ರಾಯಚೂರು:ಸಿಂಧನೂರಿಂದ ರಾಯಚೂರವರೆಗೆ ಹೋಗುವ ಮುಖ್ಯ ರಸ್ತೆಯ ಅಕ್ಕಪಕ್ಕದಲ್ಲಿ ಮತ್ತೆ ಯಾರೋ ಕಿಡಿಗೇಡಿಗಳು ಧೂಮಪಾನ ಮಾಡಿರುವುದರಿಂದ ಸುಮಾರು ಸಸಿಗಳು ಸುಟ್ಟ ಕರುಕಲಾಗಿವೆ.ಇದನ್ನು ತಿಳಿದ ವನಸಿರಿ ಫೌಂಡೇಶನ್ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ ಅವರು ಧೂಮಪಾನ ಮಾಡಿ ಕಡ್ಡಿಯನ್ನು ಎಸೆಯುವ ವ್ಯಕ್ತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಯಚೂರು ಜಿಲ್ಲೆಯಲ್ಲಿ ಬಿರು ಬೇಸಿಗೆಯಲ್ಲಿ ಸಸಿಗಳು ನೀರಿಲ್ಲದೆ ಒಣಗುತ್ತಿರುವುದು ಒಂದು ಕಡೆಯಾದರೆ ಧೂಮಪಾನ ಮಾಡುವ ಕೆಲವು ವ್ಯಕ್ತಿಗಳು ಧೂಮಪಾನ ಮಾಡಿ ಬೆಂಕಿಕಡ್ಡಿಯನ್ನು ಕೂಡಾ ಸಸಿಗಳ ಹತ್ತಿರ ಎಸೆದಿರುವ ಘಟನೆಗಳು ಇತ್ತೀಚೆಗೆ ಹೆಚ್ಚು ನಡೆಯುತ್ತಿವೆ.
ಈಗಾಗಲೇ ಬೇಸಿಗೆ ಕಾಲ ಶುರುವಾಗಿದೆ ಬಹಳಷ್ಟು ರಸ್ತೆಯ ಬದಿಯಲ್ಲಿ ಸಸಿಗಳು ಹೆಚ್ಚಾಗಿ ಸುಡುತ್ತಿರುವುದು ಇದಕ್ಕೆ ಕಾರಣ ರಸ್ತೆಯಲ್ಲಿ ಬೈಕನಲ್ಲಿ,ವಾಹನಗಳಲ್ಲಿ ಸವಾರಿ ಮಾಡುವಾಗ ಧೂಮಪಾನ ಮಾಡಿ ಬೆಂಕಿಯನ್ನು ಎಸೆಯುವ
ವ್ಯಕ್ತಿಗಳೇ ಇದಕ್ಕೆ ನೇರ ಕಾರಣ ದಯವಿಟ್ಟು ಸಾರ್ವಜನಿಕರಲ್ಲಿ ಮಾನವಿ ಮಾಡಿಕೊಳ್ಳುತ್ತೇವೆ ಪರಿಸರ ಇದ್ದರೇನೆ ನಾವು ಜೀವಿಸಲಿಕ್ಕೆ ಸಾದ್ಯವಿಲ್ಲ ನೀವು ಆರೋಗ್ಯಕ್ಕೆ ಹಾನಿಕರವಾದಂತಹ ಸಿಗರೇಟು, ಬೀಡಿ,ಇನ್ನಿತರ ಧೂಮಪಾನ ವಸ್ತುಗಳನ್ನು ಸೇವನೆ ಮಾಡುವಾಗ ನೀವು ಹಚ್ಚಿದ ಬೆಂಕಿಯನ್ನು ಆರಿಸಿ ಎಸೆಯಿರಿ.ನಮ್ಮ ನಿಮ್ಮ ಚಟಗಳಿಗೋಸ್ಕರ ಪರಿಸರಕ್ಕೆ ಹಾನಿ ಮಾಡಬೇಡಿ,ಈಗಾಗಲೇ ಮಸ್ಕಿ ತಾಲೂಕಿನ ಗುಡ್ಡಗಾಡು ಪ್ರದೇಶದಲ್ಲಿ ಹಾಗೂ ಇನ್ನಿತರ ಸ್ಥಳಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಗಿಡ ಸುಟ್ಟಿರುವುದು ಕಂಡುಬರುತ್ತಿವೆ ಬೇಸಿಗೆ ಕೂಡಾ ಹೆಚ್ಚಾಗುತ್ತಿರುವುದರಿಂದ ನಾವು ನಿಮ್ಮಲ್ಲಿ ಅತ್ಯಂತ ಕಳಕಳಿಯಿಂದ ಮನವಿ ಮಾಡಿಕೊಳ್ಳುತ್ತೇವೆ ಧೂಮಪಾನ ಮಾಡುವ ವ್ಯಕ್ತಿಗಳು ಧೂಮಪಾನ ಮಾಡಿದ ನಂತರ ಬೆಂಕಿಯನ್ನು ಆರಿಸಿ ಎಸೆಯಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ಅಮರೇಗೌಡ ಮಲ್ಲಾಪೂರ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗಿಡಗಳಿಗೆ ಬೆಂಕಿ ತಗುಲಿದ್ದನ್ನು ವನಸಿರಿ ತಂಡ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ನೀರು ಹಾಕಿ ಆರಿಸಲು ಮುಂದಾದರು.
ಈ ಸಂದರ್ಭದಲ್ಲಿ ವನಸಿರಿ ತಂಡದ ಸದಸ್ಯರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.