ವಿಜಯಪುರ:ಬಬಲಾದ ಜಿನುಗು ಕೆರೆಯು ಸಂಪೂರ್ಣವಾಗಿ ಒಣಗಿ ಹೋಗಿದ್ದು ಪಶು, ಪಕ್ಷಿ, ದನ, ಕರುಗಳಿಗೆ, ಕುಡಿಯಲು ಒಂದು ಹನಿ ನೀರು ಸಿಗುತ್ತಿಲ್ಲ ದಿನದಿಂದ ದಿನಕ್ಕೆ ಬೇಸಿಗೆಯ ಬಿಸಿಲು ಹೆಚ್ಚಾಗುತ್ತಾ ಹೊರಟಿದ್ದು ಕುಡಿಯಲು ಸಹ ನೀರು ಸಿಗುತ್ತಿಲ್ಲವೆಂದರೆ ಇಲ್ಲಿ ಬದುಕುವುದು ಹೇಗೆ ನಮಗೆ ಈಗ ಬೆಳೆಗಳಿಗೆ ನೀರು ಬೇಕಾಗಿಲ್ಲ ಆದರೆ ದನಕರುಗಳಿಗೆ ಕುಡಿಯಲು ನೀರು ಸಿಕ್ಕರೆ ಸಾಕು ಎನ್ನುವಂತಾಗಿದೆ ಈಗಾಗಲೇ ಈ ವಿಷಯ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು ಯಾರು ಇತ್ತ ಕಡೆ ಗಮನ ಹರಿಸುತ್ತಿಲ್ಲ, ನೂರಾರು ಜನ ರೈತರು ಕಡು ಬಿಸಿಲಲ್ಲಿ ಧರಣಿ ಕುಳಿತುಕೊಂಡಿದ್ದಾರೆ ಇವರ ಪರಸ್ಥಿತಿ ಕೇಳುವವರು ಯಾರಿದ್ದಾರೆ ಎಂಬ ಯಕ್ಷ ಪ್ರಶ್ನೆಯಾಗಿದೆ. ಸಂಬಂಧಿಸಿದ ಅಧಿಕಾರಿಗಳು ಇದರ ಕಡೆ ಗಮನ ಹರಿಸದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಯಲಗೊಂಡ ಪೂಜಾರಿ, ಸಿದ್ದರಾಯಗೌಡ ಬಿರಾದಾರ, ಎಸಣಗೌಡ ಬಿರಾದಾರ, ರಾಜುಗೌಡ ಬಿರಾದಾರ, ಅಣ್ಣರಾಯಗೌಡ ಬಿರಾದಾರ, ಮಹಾದೇವ ಅಡಕೆಗೋಳ ರಾಜುಗೌಡ ಪಾಟೀಲ ಇನ್ನು ಅನೇಕರು ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಯಲಗೊಂಡ ಪೂಜಾರಿಯವರು ಮಾತನಾಡಿದರು.
ವರದಿ:ಅರವಿಂದ್ ಕಾಂಬಳೆ