ಕೆಲಸವನ್ನು ಮಾಡಿದ್ದೇನೆ ಪ್ರತಿಯೊಬ್ಬ ಕೂಲಿ ಕಾರ್ಮಿಕ ಹೆಣ್ಣುಮಕ್ಕಳಿಗೆ ನೇರವಾಗಿ ಒಂದು ಸಾವಿರ ಅವರ ಖಾತೆಗೆ ಹಾಕುವಂತ ವ್ಯವಸ್ಥೆ ಮಾಡುತ್ತೇವೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸಂಬಳ ಹೆಚ್ಚು ಮಾಡುವಂತದ್ದು ಅನೇಕ ಯೋಜನೆಗಳು ಮಾಡುತ್ತೇವೆ ಎಂದು ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಸ್ ಪಾಟೀಲ್ ನಡಹಳ್ಳಿ ಹೇಳಿದರು ಈ ಸಂದರ್ಭದಲ್ಲಿ ಹಿರೇಮುರಾಳ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ
ಇಮಾಂಬು ಪೀರ್ ಸಾಬ್ ಮುಲ್ಲಾ ಬಿಜೆಪಿ ಮುಖಂಡರಾದ ನಿವೃತ್ತಿ ಇಂಜಿನಿಯರ್
ಬಿ.ಬಿ ಪಾಟೀಲ್
ನಿಂಗಣ್ಣ ರಾಮವಾಡಗಿ
ಅಪ್ಪು ಧನ್ನೂರ್
ಬಸವರಾಜ್ ಸರೂರ್ ಸೋಮನಗೌಡ
ಹಿರೇಮುರಾಳ ಪಿ.ಡಿ.ಓ
ಕೆ.ಎಚ್ ಕುಂಬಾರ್
ಹಿರೇಮುರಾಳ ಗ್ರಾಮಸ್ಥರು ಗಣ್ಯರು ಉಪಸ್ಥಿತರಿದ್ದರು
ವರದಿ ವಿಜಯಕುಮಾರ ವಿ ಹಿರೇಮುರಾಳ